twitter
    For Quick Alerts
    ALLOW NOTIFICATIONS  
    For Daily Alerts

    'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?

    |

    'ತಾಜ್‌ ಮಹಲ್' ಸಿನಿಮಾ ಯಶಸ್ಸಿನ ನಂತರ 'ಪ್ರೇಮ್ ಕಹಾನಿ' ಸೋಲು ಕಂಡಿತ್ತು. ಎರಡನೇ ಚಿತ್ರದ ಸೋಲಿನ ಬಳಿಕ ತೀರಾ ಬೇಸರಗೊಂಡಿದ್ದ ಚಂದ್ರು ಊರಿಗೆ ಹೋಗ್ಬಿಡೋಣ ಎಂಬ ಆಲೋಚನೆ ಸಹ ಮಾಡಿಬಿಟ್ಟಿದ್ದರು. ಆದ್ರೆ, ಧೃತಿಗೆಡದ ಚಂದ್ರು ಮೈಲಾರಿ ಸ್ಕ್ರಿಪ್ಟ್ ಕೈಗೆತ್ತಿಕೊಂಡರು.

    ಮೈಲಾರಿ ಕಥೆ ಹೇಳ್ಕೊಂಡು ಕೆಲವು ನಿರ್ಮಾಪಕರ ಬಳಿ ಹೋದರು, ಅವರು ಮುಂದೆ ಬರಲಿಲ್ಲ. ಆಗ ಚಂದ್ರು ಕೈಹಿಡಿದಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣನಿಗೆ ಈ ಕಥೆ ಸೂಕ್ತ ಎಂದು ನಿರ್ಧರಿಸಿ ಕಥೆ ಹೇಳೋಣ ಎಂದು ಫೋನ್ ನಂಬರ್ ತಗೊಂಡ ಚಂದ್ರು ಕಾಲ್ ಮಾಡಿದರು. ಮುಂದೆ ಓದಿ....

    ಸುನೀಲ್ ರಾವ್ ಮಾಡಬೇಕಿದ್ದ 'ತಾಜ್‌ಮಹಲ್' ಅಜಯ್ ರಾವ್ ಕೈ ಸೇರಿದ್ದೇಗೆ?ಸುನೀಲ್ ರಾವ್ ಮಾಡಬೇಕಿದ್ದ 'ತಾಜ್‌ಮಹಲ್' ಅಜಯ್ ರಾವ್ ಕೈ ಸೇರಿದ್ದೇಗೆ?

    ಶಿವಣ್ಣ..., ನಾನು ತಾಜ್ ಮಹಲ್ ನಿರ್ದೇಶಕ....

    ಶಿವಣ್ಣ..., ನಾನು ತಾಜ್ ಮಹಲ್ ನಿರ್ದೇಶಕ....

    ಶಿವಣ್ಣ ಅವರಿಗೆ ಫೋನ್ ಮಾಡಿದ್ದ ಚಂದ್ರು ''ಶಿವಣ್ಣ, ನಾನು ತಾಜ್ ಮಹಲ್ ಡೈರೆಕ್ಟರ್, ಒಂದು ಕಥೆ ಹೇಳ್ಬೇಕಿತ್ತು'' ಅಂದ್ರು. ಅದಕ್ಕೆ ಪ್ರತಿಕ್ರಿಯಿಸಿದ ಸೆಂಚುರಿ ಸ್ಟಾರ್ ''ಓಹ್‌,,,,,ಡೈರೆಕ್ಟರ್ರೆ ಸರಿ ಮನೆಗೆ ಬಾ'' ಅಂತ ಆಹ್ವಾನ ನೀಡಿದರಂತೆ. ಮರುದಿನ ಶಿವಣ್ಣ ಮನೆಗೆ ಹೋಗಿ ಕಥೆ ಹೇಳಲಾಯಿತು. ಮೈಲಾರಿ ಕಥೆಗೆ ಅಣ್ಣಾವ್ರು ಮಗ ಫಿದಾ ಆದರು ಎಂದು ಚಂದ್ರು ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹೇಳಿಕೊಂಡಿದ್ದಾರೆ.

    'ಜೋಗಿ' ಕಾರ್ಯಕ್ರಮ ನೋಡಿದ್ಮೇಲೆ ಸಂಕಲ್ಪ ಮಾಡಿದ್ದೆ

    'ಜೋಗಿ' ಕಾರ್ಯಕ್ರಮ ನೋಡಿದ್ಮೇಲೆ ಸಂಕಲ್ಪ ಮಾಡಿದ್ದೆ

    'ಜೋಗಿ ಸಿನಿಮಾ 100ನೇ ದಿನ ಕಾರ್ಯಕ್ರಮ ಮಾಡಿದಾಗ ನಾನು ಹೋಗಿದ್ದೆ. ಪೊಲೀಸರಿಂದ ಲಾಠಿ ಏಟು ತಿಂದು ಹೋಗಿದ್ದೆ. ಶಿವಣ್ಣ-ಪ್ರೇಮ್ ಅವರನ್ನು ಆ ವೇದಿಕೆಯಲ್ಲಿ ನೋಡಿದ ನಾನು, ಶಿವಣ್ಣನ ಜೊತೆ ಇಂತಹದೊಂದು ಸಿನಿಮಾ ಮಾಡ್ಬೇಕು, ಜನರು ನನ್ನನ್ನು ಚಂದ್ರು ಚಂದ್ರು ಅಂತ ಕೂಗಬೇಕು ಎಂದು ಮನಸ್ಸಿನಲ್ಲಿ ಒಂದು ಸಂಕಲ್ಪ ಮಾಡಿಕೊಂಡೆ' ಎಂದು ಸ್ಮರಿಸಿದ ಚಂದ್ರು, ಶಿವರಾಜ್ ಕುಮಾರ್ ಮನೆಗೆ ಹೋದ್ಮೇಲೆ ಆ ಕ್ಷಣ ನೆನಪಿಸಿಕೊಂಡಿದ್ದರಂತೆ.

    'ಪ್ರೇಮ್ ಕಹಾನಿ' ಸೋಲು ಕಲಿಸಿದ ಬದುಕಿನ ಪಾಠ: 'ಕಾರ್ ಇದೆ, ಪೆಟ್ರೋಲ್‌ಗೆ ದುಡ್ಡಿಲ್ಲ''ಪ್ರೇಮ್ ಕಹಾನಿ' ಸೋಲು ಕಲಿಸಿದ ಬದುಕಿನ ಪಾಠ: 'ಕಾರ್ ಇದೆ, ಪೆಟ್ರೋಲ್‌ಗೆ ದುಡ್ಡಿಲ್ಲ'

    'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟಿದ್ದ ನಿರ್ಮಾಪಕ ಆರ್‌ಎಸ್

    'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟಿದ್ದ ನಿರ್ಮಾಪಕ ಆರ್‌ಎಸ್

    'ಕಥೆ ಕೇಳಿದ ಶಿವಣ್ಣ ಕೆಪಿ ಶ್ರೀಕಾಂತ್ ಅವರ ಮೂಲಕ ಕನಕಪುರ ಶ್ರೀನಿವಾಸ್ ಅವರನ್ನು ಭೇಟಿ ಮಾಡಲು ಹೇಳಿದರು. ಕನಕಪುರಕ್ಕೆ ಹೋಗಿ ನಿರ್ಮಾಪಕರ ಬಳಿ ಕಥೆ ಹೇಳಿದೆ. ಸುಮಾರು 2 ಗಂಟೆ 20 ನಿಮಿಷ ಕಥೆ ಹೇಳಿದೆ. ಕೊನೆಯಲ್ಲಿ ನಿರ್ಮಾಪಕರು ಕಣ್ಣೀರಿಟ್ಟರು. ತಂದೆ-ಮಗನ ಸೆಂಟಿಮೆಂಟ್ ಅವರ ಹೃದಯ ಮುಟ್ಟಿತ್ತು. ಅಡ್ವಾನ್ಸ್ ಸಹ ಕೊಟ್ಟರು'. - ಆರ್ ಚಂದ್ರು

    Recommended Video

    DIRECTORS DIARY : ಪ್ರಶಾಂತ್ ನೀಲ್ KGF ಮಾಡಿದ್ದಾರೆ ಅಂದ್ರೆ ನನ್ ಕಯ್ಯಲ್ಲಿ ಆಗಲ್ವ | Filmibeat Kannada
    ದೊಡ್ಡ ಹಿಟ್ ಆಯ್ತು, ದೊಡ್ಡ ಸಕ್ಸಸ್ ಸಂಭ್ರಮಿಸಿದ್ವಿ

    ದೊಡ್ಡ ಹಿಟ್ ಆಯ್ತು, ದೊಡ್ಡ ಸಕ್ಸಸ್ ಸಂಭ್ರಮಿಸಿದ್ವಿ

    ''ಕಥೆ ಓಕೆ ಆಗ್ತಿದ್ದಂತೆ ಅಡ್ವಾನ್ಸ್ ಅಂತ ಹೇಳಿ 6 ಲಕ್ಷ ಕೊಟ್ಟರು. ಈ ಹಣದಿಂದ ನನ್ನ ಎಲ್ಲ ಕಷ್ಟಗಳನ್ನು ತೀರಿಸಿಕೊಂಡೆ. ಶಿವರಾಜ್ ಕುಮಾರ್ ರೂಪದಲ್ಲಿ ದೇವರ ಕೈ ಹಿಡಿದ ಎಂದು ಭಾವಿಸಿದೆ. ಸಿನಿಮಾ ಮಾಡಿದ್ವಿ, ದೊಡ್ಡ ಹಿಟ್ ಆಯ್ತು. ಹುಬ್ಬಳ್ಳಿಯಲ್ಲಿ ಸಕ್ಸಸ್ ಕಾರ್ಯಕ್ರಮ ಸಹ ಮಾಡಿದ್ವಿ. ಆ ವೇದಿಕೆಯಲ್ಲಿ ಮುಂದಿನ ಚಿತ್ರದ ನಿರ್ಮಾಪಕ ಬಂಗಾರದ ಕಡಗ ಗಿಫ್ಟ್ ಮಾಡಿದರು'' ಎಂದು ಚಂದ್ರು ಸ್ಮರಿಸಿಕೊಂಡರು.

    English summary
    Director R Chandru shares Interesting story behind Mylari movie Making with filmibeat director dairy.
    Thursday, October 1, 2020, 14:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X