ಸಿಗರೇಟು ಸೇದ್ಬೇಡಿ ಪ್ರೀತಿ ಮಾಡ್ಬೇಡಿ: ನಾಗಶೇಖರ್
ಚಲನಚಿತ್ರ ನಿರ್ದೇಶಕ ನಾಗಶೇಖರ್ ಅವರು 'ಮೈನಾ' ಸಿನಿಮಾ ಆದಮೇಲೆ ಪ್ರೀತೀಲಿ ಬಿದ್ದಿದ್ದಾರೆ. ಹುಡ್ಗಿ ಕೈಕೊಟ್ಟಿದ್ದಾಳೆ. ಹುಡ್ಗಿ ಹೇಳ್ದೇ ಕೇಳ್ದೇ ಕೈಕೊಟ್ಟಿದ್ದಕ್ಕೆ ಸಿಕ್ಕಾಪಟ್ಟೆ ಬೇಜಾರು ಮಾಡ್ಕೊಂಡ ನಾಗಶೇಖರ್ ಸಿಗರೇಟು ಸೇದಿ ಸೇದಿ ಸುಸ್ತಾಗಿ ಹೋಗಿದ್ದಾರೆ.
ಈ ತರಹ ಆಗಿ ಆಸ್ಪತ್ರೆ ಸೇರಿರೋ ನಾಗಶೇಖರ್ ಸದ್ಯ ಹುಷಾರಾಗಿ ಮನೆ ಸೇರಿದ್ದಾರೆ. ಅಷ್ಟೇ ಯಾಕೆ ಸಿಗರೇಟ್ ಸೇದ್ಬೇಡಿ ಪ್ರೀತಿ ಮಾಡ್ಬೇಡಿ ಅಂತ ಸಂದೇಶ ಕೊಡೋ ಸಿನಿಮಾನೂ ಮಾಡ್ತಿದ್ದಾರೆ. ಅಯ್ಯೋ ಹಿಂಗೆಲ್ಲಾ ಆಯ್ತಾ ಹೀಗಂದ್ಕೊಂಡ್ರೆ ಅದು ನಿಮ್ಮ ತಪ್ಪು. ನಿರ್ದೇಶಕ ನಾಗಶೇಖರ್ ಹಾಗೇನೂ ಲವ್ವೂ ಮಾಡಿಲ್ಲ. ಸಿಗರೇಟ್ ಸೇದಿ ಆಸ್ಪತ್ರೇನೂ ಸೇರಿಲ್ಲ. [ವಿಮರ್ಶೆ : 'ಮೈನಾ' ಎಂಬ ಸುಂದರ ದೃಶ್ಯ ಕಾವ್ಯ]

ಕನ್ನಡದ ದೊಡ್ಡ ದೊಡ್ಡ ಕಾಮಿಡಿಯನ್ ಗಳೂ ಈ ಸಿನಿಮಾದಲ್ಲಿರ್ತಾರೆ. ಮತ್ತೊಂದು ವಿಷಯ, ಈ 'ಸಿಗರೇಟು' ಅನ್ನೋ ಟೈಟಲ್ ಗಾಗಿ ತುಂಬಾ ಕಷ್ಟಪಟ್ಟಿದ್ದಾರೆ ನಿರ್ದೇಶಕ ಲಕ್ಕಿ ಶಂಕರ್. 'ತರ್ಲೆ ನನ್ ಮಕ್ಳು' ಚಿತ್ರದಲ್ಲಿ ನಟನಾಗಬೇಕೆಂದು ಜಗ್ಗೇಶ್ ಒದ್ದಾಡುವಂತೆ ಇಲ್ಲಿ ಚಲನಚಿತ್ರ ನಿರ್ದೇಶಕನಾಗಬೇಕೆಂದು ನಾಗಶೇಖರ್ ಚಡಪಡಿಸುವ ಕಥೆ ಇದೆ.


Click it and Unblock the Notifications











