For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರ: ಚೇತನ್. ನಿತ್ಯಾ 'ಮೈನಾ' ಹಕ್ಕಿಯಾಗಿ ಹಾರಾಟ

  By Mahesh
  |

  ಮೈನಾ..ನಿರ್ದೇಶಕ ನಾಗಶೇಖರ್ ರಾಚಯ್ಯ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ಫೆ.22 ರಂದು ಬಿಡುಗಡೆಯಾಗುವುದು ಖಾತ್ರಿಯಾಗಿದೆ.ಇತ್ತೀಚೆಗೆ ಲಹರಿ ಸಂಸ್ಥೆ ಜೊತೆ ನಾಗಶೇಖರ್ ಒಂದು ಹಾಡಿಗಾಗಿ ದುಂಬಾಲು ಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಸಿ. ಅಶ್ವಥ್ ದನಿಯಲ್ಲಿ ಹೊರ ಹೊಮ್ಮಿದ 'ಕಾಣದ ಕಡಲಿಗೆ ಹಂಬಲಿಸಿದೆ ಮನ..' ಹಾಡು ವಿವಾದ ಏನಾಯಿತು ತೆರೆಯ ಮೇಲೆ ಗೊತ್ತಾಗಲಿದೆ.

  ಚೇತನ್ ಹಾಗೂ ನಿತ್ಯಾ ಮೆನನ್ ಜೋಡಿಯ ಮೈನಾ ಚಿತ್ರ ನೈಜ ಕಥೆಯನ್ನು ಆಧರಿಸಿದ ಚಿತ್ರವಾಗಿದ್ದು, ಜೆಸ್ಸಿ ಗಿಫ್ಟ್ ಸಂಗೀತ, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಈಗಾಗಲೇ ಜನಪ್ರಿಯವಾಗಿದೆ. ಚೇತನ್ ಹಾಗೂ ನಿತ್ಯಾ ಅವರ ಜೋಡಿ ಸುಂದರವಾದ ಲೋಕೇಷನ್ ನಲ್ಲಿ ಕುಣಿದಾಡುವುದನ್ನು ಅಷ್ಟೇ ಚೆನ್ನಾಗಿ ಸತ್ಯ ಹೆಗಡೆ ಸೆರೆ ಹಿಡಿದಿದ್ದಾರೆ.

  ಟಿಕೆಟ್ ಆಫರ್: ನಾಗಶೇಖರ್ ಚಿತ್ರ ಎಂದರೆ ಟ್ರಾಜೆಡಿ ಎಂಡ್ ಗ್ಯಾರಂಟಿ ಎಂಬ ಮಾತಿದೆ. ಮೈನಾ ಕೂಡಾ ಇದರಿಂದ ಹೊರತಾಗಿಲ್ಲ. ಆದರೆ, ಕುಟುಂಬ ಪೂರ್ತಿ ಚಿತ್ರಮಂದಿರಕ್ಕೆ ಕಾಲಿಟ್ಟು ನೆಮ್ಮದಿಯಿಂದ ಚಿತ್ರ ನೋಡಿ ಬರಲು ಅಡ್ಡಿಯಿಲ್ಲ.

  ಶುಕ್ರವಾರ ಮಾರ್ನಿಂಗ್ ಶೋ ನೋಡಿದ ಅಭಿಮಾನಿಗಳು ಚಿತ್ರದಲ್ಲಿ COLOURFUL ಎಂಬುದರ ಆರ್ಥವನ್ನು ಹೇಳಿದರೆ ಓರಿಯನ್ ಮಾಲ್ ನ ಪಿವಿಆರ್ ನಲ್ಲಿ ಮತ್ತೆ ಸಿನಿಮಾ ನೋಡಲು ಉಚಿತ ಟಿಕೆಟ್ ನೀಡುತ್ತೇನೆ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ. ನಾಗಶೇಖರ್ ಅವರ ಫೇಸ್ ಬುಕ್ ಪುಟಕ್ಕೆ ಹೋಗಿ ಕಾಮೆಂಟ್ ಹಾಕುವ 25 ಮಂದಿಗೆ ಫ್ರೀ ಟಿಕೆಟ್ ನೀಡುವ ಆಶ್ವಾಸನೆ ಸಿಕ್ಕಿದೆ. ಫೆ. 22, 11.59 PM ಗೆ ಆಫರ್ ಕೊನೆಗೊಳ್ಳಲಿದೆ.

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಮೈನಾದಲ್ಲಿ ದೊಡ್ಡ ತಾರಾಗಣವೇ ಇದೆ. ಚೇತನ್ ಹಾಗೂ ನಿತ್ಯಾ 'ಫ್ರೆಶ್' ಜೋಡಿ ಈಗಾಗಲೇ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಉಳಿದಂತೆ ಶರತ್ ಕುಮಾರ್, ಸುಹಾಸಿನಿ, ಮಾಳವಿಕ ಇದ್ದಾರೆ.

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಚಿತ್ರ ಶುಕ್ರವಾರ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಉಳಿದಂತೆ ತೆಲುಗು, ತಮಿಳು, ಮಲೆಯಾಳಂನಲ್ಲೂ ಚಿತ್ರ ತೆರೆಕಾಣಲಿದೆ. ತಮಿಳಿನಲ್ಲಿ ಚಿತ್ರದ ಹೆಸರು ಬದಲಾಯಿಸಲಾಗಿದ್ದು, 'ಪೂರ್ವಿ' ಎಂದು ಹೆಸರಿಡಲಾಗಿದೆ. ಮೈನಾ ಹೆಸರಿನಲ್ಲಿ ಈ ಹಿಂದೆ ತಮಿಳಿನಲ್ಲಿ ಬಂದ ಚಿತ್ರ ಕನ್ನಡದಲ್ಲಿ ಶೈಲೂ ಆಗಿ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ.

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಪಾತ್ರಧಾರಿಗಳ ಆಯ್ಕೆ ಜಾಣ್ಮೆ, ಚಿತ್ರ ದಕ್ಷಿಣದ ಇತರೆ ಭಾಷೆಗಳಿಗೆ ಡಬ್ ಆಗುತ್ತಿರುವುದರಿಂದ ತಾರಾಗಣದಲ್ಲಿ ಜನಪ್ರಿಯ ಕಲಾವಿದರನ್ನೇ ನಾಗಶೇಖರ್ ಆಯ್ಕೆ ಮಾಡಿದ್ದಾರೆ. ತೆಲುಗು, ತಮಿಳು, ಮಲೆಯಾಳಂನಲ್ಲಿ ಚಿರಪರಿಚತವಾಗಿರುವ ನಿತ್ಯಾ ಮೆನನ್, ಮಾಳವಿಕ, ಸುಹಾಸಿನಿ ಜೊತೆಗೆ ಶರತ್ ಕುಮಾರ್ ಇರುವುದು ನೆಟಿವಿಟಿಗೆ ತಕ್ಕಂತೆ ಮೂಡಿ ಬಂದಿದೆಯಂತೆ

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಬೆಂಗಳೂರಿನಲ್ಲಿ 'ಸಾಗರ್ ' ಮುಖ್ಯ ಥೇಟರ್ ಆಗಿದೆ. ಜೊತೆಗೆ ವೀರೇಶ್, ನವರಂಗ್, ಉಮಾ, ಈಶ್ವರಿ, ಸಿದ್ದೇಶ್ವರ, ಗೋವರ್ಧನ್, ಮೋಹನ್(ಸುಂಕದ ಕಟ್ಟೆ), ಗಣೇಶ್(ಯಲಹಂಕ), ಕೃಷ್ಣ(ಕೆಆರ್ ಪುರಂ), ಲಕ್ಷ್ಮಿ(ತಾವರೆಕೆರೆ), ಮುಕುಂದ, ರಾಜರಾಜೇಶ್ವರಿ, ನರಸಿಂಹ, ರಾಬಿನ್, ರಾಜಮುರಳಿ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ.

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಮಾಲ್ ಗಳಲ್ಲೂ ಚಿತ್ರಕ್ಕೆ ಭಾರಿ ಡಿಮ್ಯಾಂಡ್ ಇದೆ. ಪಿವಿಅರ್(ಫೋರಂ, ಓರಿಯಾನ್), ರಾಕ್ ಲೈನ್, ಐನೋಕ್ಸ್(ಮಂತ್ರಿ, ಸ್ವಾಗತ್,ಸೆಂಟ್ರಲ್), ಲಿಡೋ, ವ್ಯಾಲ್ಯೂ ಮಾಲ್, ಗೋಪಾಲನ್ ಮಾಲ್(ಆರ್ಕ್, ಗ್ರ್ಯಾಂದ್, ಲೆಗಸಿ, ಇನ್ನೋವೆಷನ್) ಮೀನಾಕ್ಷಿ ಸಿನಿಪೊಲೀಸ್, ಸಿನಿ ಮ್ಯಾಕ್ಸ್(ಸ್ಪಿರಿಟ್, ಅರೀನಾ)

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಉಳಿದಂತೆ ರಾಜ್ಯದೆಲ್ಲೆಡೆ 110ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮೈನಾ ಚಿತ್ರ ತೆರೆಕಾಣುತ್ತಿದ್ದು, ಬಹಾರ್, ಸಮರ್ಥ್ ಫಿಲಂ ಹಂಚಿಕೆ ಸಕತ್ ಆಗಿ ವರ್ಕ್ ಔಟ್ ಆಗುವ ನಿರೀಕ್ಷೆಯಿದೆ. ಅಂದ ಹಾಗೆ ವಿಶ್ವದಾದ್ಯಂತ ತೆರೆ ಕಾಣಲು ಸಿದ್ಧವಾಗಿರುವ ಈ ಚಿತ್ರವನ್ನು ಅರ್ಪಿಸುತ್ತಿರುವುದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

  ಮೈನಾ ಹಾರಾಟಕ್ಕೂ ಮುನ್ನ

  ಮೈನಾ ಹಾರಾಟಕ್ಕೂ ಮುನ್ನ

  ಹಿರಿಯ ಪೊಲೀಸ್ ಅಧಿಕಾರಿ ಅಶೋಕ್ ಕುಮಾರು ತಮ್ಮ ವೃತ್ತಿ ಜೀವನದಲ್ಲಿ ಕಂಡ ನೈಜ ಘಟನೆಗಳನ್ನು ಆಧರಿಸಿದ ಪ್ರೇಮ ಕಥೆಯೇ ಮೈನಾ ಚಿತ್ರವಾಗಿ ತೆರೆಗೆ ಬರಲಿದೆ. ಶರತ್ ಕುಮಾರ್ ಅವರು ಟೈಗರ್ ಅಶೋಕ್ ಕುಮಾರ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲೂ ಉತ್ಸಾಹದಿಂದ ಪಾಲ್ಗೊಂಡು ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.

  English summary
  'Mynaa', a Kannada film directed by Nagashekar, is based on a real-life incident set to release on Feb 22. Early Birds Watch the Movie and Let us know what the word COLOURFUL Means in the film and Win Tickets for Sunday Special Show at PVR ECX, Orion Mall said Director Nagashekar R

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X