Just In
Don't Miss!
- News
ಕೆಂಪುಕೋಟೆಯಲ್ಲಿ ಸಿಲುಕಿದ್ದ 300 ಕಲಾವಿದರನ್ನು ರಕ್ಷಿಸಿದ ಪೊಲೀಸರು
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಂತನಾಗ್ ಅವರ 'ಮೈಸೂರು ಮಸಾಲಾ' ಚಿತ್ರದ ಪೋಸ್ಟರ್ ಬಿಡುಗಡೆ

ಅನಂತ್ ನಾಗ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ 'ಮೈಸೂರು ಮಸಲಾ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರ ಉತ್ಸವದಲ್ಲಿ (ಬಿಐಎಸ್ಎಫ್ಎಫ್) ಅಜಯ್ ಸರ್ಪೇಷ್ಕರ್ ಫಿಲಮ್ಸ್ ನ "ಮೈಸೂರು ಮಸಾಲಾ" ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವಡ್ ನ ಖ್ಯಾತ ನಟ ಅನಂತನಾಗ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಹಾಗೂ ಕಿರಣ್ ಶ್ರೀನಿವಾಸ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
'ಮೈಸೂರು ಮಸಾಲಾ' ಸೈ-ಫೈ ಸಾಹಸಮಯ ಚಿತ್ರವಾಗಿರುವುದರಿಂದ ಸಾಕಷ್ಟು ವಿಎಫ್ಎಕ್ಸ್ ಹಾಗೂ ಎಸ್‍ಎಫ್‍ಎಕ್ಸ್ ಅಂಶಗಳನ್ನು ಅಳವಡಿಸಲಾಗಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ನಿರ್ಮಾಣದ ನಂತರ ಕೆಲಸಗಳು ಆರಂಭ ಮಾಡಿದೆ.
ಇನ್ನು ಈ ಚಿತ್ರವನ್ನ ಅಜಯ್ ಸರ್ಪೇಷ್ಕರ್ ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು, 'ಮೈಸೂರು ಮಸಾಲಾ' ಸ್ಯಾಂಡಲ್ ವುಡ್‍ನಲ್ಲಿ ಹೊಸ ಯುಗವನ್ನು ಆರಂಭಿಸಲಿದೆ " ಎಂದು ಭರವಸೆ ವ್ಯಕ್ತಪಡಿಸಿದರು ನಿರ್ದೇಶಕರು.
ಹಿರಿಯ ನಟ ಅನಂತನಾಗ್ ಅವರು, ಈ ಚಿತ್ರದಲ್ಲಿ ವಿಜ್ಞಾನದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಸಾಕಷ್ಟು ಅನುಭವವಿರುವ ನಿವೃತ್ತ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಹಾಗೂ ಹಲವು ಸೈ-ಫೈ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಪ್ರಕಾಶ್ ಬೆಳವಾಡಿ ಅವರು ಕೂಡ ನಟಿಸಲಿದ್ದಾರೆ.
ಚಿತ್ರದ ಇತರ ಪಾತ್ರವರ್ಗವನ್ನು ಗೌಪ್ಯವಾಗಿಡಲಾಗಿದ್ದು, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಹಾಗೂ ಕಿರಣ್ ಶ್ರೀನಿವಾಸ್ ನಟಿಸಿದ್ದಾರೆ. ಇನ್ನುಳಿದಂತೆ ಮೈಸೂರು ಮಸಾಲ ಚಿತ್ರ ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ (ಯುಎಫ್ಒ)ಗಳನ್ನು ಒಳಗೊಂಡಿದೆ ಎಂದು ಅಜಯ್ ಸರ್ಪೇಷ್ಕರ್ ತಿಳಿಸಿದ್ದಾರೆ.
ಅಜಯ್ ಸರ್ಪೇಷ್ಕರ್ ಚಿತ್ರದ ಕುರಿತು:
ಚಿತ್ರಗಳು ನಿರ್ದೇಶಕರ ಸಂವೇದನೆ ಮಾತ್ರವಲ್ಲ, ಅದನ್ನು ವೀಕ್ಷಿಸುವ ಸಮಾಜದ ಸಂವೇದನೆಯನ್ನೂ ಒಳಗೊಂಡಿರುತ್ತದೆ. ಜನರು ತಮ್ಮ ಸಂವೇದನೆ ಹಾಗೂ ಅಭಿರುಚಿಯನ್ನು ಗೌರವಿಸುವ ಉತ್ತಮ ಚಿತ್ರಗಳಿಗಾಗಿ ಮೌನವಾಗಿ ಪ್ರತಿಭಟಿಸುತ್ತಿರುವುದನ್ನು ನಾವು ಅರಿತಿದ್ದೇವೆ. ಕನ್ನಡ ಚಿತ್ರರಂಗವನ್ನು ಉತ್ತಮಗೊಳಿಸಿ, ಭಾರತ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಅದನ್ನು ಯಶಸ್ವಿಯಾಗಿ ಪ್ರಚುರಪಡಿಸುವ ಗುರಿ ನಮ್ಮದಾಗಿದೆ. ಉತ್ತಮ ಚಿತ್ರಗಳನ್ನು ಪ್ರೀತಿಯಿಂದ ತಯಾರಿಸಿ, ಚಿತ್ರಗಳಿಂದ ದೂರ ಸರಿಯುತ್ತಿರುವ ಜನರ ಆಸಕ್ತಿಯನ್ನು ಮತ್ತೊಮ್ಮೆ ಚಿತ್ರರಂಗದತ್ತ ಸೆಳೆಯುವ ನಿಟ್ಟಿನಲ್ಲಿ ಮೈಸೂರು ಮಸಾಲ ಮೊದಲ ಪ್ರಯತ್ನವಾಗಿದೆ ಎಂದು ಅಜಯ್ ಸರ್ಪೇಷ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ.