For Quick Alerts
  ALLOW NOTIFICATIONS  
  For Daily Alerts

  ಹೀರೋ ಆಗ್ತಾರಾ ಮೈಸೂರಿನ ಪ್ರತಾಪ್ ಸಿಂಹ ?

  By Pavithra
  |
  ರಾಜಕೀಯ ಆಯಿತು ಈಗ ಸಿನಿಮಾ ಹೀರೋ ಆಗಲು ಹೊರಟ್ರಾ ಪ್ರಥಮ್ ಸಿಂಹ ? | Oneindia Kannada

  ಮೈಸೂರಿನ ಸಿಂಹ ಅಂತಾನೆ ಯುವಜನತೆಯಿಂದ ಕರೆಸಿಕೊಳ್ಳುತ್ತಿರುವ ಪ್ರತಾಪ್ ಸಿಂಹ ಚಿತ್ರರಂಗಕ್ಕೆ ಕಾಲಿಡುತ್ತಾರಾ? ಎನ್ನುವ ಸುದ್ದಿ ಕೇಳಿ ಬರುತ್ತಿದೆ. ರಾಜಕೀಯದಲ್ಲಿ ಹೊಸ ಚಾಪು ಮೂಡಿಸಿಕೊಂಡು ಸಾವಿರರಾರು ಜನರ ಮಧ್ಯೆ ವಿಭಿನ್ನವಾಗಿ ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಅವರ ಒಂದು ಫೋಟೋ ಸದ್ಯ ಅವರು ಬಣ್ಣದ ಜಗತ್ತಿಗೆ ಎಂಟ್ರಿಕೊಡುತ್ತಾರಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.

  ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಸವಾಲು ಸ್ವೀಕರಿಸಿರುವ ಸಂಸದ ಪ್ರತಾಪ್‌ಸಿಂಹ "ಹಮ್ ಫಿಟ್ ಥೋ ಇಂಡಿಯಾ ಫಿಟ್ "ಗಾಗಿ ತನ್ನ ಸದೃಢ ದೇಹದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ಸಿನಿಮಾದಲ್ಲಿ ಅಭಿನಯಿಸಿ. ಮಾಡೆಲಿಂಗ್ ಮಾಡಬಹುದು ಅಂತೆಲ್ಲಾ ಸಲಹೆ ನೀಡಿದ್ದಾರೆ.

  ಫೇಸ್ ಬುಕ್, ಟ್ವಿಟರ್ ನಲ್ಲಿ ಅಪಾರ ಅಭಿಮಾನಿ ಹೊಂದಿರುವ ಪ್ರತಾಪ್ ಸಿಂಹ, ಸ್ಮಾರ್ಟ್ ರಾಜಕಾರಣಿ ಅಂತಾನೇ ಫೇಮಸ್ ಆಗಿದ್ದಾರೆ. ಅವರ ಸ್ಟೈಲ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎನ್ನುವುದು ಟ್ವಿಟ್ಟರ್ ಕಮೆಂಟ್ ಗಳನ್ನ ನೋಡಿದರೆ ತಿಳಿಯುತ್ತೆ. ಸದ್ಯ ಗ್ಲಾಸ್ ಹಾಕಿಕೊಂಡು ಕ್ಯಾಮೆರಾಗೆ ಫೋಸ್ ಕೊಟ್ಟಿರುವ ಫೋಟೋ ಮಾತ್ರ ಸಖತ್ ವೈರಲ್ ಆಗಿದ್ದು ಆದಷ್ಟು ಬೇಗ ವರ್ಕ್ ಔಟ್ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರಂತೆ.

  ಅಂದ್ಹಾಗೆ ಸಿನಿಮಾರಂಗಕ್ಕೂ ರಾಜಕೀಯಕ್ಕೂ ಸಾಕಷ್ಟು ವರ್ಷಗಳಿಂದ ನಂಟಿಗೆ. ಎರಡು ಕ್ಷೇತ್ರದಲ್ಲಿ ಸಾಮಾನ್ಯ ಜನರುಗ್ರೀನ್ ಸಿಗ್ನಲ್ ಕೊಟ್ಟರೆ ಏನು ಬೇಕಾದರು ಬದಲಾವಣೆಗಳು ಆಗುತ್ತೆ. ಸದ್ಯ ಪ್ರತಾಪ್ ಸಿಂಹ ಅಪ್ಲೋಡ್ ಮಾಡಿರುವ ಫೋಟೋವನ್ನ ಚಿತ್ರ ನಿರ್ದೇಶಕ ನಿರ್ಮಾಪಕರು ನೋಡಿ ಸಿನಿಮಾದಲ್ಲಿ ಆಕ್ಟ್ ಮಾಡಿ ಎಂದು ಆಫರ್ ಕೊಟ್ಟರು ಆಶ್ಚರ್ಯವಿಲ್ಲ.

  English summary
  Mysore MP Pratap simha Bare body photo goes viral on twitter. Fans who have watched the photo suggested that they act in movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X