»   »  ದಸರಾ ಚಿತ್ರೋತ್ಸವ: ಸದಭಿರುಚಿಯ ಚಿತ್ರಗಳಿಗೆ ಮನಸೋತ ಪ್ರೇಕ್ಷಕರು

ದಸರಾ ಚಿತ್ರೋತ್ಸವ: ಸದಭಿರುಚಿಯ ಚಿತ್ರಗಳಿಗೆ ಮನಸೋತ ಪ್ರೇಕ್ಷಕರು

Posted By:
Subscribe to Filmibeat Kannada

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಚಲನಚಿತ್ರೋತ್ಸವವನ್ನ ಆಯೋಜಿಸಲಾಗಿದ್ದು, ಚಿತ್ರೋತ್ಸವಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸೆಪ್ಟಂಬರ್ 22 ರಿಂದ ದಸರಾ ಚಲನಚಿತ್ರೋತ್ಸವ ಆರಂಭವಾಗಿದ್ದು, ನಗರದ ಡಿ.ಆರ್.ಸಿ. ಮತ್ತು ಐನಾಕ್ಸ್ ನಲ್ಲಿ ಚಿತ್ರಮಂದಿರದಲ್ಲಿ ಕನ್ನಡ ಹಾಗೂ ವಿದೇಶಿ ಸಿನಿಮಾಗಳು ಪ್ರದರ್ಶನವಾಗುತ್ತಿದೆ.

ಈ ಬಗ್ಗೆ ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವಿಶೇಷಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ದಸರಾ ಚಿತ್ರೋತ್ಸವದ ಅನುಭವವನ್ನ ಹಂಚಿಕೊಂಡಿದ್ದಾರೆ.

ಸೆಪ್ಟಂಬರ್ 22 ರಿಂದ 'ಮೈಸೂರು ದಸರಾ ಚಲನಚಿತ್ರೋತ್ಸವ' ಆರಂಭ

Mysuru Dasara Film Festival Successfull

22 ರಂದು ಡಿ.ಆರ್.ಸಿ. ಚಿತ್ರಮಂದಿರದಲ್ಲಿ 'ಆಕೆ' ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಹಿರಿಯ ಚಿತ್ರ ನಟ ಸುಂದರ್ ರಾಜ್ ನಟಿಸಿರುವ 'ಲಿಫ್ಟ್ ಮ್ಯಾನ್' ಚಿತ್ರ ಪ್ರದರ್ಶನ ವೇಳೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರೊಡನೆ ಚಿತ್ರದ ಬಗೆಗೆ ಚರ್ಚೆ ಮಾಡಿದರು. ಶನಿವಾರ ಯುವ ಮನಸ್ಸುಗಳ ಪ್ರಶಂಸೆಗೆ ಪಾತ್ರವಾದ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.

ಭಾನುವಾರ 'ಅಮರಾವತಿ' ಚಿತ್ರದ ನಿರ್ದೇಶಕರಾದ ಬಿ.ಎಂ. ಗಿರಿರಾಜ್ ಅವರು ಪಾಲ್ಗೊಂಡಿದ್ದು ಪ್ರೇಕ್ಷರಿಗೆ ವಿಶೇಷ ಅನುಭವ ನೀಡಿತು. ಐನಾಕ್ಸ್ ನಲ್ಲಿ ಹಿರಿಯ ನಿರ್ದೇಶಕ ಸುರೇಶ್ ಹೆಬ್ಬಿಕರ್ ಅವರ 'ಮನ ಮಂಥನ' ಶುಕ್ರವಾರ ತುಂಬಿದ ಪ್ರದರ್ಶನ ಕಂಡಿತು. ಭಾನುವಾರ ಸಂಜೆ 4 ಗಂಟೆಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ 'ರಾಮಾ ರಾಮಾ ರೇ' ಚಿತ್ರ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದು ಯೋಗೇಶ್ ಹರ್ಷ ವ್ಯಕ್ತಪಡಿಸಿದರು.

ಇನ್ನು ಡಿ.ಆರ್.ಸಿ. ಚಿತ್ರಮಂದಿರದ ಮಾಲಿಕರಾದ ವೈಶಾಲಿ ಅವರು ಮಾತನಾಡಿ ಮೈಸೂರು ದಸರಾ ಚಿತ್ರೋತ್ಸವ ಯಶಸ್ವಿಯಾಗಿ ನಡೆದಿದೆ. ಕನ್ನಡದ ಸದಾಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಯಶಸ್ವಿ ಚಿತ್ರ ಕಿರಿಕ್ ಪಾರ್ಟಿ ತುಂಬಿದೆ ಪ್ರದರ್ಶನ ಕಂಡಿದೆ ಹಾಗೂ ಚಿತ್ರೋತ್ಸವ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ ಎಂದರು.

ದಸರಾ ಚಲನಚಿತ್ರೋತ್ಸವಕ್ಕೆ ಹೋಗ್ಬೇಕು ಅಂದ್ರೆ ನೋಂದಣಿ ಮಾಡ್ಕೊಳ್ಳಿ.!

ಮೈಸೂರು ದಸರಾ ಚಲನಚಿತ್ರೋತ್ಸವ ಸೆಪ್ಟೆಂಬರ್ 28 ರವರೆಗೂ ನಡೆಯಲಿದ್ದು ಸಿನಿಮಾಸಕ್ತರಿಗೆ ಚಿತ್ರೋತ್ಸವ ಸಮಿತಿ ಐನಾಕ್ಸ್ ಗೆ ನೊಂದಣಿ ಅವಕಾಶವನ್ನು ಮಾಡಿಕೊಟ್ಟಿದೆ, ಆಸಕ್ತರು ನೋಂದಾಯಿಸಿಕೊಳ್ಳಬಹುದಾಗಿದೆ.

English summary
Mysuru Dasara festival receiving good response From Audience. ಮೈಸೂರು ದಸರಾ ಹಬ್ಬದ ಪ್ರಯುಕ್ತ ಚಲನಚಿತ್ರೋತ್ಸವ ನಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಸೆಪ್ಟಂಬರ್ 22ಕ್ಕೆ ಆರಂಭವಾಗಿದ್ದು, ಸೆಪ್ಟಂಬರ್ 28 ರವರೆಗೂ ಚಿತ್ರ ಪ್ರದರ್ಶನವಾಗಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada