»   » ಎಸ್‌ಪಿಬಿ, ಜಯಮಾಲಾಗೆ 'ಎನ್‌.ಟಿ.ರಾಮರಾವ್' ಪ್ರಶಸ್ತಿ

ಎಸ್‌ಪಿಬಿ, ಜಯಮಾಲಾಗೆ 'ಎನ್‌.ಟಿ.ರಾಮರಾವ್' ಪ್ರಶಸ್ತಿ

Posted By:
Subscribe to Filmibeat Kannada

ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ನಟಿ ಜಯಮಾಲಾ ಅವರನ್ನು 'ಕರ್ನಾಟಕ ತೆಲುಗು ಅಕಾಡೆಮಿ' ವತಿಯಿಂದ ನೀಡಲಾಗುವ 'ಎನ್.ಟಿ.ರಾಮರಾವ್ ರಾಷ್ಟ್ರೀಯ ಪ್ರಶಸ್ತಿ'ಗೆ ಈ ಬಾರಿ ಆಯ್ಕೆ ಮಾಡಲಾಗಿದೆ.

'ಎನ್‌ಟಿಆರ್' ಪ್ರಶಸ್ತಿ ನೀಡುವ ಬಗ್ಗೆ ನಿನ್ನೆ ಪತ್ರಿಕಾಗೋ‍ಷ್ಠಿಯಲ್ಲಿ ಮಾತನಾಡಿರುವ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎ.ರಾಧಾಕೃಷ್ಣರಾಜು ರವರು ಎಸ್‌ಪಿಬಿ ಮತ್ತು ಜಯಮಾಲಾ ರವರು ಈ ಬಾರಿ ಪ್ರಶಸ್ತಿಗೆ ಆಯ್ಕೆ ಆಗಿರುವ ಬಗ್ಗೆ ತಿಳಿಸಿದ್ದಾರೆ.

'N T Rama Rao' award to S P Balasubrahmanyam and Dr Jayamala

ಜುಲೈ 15 ರಂದು ಸಂಜೆ 4 ಗಂಟೆಗೆ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 'ಹೈದರಾಬಾದ್‌ನ ಜನಪ್ರಿಯ ಸಿಂಗರ್ ಚಂದ್ರತೇಜ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಗಾಯಕ ಘಂಟಸಾಲ ಅವರ ಜೀವನ ಚರಿತ್ರೆಯ ಕೃತಿಯನ್ನು ಬಿಡುಗಡೆ ಮಾಡುವ ಬಗ್ಗೆ ಡಾ.ಎ.ರಾಧಾಕೃಷ್ಣರಾಜು ಮಾಹಿತಿ ನೀಡಿದ್ದಾರೆ.

English summary
Renowned singer S. P. Balasubrahmanyam and Kannada Actress Jayamala has selected to 'N T Rama Rao' National award which was given by Kannada Telugu Academy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada