»   » ನಲವತ್ತು ಅಡಿ ಶಿವನ ಮುಂದೆ 'ನಾನಿ' ಕ್ಲೈಮ್ಯಾಕ್ಸ್

ನಲವತ್ತು ಅಡಿ ಶಿವನ ಮುಂದೆ 'ನಾನಿ' ಕ್ಲೈಮ್ಯಾಕ್ಸ್

Posted By:
Subscribe to Filmibeat Kannada

ಅದು ತಾವರೆಕೆರೆ-ನೆಲಮಂಗಲ ಸಮೀಪದ ಮೈದಾನ..ಅಲ್ಲಿ 40 ಅಡಿ ಎತ್ತರದ ಶಿವನ ವಿಗ್ರಹ..ಅದರ ಮುಂದೆ 50ಕ್ಕೂ ಹೆಚ್ಚು ಅಘೋರಿ ವೇಷಧಾರಿಗಳು ಶಿವನನ್ನು ಪ್ರಾರ್ಥಿಸಿ ಹಾಡುವ ದೃಶ್ಯ.

ಇದು 'ನಾನಿ' ಚಿತ್ರದ ಕ್ಲೈಮ್ಯಾಕ್ಸ್ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಕಂಡುಬಂದ ಚಿತ್ರಣ. ಅಘೋರಿಗಳ ಗುರುವಾಗಿ ನಟ ರಮೇಶ್ ಪಂಡಿತ್ ಇದ್ದರೆ, ನೃತ್ಯ ನಿರ್ದೇಶಕ ತ್ರಿಭುವನ್ ಕೂಡ ಅಘೋರಿ ವೇಷ ಧರಿಸಿ ಕುಣಿದದ್ದು ವಿಶೇಷವಾಗಿತ್ತು.

naani-song-shoot-in-front-of-40-feet-shiva-statue

ತಮಿಳುನಾಡಿನ ಗಜೇಂದ್ರನ್ ಎಂಬುವವರು ಈ ಬೃಹತ್ ಶಿವನ ವಿಗ್ರಹವನ್ನು ನಿರ್ಮಿಸಿದ್ದು, ಈ ಹಿಂದೆ 'ಮಗಧೀರ', 'ಶಿವ', 'ಸಾರಥಿ' ಮೊದಲಾದ ಚಿತ್ರಗಳಿಗೂ ದೇವರ ಮೂರ್ತಿಯನ್ನು ತಯಾರಿಸಿದ್ದರು. 5 ದಿನಗಳ ಕಾಲ ನಡೆದ ಈ ಚಿತ್ರೀಕರಣಕ್ಕೆ ಬರೋಬ್ಬರಿ 25 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

ಕಂಪ್ಲೀಟ್ ಹಾರರ್ ಥ್ರಿಲ್ಲರ್ ಆಗಿರುವ 'ನಾನಿ' ನೈಜಕಥೆ ಆಧರಿಸಿರುವ ಚಿತ್ರ. ಸರಿಸುಮಾರು 18 ವರ್ಷಗಳ ಹಿಂದೆ ಸೂರತ್ ನಿಂದ 70 ಕಿ.ಮೀ. ದೂರದ ಸಾತಿವಾರ ಗ್ರಾಮದಲ್ಲಿ, ಮನೆಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿರುತ್ತದೆ. ಆ ಮನೆಯಲ್ಲಿ 13 ವರ್ಷದ ಪುಟ್ಟ ಬಾಲಕಿ 'ನಾನಿ' ಕೂಡ ಬೆಂಕಿಯಲ್ಲಿ ಬೆಂದು ಹೋಗಿರುತ್ತಾಳೆ. ಅಂದಿನಿಂದಲೂ ಆ ಮನೆ ಹಾಗೇ ಪಾಳುಬಿದ್ದಿದೆ. ಅದರಲ್ಲಿ ಈಗಲೂ ನಾನಿ ಆತ್ಮ ಇದೆ ಅನ್ನೋದು ಅಲ್ಲಿಯವರ ನಂಬಿಕೆ.

naani-song-shoot-in-front-of-40-feet-shiva-statue

ಇದೇ ಎಳೆಯನ್ನ ಇಟ್ಟುಕೊಂಡು 'ನಾನಿ' ಚಿತ್ರಕಥೆ ರಚಿಸಲಾಗಿದೆ. ಅಲ್ಲದೇ, ಸುಟ್ಟು ಕರಕಲಾದ ಮನೆಯಲ್ಲೇ ಚಿತ್ರೀಕರಣವನ್ನೂ ಚಿತ್ರತಂಡ ನಡೆಸಿದೆ. ಹಂಸಲೇಖ ಅವರ ಶಿಷ್ಯ ರಾಘವೇಂದ್ರ ಗೊಲ್ಲಹಳ್ಳಿ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.

ಈ ಹಿಂದೆ 'ಬಣ್ಣದ ಕೊಡೆ' ಚಿತ್ರದ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದ ಬಾಲನಟಿ ಬೇಬಿ ಸುಹಾಸಿನಿ ಈ ಚಿತ್ರದಲ್ಲಿ 'ನಾನಿ'ಯಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ಕಲಾವಿದ, ನಿರೂಪಕ ಮನೀಶ್ ಆರ್ಯ ಹಾಗೂ ಪ್ರಿಯಾಂಕ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

naani-song-shoot-in-front-of-40-feet-shiva-statue

ಹಿರಿಯ ಕಲಾವಿದೆ ಸುಹಾಸಿನಿ ಮಣಿರತ್ನಂ ಈ ಚಿತ್ರದಲ್ಲಿ ನಾನಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ತಂದೆಯಾಗಿ ನಟ ಜೈಜಗದೀಶ್ ಅಭಿನಯಿಸಿದ್ದಾರೆ. ಸದ್ಯ ಹಾಡಿನ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ 'ನಾನಿ' ಕಾಲಿಟ್ಟಿದೆ.

English summary
Horror Movie 'Naani' song is picturised in front of 40 feet Shiva Statue. More than 50 dancers were in Aghori avatar. 'Naani' is directed by Raghavendra Gollahalli.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada