»   » ಲಂಡನ್ ಗೆ ಹಾರಿದ ಸಂಚಾರಿ ವಿಜಯ್ - ಬಿ.ಎಸ್ ಲಿಂಗದೇವರು

ಲಂಡನ್ ಗೆ ಹಾರಿದ ಸಂಚಾರಿ ವಿಜಯ್ - ಬಿ.ಎಸ್ ಲಿಂಗದೇವರು

Posted By:
Subscribe to Filmibeat Kannada

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ನಟಿಸಿದ್ದ ವಿಶೇಷ ಸಿನಿಮಾ 'ನಾನು ಅವನಲ್ಲ ಅವಳು' ಕರ್ನಾಟಕದಲ್ಲಿ ತೆರೆ ಕಂಡು ಯಶಸ್ವಿ ಪ್ರದರ್ಶನ ಕಂಡಿತ್ತು. ಮಾತ್ರವಲ್ಲದೇ ಸಂಚಾರಿ ವಿಜಯ್ ಅವರ ನಟನೆಗೆ ಎಲ್ಲರೂ ಮನಸೋತಿದ್ದರು.

ಕರ್ನಾಟಕದಾದ್ಯಂತ ಎಲ್ಲರ ಮೆಚ್ಚುಗೆ ಗಳಿಸಿದ 'ನಾನು ಅವನಲ್ಲ ಅವಳು' ಇದೀಗ ವಿದೇಶಕ್ಕೆ ಹಾರಲು ಸಜ್ಜಾಗಿದೆ. ಹೌದು ಜುಲೈ 14 ರಿಂದ 21 ರವರೆಗೆ ಲಂಡನ್ ನಲ್ಲಿ ನಡೆಯುವ (LIFF) 'ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್' ನಲ್ಲಿ 'ನಾನು ಅವನಲ್ಲ ಅವಳು' ಒಟ್ಟು 3 ಪ್ರದರ್ಶನ ಕಾಣಲಿದೆ.[ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']


'Naanu Avanalla Avalu' screening at 'BFI London Film Festival'

ಚಿತ್ರದ ನಿರ್ದೇಶಕ ಬಿ.ಎಸ್ ಲಿಂಗದೇವರು ಅವರ ಜೊತೆ ಚಿತ್ರದ ಬಗ್ಗೆ ಸಂವಾದ ಕಾರ್ಯಕ್ರಮ ಕೂಡ ಏರ್ಪಾಡಾಗಿದ್ದು, ಲಂಡನ್ ನಲ್ಲಿ ನೆಲೆಸಿರುವ ಕನ್ನಡ ಚಿತ್ರ ಪ್ರೇಮಿಗಳು ಹಾಗೂ ವಿದೇಶಿಗನ್ನಡಿಗರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.


'Naanu Avanalla Avalu' screening at 'BFI London Film Festival'

ಜುಲೈ 16 ರಂದು, ಸಮಯ 8.30 ಕ್ಕೆ ಬಿ.ಎಫ್.ಐ ಸೌತ್ ಬ್ಯಾಂಕ್ ನಲ್ಲಿ ಹಾಗೂ ಜುಲೈ 17ರಂದು, ಸಮಯ 6 ಘಂಟೆಗೆ ಕ್ರೌಚ್ ಎಂಡ್ ಪಿಕ್ಚರ್ ಹೌಸ್ ನಲ್ಲಿ 'ನಾನು ಅವನಲ್ಲ ಅವಳು' ಚಿತ್ರದ ಪ್ರದರ್ಶನದ ಬಳಿಕ ನಿರ್ದೇಶಕ ಬಿ.ಎಸ್ ಲಿಂಗದೇವರು ಅವರ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಜರುಗಲಿದೆ.[ಅವನಲ್ಲ 'ಅವಳು' ಮಂಗಳಮುಖಿ ವಿದ್ಯಾ ವಿಶೇಷ ಸಂದರ್ಶನ]


'Naanu Avanalla Avalu' screening at 'BFI London Film Festival'

ಈಗಲೇ ಟಿಕೆಟ್ ಬುಕ್ ಮಾಡಿಸಿಕೊಳ್ಳಲು #Kannada #Movie! KUK Talkies ಸೈಟ್ ಗೆ ಸಂಪರ್ಕಿಸಿ. ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಗೆ ಭಾಜನವಾದ 'ನಾನು ಅವನಲ್ಲ ಅವಳು' ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ನಟ ಸುಂದರ್ ಪ್ರಮುಖ ಪಾತ್ರ ವಹಿಸಿದ್ದರು.

English summary
Kannada Actor Sanchari Vijay starrer Kannada movie 'Naanu Avanalla Avalu' screening at 'BFI London Film Festival' on July 16th and 17th. There will be Q&A with director BS Lingadevaru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada