For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಈ ನಟಿಯ ಡಾನ್ಸ್ ಗೆ ಟಾಲಿವುಡ್ ಮಂದಿ ಫಿದಾ

  |

  ಕನ್ನಡದ ಅನೇಕ ನಟಿಮಣಿಯರು ಪರಭಾಷೆ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಟಾಲಿವುಡ್ ನಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾ ಶ್ರೀನಾಥ್ ಹವಾ ಜೋರಾಗಿಯೇ ಇದೆ. ಈ ನಟಿಯ ಸಾಲಿಗೀಗ ಕನ್ನಡದ ಮತ್ತೋರ್ವ ಸುಂದರಿ ಸೇರಿ ಕೊಂಡಿದ್ದಾರೆ.

  'ವಜ್ರಕಾಯ' ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಭಾ ನಟೇಶ್ ಈಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. 'ವಜ್ರಕಾಯ' ಚಿತ್ರದ ನಂತರ ಕನ್ನಡದಲ್ಲಿ ಎರಡು ಸಿನಿಮಾದ ಮಾಡಿದ ನಭಾ ನಂತರ ಕನ್ನಡಾಭಿಮಾನಿಗಳಿಂದ ದೂರ ಸರಿದಿದ್ದರು. ಆದ್ರೀಗ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಐ ಸ್ಮಾರ್ಟ್ ಶಂಕರ್' ಚಿತ್ರದಲ್ಲಿ ನಭಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

  ಮನೆ ಮಾರಿ ಮಗನ ಸಿನಿಮಾ ಮಾಡಿದ 'ಸ್ಟಾರ್' ಡೈರೆಕ್ಟರ್.!

  'ಐ ಸ್ಮಾರ್ಟ್ ಶಂಕರ್' ಚಿತ್ರದಿಂದ ನಭಾ ನಟೇಶ್ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿದ್ದೆಗೆಡಿಸಿದೆ. ಸದ್ಯ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿನಲ್ಲಿ ನಭಾ ವಿಶಿಷ್ಟ ಶೈಲಿಯ ಗ್ರಾಮೀಣ ಉಡುಗೆ ತೊಟ್ಟು ಹೆಜ್ಜೆ ಹಾಕಿದ್ದಾರೆ. ಕೆಂಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಮಿಂಚುತ್ತಿರುವ ನಭಾ ನಟೇಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಚಿತ್ರದಲ್ಲಿ ದೊಡ್ಡ ತಾರಾಬಳಗವೆ ಇದೆ. ನಭಾ ಜೊತೆಗೆ ಮತ್ತೋರ್ವ ನಾಯಕಿ ನಿಧಿ ಅಗರವಾಲ್ ಕೂಡ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ರಾಮ್ ಪೊಥಿನೆನಿ ಬಣ್ಣ ಹಚ್ಚಿದ್ದಾರೆ. ಪೂರಿ ಜಗನ್ನಾಥ್ ಮತ್ತು ನಟಿ ಚಾರ್ಮಿ ಕೌರ್ ಇಬ್ಬರು ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

  English summary
  Kannada actress Nabha Natesh looks out from Telugu movie 'I Smart Shankar'. nabha playing a lead actress in I Smart Shankar movie.this movie is directed by puri jagannath

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X