For Quick Alerts
  ALLOW NOTIFICATIONS  
  For Daily Alerts

  ಎಲ್ಲರೂ 'ರುಸ್ತುಂ' ಸಿನಿಮಾವನ್ನು ನೋಡಿ ಎಂದ ನಾಗ ಚೈತನ್ಯ

  |

  ಒಂದೇ ಒಂದು ದಿನ ಬಾಕಿ ಇದೆ 'ರುಸ್ತುಂ' ಸಿನಿಮಾ ಬಿಡುಗಡೆಗೆ. ಸಿನಿಮಾಗೆ ಈಗಾಗಲೇ ಅನೇಕ ಪರಭಾಷ ಸ್ಟಾರ್ ಗಳು ವಿಶ್ ಮಾಡಿದ್ದಾರೆ. ಈಗ ನಟ ನಾಗಚೈತನ್ಯ ಸಹ ಸಿನಿಮಾಗೆ ಶುಭ ಹಾರೈಸಿದ್ದಾರೆ.

  ''ರವಿವರ್ಮ ಸರ್ ಅವರ 'ರುಸ್ತುಂ' ಸಿನಿಮಾಗೆ ಶುಭ ಕೋರುತ್ತಿದ್ದೇನೆ. ಶಿವರಾಜ್ ಕುಮಾರ್ ಸರ್ ಹಾಗೂ ವಿವೇಕ್ ಒಬೆರಾಯ್ ಸರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಾನು ರವಿವರ್ಮ ಅವರ ಜೊತೆಗೆ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವರ ಕೆಲಸದ ಶೈಲಿ ನನಗೆ ತುಂಬ ಇಷ್ಟ.'' ಎಂದು ಟಾಲಿವುಡ್ ನಟ ನಾಗಚೈತನ್ಯ ಹೇಳಿದ್ದಾರೆ.

  ''ರವಿವರ್ಮ ಸರ್ ಇನ್ನು ಹೆಚ್ಚು ಸಿನಿಮಾ ಮಾಡಲಿ. ಸಿನಿಮಾಗೆ ಒಳ್ಳೆಯದಾಗಲಿ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ.'' ಎಂದು ನಾಗಚೈತನ್ಯ ಶುಭ ಹಾರೈಸಿದ್ದಾರೆ.

  'ರುಸ್ತುಂ' ಸಿನಿಮಾದಲ್ಲಿ ಶಿವರಾಜ್ ಕುಮಾರ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ರದ್ಧಾ ಶ್ರೀನಾಥ್, ಮಯೂರಿ ಹಾಗೂ ರಚಿತಾ ರಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅನೂಪ್ ಸಿಳೀಸ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

  ನಾಳೆಯೇ (ಶುಕ್ರವಾರ) ಚಿತ್ರ ರಿಲೀಸ್ ಆಗುತ್ತಿದ್ದು, ಸಿನಿಮಾದ ಕ್ರೇಜ್ ಜಾಸ್ತಿಯಾಗುತ್ತಿದೆ. ಅನೇಕ ಚಿತ್ರಮಂದಿರಗಳಲ್ಲಿ ಈಗಾಗಲೇ ಸಂಭ್ರಮಾಚರಣೆ ಶುರು ಆಗಿದೆ.

  ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  Tollywood actor Naga Chaitanya wishes for Actor Shiva Rajkumar and Shraddha Srinath's 'Rustum' kannada movie. 'Rustum' is directed by Ravi Varma producing by Jayanna combines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X