»   » ಜುಲೈ ಗೆ 'ಆದರ್ಶ' ನ ಆಗಮನ

ಜುಲೈ ಗೆ 'ಆದರ್ಶ' ನ ಆಗಮನ

Posted By:
Subscribe to Filmibeat Kannada

"ಮಳೆ ಬರಲಿ ಮಂಜು ಇರಲಿ" ಹಾಗೂ "ಮಸ್ತ್ ಮಜಾ ಮಾಡಿ" ಚಿತ್ರದ ನಂತರ ನಾಪತ್ತೆಯಾಗಿದ್ದ ಕೊಡಗಿನ ಹುಡುಗ ನಾಗಕಿರಣ್ ಮತ್ತೆ 'ಆದರ್ಶ' ಚಿತ್ರದ ಮೂಲಕ ಗಾಂಧಿನಗರದತ್ತ ಮುಖ ಮಾಡಿದ್ದಾರೆ.

ಸಾಯಿಪ್ರಭಾಕರ್ ಆಕ್ಷನ್ ಕಟ್ ಹೇಳಿರುವ 'ಆದರ್ಶ' ಚಿತ್ರದಲ್ಲಿ ನಾಗ ಕಿರಣ್ ಗೆ ನಾಯಕಿಯಾಗಿ ಮಂಗಳೂರು ಬೆಡಗಿ ಪ್ರಜ್ಜು ಪೂವಯ್ಯ ಜೊತೆಯಾಗಲಿದ್ದಾರೆ. "ಭೀಮಾತೀರದಲ್ಲಿ" ಚಿತ್ರದ ನಂತರ ಇದೀಗ "ಆದರ್ಶ" ಚಿತ್ರದಲ್ಲಿ ಕಮ್ ಬ್ಯಾಕ್ ಆಗಿದ್ದಾರೆ.

Naga Kiran 'Adarsha' film likely to release in July

ಪ್ರೇಮಕಥಾ ಹಂದರವಿರುವ ಈ ಚಿತ್ರಕ್ಕೆ ಬೆಂಗಳೂರಿನ ಸಂಭ್ರಮ ಕಾಲೇಜು, ಕಳಸ, ಚಿಕ್ಕಮಗಳೂರು, ಸೇರಿದಂತೆ ಮಲೆನಾಡಿನ ರಮ್ಯ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ "ಆದರ್ಶ" ಚಿತ್ರಕ್ಕೆ ಸೆನ್ಸಾರ್ ನಿಂದ 'ಯು' ಅರ್ಹತಾಪತ್ರ ಸಿಕ್ಕಿದ್ದು, ಇದೇ ಜುಲೈ ಅಂತ್ಯದೊಳಗೆ ತೆರೆಗೆ ಬರುವ ತಯಾರಿಯಲ್ಲಿದೆ.

Naga Kiran 'Adarsha' film likely to release in July

ಚಿತ್ರಕ್ಕೆ ರಾಘವ ಉಮೇಶ್ ಛಾಯಾಗ್ರಹಣ, ಬಿ.ಆರ್. ಹೇಮಂತ್ ಕುಮಾರ್ ಸಂಗೀತ ಹಾಗೂ ಡಿ.ಆರ್. ರವಿ ಸಂಕಲನವಿದೆ. ತಾರಾಗಣದಲ್ಲಿ ತರಂಗ ವಿಶ್ವ, ಕುರಿ ರಂಗ, ಪದ್ಮಾವಾಸಂತಿ ಮತ್ತು ಬ್ಯಾಂಕ್ ಜನಾರ್ಧನ್ ಮೊದಲಾದವರಿದ್ದಾರೆ.

English summary
Kannada movie 'Adarsha' all set to release by end of July month. The Movie features Nagakiran and Praju poovaiah, Directed by Sai Prabhakar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada