For Quick Alerts
  ALLOW NOTIFICATIONS  
  For Daily Alerts

  ಶ್ರೀರೆಡ್ಡಿ ವಿರುದ್ಧ ಸಿಡಿದೆದ್ದ 'ಮೆಗಾಫ್ಯಾಮಿಲಿ': ನಮ್ಮ ತಂಟೆಗೆ ಬಂದ್ರೆ ಹುಷಾರ್.!

  By Bharath Kumar
  |

  ತೆಲುಗು ಇಂಡಸ್ಟ್ರಿಯಲ್ಲಿ 'ಕಾಸ್ಟಿಂಗ್ ಕೌಚ್'ನಿಂದ ಆರಂಭವಾದ ಪ್ರತಿಭಟನೆ ಈಗ ಬೇರೆಯದ್ದೇ ರೂಪ ಪಡೆದುಕೊಂಡಿದೆ. ಟಾಲಿವುಡ್ ನ ದೊಡ್ಡ ದೊಡ್ಡ ನಟರು ಎನಿಸಿಕೊಂಡಿರುವವರ ಕುಟುಂಬದ ಮೇಲೆ ಆರೋಪಗಳ ಸುರಿಮಳೆ ಆಗುತ್ತಿದೆ.

  'ಕಾಸ್ಟಿಂಗ್ ಕೌಚ್'ಗೆ ಸಂಬಂಧ ಪಟ್ಟಂತೆ ಸೆನ್ಸೆಷ್ನಲ್ ಹೇಳಿಕೆಗಳನ್ನ ನೀಡಿ ಟಾಕ್ ಆಫ್ ದಿ ಇಂಡಸ್ಟ್ರಿಯಾಗಿರುವ ಶ್ರೀರೆಡ್ಡಿ ವಿರುದ್ಧ ಈಗ ಮೆಗಾಸ್ಟಾರ್ ಫ್ಯಾಮಿಲಿ ಸಿಡಿದೆದ್ದಿದೆ. ಇತ್ತೀಚಿಗಷ್ಟೆ ಪವನ್ ಕಲ್ಯಾಣ್ ಬಗ್ಗೆ ಅವಹೇಳನಕಾರಿ ಆರೋಪ ಮಾಡಿದ್ದ ಶ್ರೀರೆಡ್ಡಿ ಮೇಲೆ ಚಿರಂಜೀವಿ ಸಹೋದರ ನಾಗಬಾಬು ಆಕ್ರೋಶ ಹೊರಹಾಕಿದ್ದಾರೆ.

  ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡ ಚಿತ್ರ ನಟಿ ಕವಿತಾಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ಕೌಂಟರ್ ಕೊಟ್ಟ ಕನ್ನಡ ಚಿತ್ರ ನಟಿ ಕವಿತಾ

  ನಮ್ಮ ಫ್ಯಾಮಿಲಿ ವಿಚಾರಕ್ಕೆ ಬರಬೇಡಿ. ನಮ್ಮ ತಂಟೆಗೆ ಬಂದ್ರೆ ಆಮೇಲೆ ಏನಾಗುತ್ತೋ ಗೊತ್ತಿಲ್ಲ. ಪವನ್ ಕಲ್ಯಾಣ್ ಸುಮ್ಮನಿದ್ದಾರೇ ಅಂದ್ರೆ, ನಾವು ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ನಾಗಬಾಬು ತೀವ್ರ ವಾಗ್ದಾಳಿ ನಡೆಸಿದ್ರು....ಮುಂದೆ ಓದಿ.....

  ಪವನ್ ಮಾಡಿದ್ದ ತಪ್ಪೇನು.?

  ಪವನ್ ಮಾಡಿದ್ದ ತಪ್ಪೇನು.?

  ''ನಿಮಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಕ್ಕೆ ಪೊಲೀಸರಿಗೆ ದೂರು ನೀಡಿ ಅಂದ್ರು. ಅದು ತಪ್ಪಾ. ಯಾರಿಗಾದರೂ ಅನ್ಯಾಯವಾದರೇ ಪೊಲೀಸ್ ಸ್ಟೇಷನ್ ಗೆ ಹೋಗಲೇಬೇಕು. ಅದನ್ನೇ ಪವನ್ ಹೇಳಿದ್ದಾರೆ. ಅದು ತಪ್ಪು ಎಂದು ಅವರನ್ನ ನಿಂದಿಸುವುದು ಎಷ್ಟು ಸರಿ'' ಎಂದು ಪವನ್ ಕಲ್ಯಾಣ್ ಸಹೋದರ ನಾಗಬಾಬು ಪ್ರಶ್ನಿಸಿದ್ದಾರೆ.

  ಮೆಗಾಫ್ಯಾಮಿಲಿ ಸುಮ್ಮನೆ ಇರಲ್ಲ

  ಮೆಗಾಫ್ಯಾಮಿಲಿ ಸುಮ್ಮನೆ ಇರಲ್ಲ

  ''ಮೆಗಾಸ್ಟಾರ್, ಮೆಗಾಫ್ಯಾಮಿಲಿ ಏನೇ ಮಾಡಿದ್ರು, ಸುಮ್ಮನೆ ಕೂತಿರ್ತಾರೆ ಎಂದುಕೊಳ್ಳಬೇಡಿ. ನಾವು ಹೇಗೆ ಪ್ರತಿಕ್ರಿಯಿಸುತ್ತೇವೋ ನಮಗೂ ಕೂಡ ಗೊತ್ತಿಲ್ಲ. ನಮ್ಮ ಸಹನೆಯನ್ನ ಪರೀಕ್ಷಿಸಬೇಡಿ. ದುಡ್ಡು ಕೊಟ್ಟು ಕರೆದ ತಕ್ಷಣ ಮಾಧ್ಯಮದವರು ಬರ್ತಾರೆ, ಅವರು ವಿರುದ್ಧ ಏನೂ ಬೇಕಾದರೂ ಮಾತನಾಡಬಹುದು ಎಂದು ಅಂದುಕೊಳ್ಳಬೇಡಿ. ನಮ್ಮ ಸಹವಾಸಕ್ಕೆ ಬರಬೇಡಿ''.

  ತಮ್ಮ ಮೇಲಿನ ಆರೋಪದ ಬಗ್ಗೆ ನಟ ರಾಜಶೇಖರ್ ಪತ್ನಿ ಜೀವಿತಾ ಸ್ಪಷ್ಟನೆತಮ್ಮ ಮೇಲಿನ ಆರೋಪದ ಬಗ್ಗೆ ನಟ ರಾಜಶೇಖರ್ ಪತ್ನಿ ಜೀವಿತಾ ಸ್ಪಷ್ಟನೆ

  ತಪ್ಪು ಮಾಡಿದ್ರೆ ಬಹಿರಂಗವಾಗಿ ಒಪ್ಪಿಕೊಳ್ಳುವ ಧಮ್ ಇದೆ

  ತಪ್ಪು ಮಾಡಿದ್ರೆ ಬಹಿರಂಗವಾಗಿ ಒಪ್ಪಿಕೊಳ್ಳುವ ಧಮ್ ಇದೆ

  ''ಒಬ್ಬ ವ್ಯಕ್ತಿಯನ್ನ ಎದುರಿಸಲು ಸಾಧ್ಯವಾಗದಿದ್ದಾಗ, ಅವನ ವ್ಯಕ್ತಿತ್ವಕ್ಕೆ ಧಕ್ಕೆ ತರಬಹುದು ಎಂದು ಯೋಚನೆ ಮಾಡ್ತಿದ್ದಾರೆ. ತಪ್ಪು ಮಾಡಿದ್ರೆ, ಬಹಿರಂಗವಾಗಿ ಒಪ್ಪುಕೊಳ್ಳುವಂತಹ ಧಮ್ ಇದೆ ನನ್ನ ತಮ್ಮನಿಗೆ''.

  ನಂಬರ್ 1 ಸ್ಟಾರ್

  ನಂಬರ್ 1 ಸ್ಟಾರ್

  ''ನಮಗೆ ಎಲ್ಲವೂ ಇದೆ. ನಿನಗೇಕೆ ಈ ರಾಜಕೀಯ ಎಂದು ಕೇಳಿದ್ರೂ ಕೇಳಲಿಲ್ಲ. ಜನರ ಮಧ್ಯೆ ಹೋಗಬಿಟ್ಟ. ಸಿನಿಮಾದಲ್ಲಿ ನಂಬರ್ ವನ್ ಸ್ಟಾರ್. ಕೋಟಿ ಕೋಟಿ ರೂಪಾಯಿ ಅವನ ಬಳಿ ಇದೆ. ಜನರಿಗೆ ಏನಾದರೂ ಮಾಡಬೇಕು ಎಂದು ಹೋಗಿದ್ದಾನೆ. ಅಂತಹವರನ್ನ ನಿಂದಿಸುತ್ತೀರಾ. ಸುಮ್ಮನೆ ಸೈಲೆಂಟ್ ಆಗಿದ್ದಾನೆ ಅಂದ್ರೆ, ಯೋಚನೆ ಮಾಡಿ. ನೆನಸಿಕೊಂಡ್ರೆ ನಿಮ್ಮ ಜಾತಕ ಜಾಲಾಡುತ್ತಾನೆ'' ಎಂದು ಕಿಡಿಕಾರಿದರು.

  ಸಾಕ್ಷಿ ಇದ್ರೆ ಕೊಡಿ ಎಲ್ಲರನ್ನ ಕಿತ್ತಾಕೋಣ'

  ಸಾಕ್ಷಿ ಇದ್ರೆ ಕೊಡಿ ಎಲ್ಲರನ್ನ ಕಿತ್ತಾಕೋಣ'

  ''ನಿಮ್ಮ ಹತ್ರಾ ಸಾಕ್ಷಿ ಇದ್ರೆ, ಪೊಲೀಸರಿಗೆ ಕೊಡಿ ಎಲ್ಲರನ್ನು ಒಂದೇ ಸಲ ಕಿತ್ತಾಕೋಣ. ಅದನ್ನ ಬಿಟ್ಟು ನಮ್ಮ ಹತ್ರಾ ಅದು ಇದೆ, ಇದು ಇದೆ ಅಂತ ಆಟಾಡ್ತಿದ್ದೀರಾ. ಇದೆಲ್ಲ ಬೇಡ. ಇಲ್ಲಿಗೆ ನಿಲ್ಲಿಸಿ'' ಎಂದು ನಾಗಬಾಬು ಎಚ್ಚರಿಕೆ ನೀಡಿದ್ದಾರೆ.

  ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿದ ನಟಿ

  ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಆರೋಪ ಮಾಡಿದ್ರು

  ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಆರೋಪ ಮಾಡಿದ್ರು

  ಇತ್ತೀಚಿಗಷ್ಟೆ ಪವನ್ ಕಲ್ಯಾಣ್ ಅವರ ವಿರುದ್ಧ ಮಾತನಾಡಿದ್ದ ಶ್ರೀರೆಡ್ಡಿ ಅವರ ವೈಯಕ್ತಿಕ ವಿಚಾರದ ಬಗ್ಗೆ ಕಾಮೆಂಟ್ ಮಾಡಿದ್ದರು. ಮೂರು ಮದುವೆ ಆಗಿರುವ ನೀವು ನಮಗೆ ಪೊಲೀಸ್ ಸ್ಟೇಷನ್ ಗೆ ಹೋಗಿ ಅಂತ ಸಲಹೆ ಕೊಡ್ತೀರಾ ಎಂದು ನಿಂದಿಸಿದ್ದರು. ಅದಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಸಹೋದರ ನಾಗಬಾಬು ಇಂದು ಶ್ರೀರೆಡ್ಡಿ ಸೇರಿದಂತೆ ಹಲವರಿಗೆ ವಾರ್ನಿಂಗ್ ನೀಡಿದ್ದಾರೆ.

  English summary
  Actor Nagababu reacted on recent development on film Industry in media. He speaks about allegations made on the Industry. He promised that he will take care of issues related to Industry. He requested that.. Do not go into Pawan Kalyan personal life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X