For Quick Alerts
  ALLOW NOTIFICATIONS  
  For Daily Alerts

  ಏಂಜಲ್ ಜೊತೆ ನಾಗಕಿರಣ್ 'ಮಸ್ತ್ ಮಜಾ' ನೋಡಿ!

  |

  ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಹೊಸ ಚಿತ್ರ ಸೆಟ್ಟೇರಿದೆ. ಅದು ನಾಯಕನಟ ನಾಗಕಿರಣ್ ನಾಯಕತ್ವದ 'ಏಂಜಲ್.' ಕಳೆದ ಗುರುವಾರ, ಜೂನ್ 07, 2012 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಏಂಜಲ್ ಚಿತ್ರದ ಮಹೂರ್ತ ನಡೆಯಿತು. ಮುಹೂರ್ತದ ಮುಖ್ಯ ಆಕರ್ಷಣೆಯಾಗಿದ್ದವರು ಚಿತ್ರಕ್ಕೆ ಚಾಲನೆ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.

  ಏಂಜಲ್ ಚಿತ್ರದ ನಾಯಕ, ನಟ ನಾಗಕಿರಣ್ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪರಿಚಿತ ಮುಖ. ಕೊಡಗಿನ ಈ ಸ್ಪುರದ್ರೂಪಿ ಕನ್ನಡಿಗ, ಕನ್ನಡ ಭಾಷೆಯ ಚಿತ್ರಗಳಲ್ಲಿ ಮಾತ್ರವಲ್ಲದೇ ತಮಿಳು ಹಾಗೂ ತೆಲುಗಿನಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ 'ವಸಂತಕಾಲ', 'ಮರುಜನ್ಮ', 'ಪಲ್ಲವಿ ಇಲ್ಲದ ಚರಣ', ಇಜ್ಜೋಡು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ.

  ಮಸ್ತ್ ಮಜಾ ಮಾಡಿ, ಮಳೆ ಬರಲಿ ಮಂಜೂ ಇರಲಿ, ಪರಿ ಮತ್ತು ಲಹರಿ ಚಿತ್ರಗಳಲ್ಲೂ ನಾಗಕಿರಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮುಸ್ತಾನ್ ನಿರ್ದೇಶನದ 'ಯಾರಿಂದ ದೇವತೈ' ಹಾಗೂ 'ಥಲಪುಲ್ಲಾ,' ಇವರ ತಮಿಳು ಚಿತ್ರಗಳು. ಏಂಜಲ್ ಚಿತ್ರದಲ್ಲಿ 'ಒನ್ ಅಂಡ್ ಓನ್ಲಿ' ನಾಯಕರಾಗಿ ಮಿಂಚಲಿರುವ ನಾಗಕಿರಣ್ ರಿಗೆ ನಾಯಕಿಯರಾಗಿ 'ರೂಪಿಕಾ' ಹಾಗೂ 'ತುಷಾಲಿ' ಆಯ್ಕೆಯಾಗಿದ್ದಾರೆ.

  ಚೇತನ್ ಚಂದ್ರ ನಾಯಕತ್ವದ 'ಸಿಂಹರಾಶಿ' ಚಿತ್ರದಲ್ಲೂ ನಟಿಸುತ್ತಿರುವ ಚೆಲುವಿನ ಚಿಲಿಪಿಲಿ ಖ್ಯಾತಿಯ ರೂಪಿಕಾ ಏಂಜಲ್ ಚಿತ್ರಕ್ಕೂ ನಾಯಕಿ. ಇನ್ನು ತುಷಾಲಿ ಮಾಡೆಲಿಂಗ್ ಕ್ಷೇತ್ರದಿಂದ ಸ್ಯಾಂಡಲ್ ವುಡ್ ಸಿನಿಮಾಕ್ಕೆ ಜಿಗಿದ ಜಿಂಕೆ. ಈ ಇಬ್ಬರು ಬೆಡಗಿಯರಿಗೆ ಏಕೈಕ ನಾಯಕರಾಗಿರುವ ಅದೃಷ್ಟವಂತ ನಾಗಕಿರಣ್.

  ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ದಯಕುಮಾರ್ ವಿ ರಾವ್ ಅವರದು. ಇವರು ಗೀತಪ್ರಿಯ ಹಾಗೂ ಸುವರ್ಣ ಸುಂದರನಾಥ್ ಮುಂತಾದ ಖ್ಯಾತ ನಿರ್ದೇಶಕರ ಬಳಿ ಪಳಿಗಿದವರು. ಈಗ ಏಂಜಲ್ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಲಿದ್ದಾರೆ.

  "ಇದೊಂದು ತೀರಾ ವಿಭಿನ್ನ ತ್ರಿಕೋನ ಪ್ರೇಮಕಥೆ. ಉತ್ತಮ ಚಿತ್ರಕಥೆ ಹಾಗೂ ಬಿಗಿಯಾದ ನಿರೂಪಣೆಯಿಂದ ಗಮನ ಸೆಳೆಯಲಿದೆ" ಎಂದಿದ್ದಾರೆ ನಿರ್ದೇಶಕ ದಯಕುಮಾರ್. ಈ ಚಿತ್ರಕ್ಕಾಗಿ ನಿರ್ದೇಶಕರು ಸಾಕಷ್ಟು ವಿಶೇಷ ಹೋಮ್ ವರ್ಕ್ ಮಾಡಿದ್ದಾರೆಂಬುದು ತಿಳಿದುಬಂದಿದೆ.

  ಏಂಜಲ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ ಹಾಸ್ಯನಟರೆಂದು ಖ್ಯಾತರಾಗಿರುವ ಸಂಭಾಷಣೆಕಾರ ಮೋಹನ್ ಜುನೇಜಾ. ಇವರು ಹದಿನೈದಕ್ಕೂ ಹೆಚ್ಚು ಚಿತ್ರಗಳಿಗೆ ಈಗಾಗಲೇ ಸಂಭಾಷಣೆ ಬರೆದಿರುವವರು. ಈ ಚಿತ್ರದಲ್ಲಿ ಒಂದು ಹಾಡನ್ನೂ ಕೂಡ ಮೋಹನ್ ಜುನೇಜಾ ಹಾಡಲಿರುವುದು ವಿಶೇಷ.

  ಏಂಜಲ್ ಚಿತ್ರದ ನಿರ್ಮಾಪಕರು ಜ್ಯೋತಿ ರಘುನಾಥ್. ಇವರು ಈ ಮೊದಲು 'ಲೈಫ್ ಸ್ಟೈಲ್' ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಈಗ ಈ ಏಂಜಲ್ ಚಿತ್ರವನ್ನು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಅವರದು. ಶೇ. 70 ಭಾಗದಷ್ಟು ಚಿತ್ರೀಕರಣ ಬೆಂಗಳೂರಿನಲ್ಲಿ ಹಾಗೂ ಉಳಿದ ಭಾಗ ಭಟ್ಕಳದಲ್ಲಿ ನಡೆಯಲಿದೆ.

  ಅನಂತ್ ಆರ್ಯನ್ ಸಂಗೀತ ಹಾಗೂ ನಾರಾಯಣ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ. ಈಗಷ್ಟೇ ಮುಹೂರ್ತ ಆಚರಿಸಿಕೊಂಡು ಸಿದ್ಧವಾಗಿರುವ ಚಿತ್ರತಂಡ, ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದೆ. ಹ್ಯಾಂಡ್ ಸಮ್ ಹೀರೋ ನಾಗಕಿರಣ್, ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರಲಿದ್ದಾರೆ. ಜೊತೆಯಲ್ಲಿ ರೂಪಿಕಾ ಹಾಗೂ ತುಷಾಲಿ ಕಚಗುಳಿ ಪ್ರೇಕ್ಷಕರಿಗೆ ಬೋನಸ್. (ಒನ್ ಇಂಡಿಯಾ ಕನ್ನಡ)

  English summary
  Nagkiran starring ‘Angel’ Kannada movie launched on 07 June 2012 at Kanteerava studios in presence of challenging star Darshan. Tushali and Rupika are heroines for Handsome Hero Nagkiarn. Dayakumar V Rao directs this movie and Jyothi Raghunath is the producer.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X