»   » 'ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!

'ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!

Posted By:
Subscribe to Filmibeat Kannada

ವಿಶಿಷ್ಟ ಕಥೆ ಹೊಂದಿರುವ, ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯೋಗ ಮಾಡಿರುವ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ ಅಂತ ಹೇಳಲಾಗಿರುವ 'ನಾಗರಹಾವು' ಚಿತ್ರ ಜುಲೈ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಕನ್ನಡ, ತೆಲುಗು, ತಮಿಳು, ಸೇರಿದಂತೆ ಐದು ಭಾಷೆಗಳಲ್ಲಿ ಸುಮಾರು 1,300 ಸ್ಕ್ರೀನ್ ಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡುವ ಯೋಜನೆ 'ನಾಗರಹಾವು' ಚಿತ್ರತಂಡಕ್ಕಿದೆ. [ಡಾ.ವಿಷ್ಣುವರ್ಧನ್ ರವರ 201ನೇ ಸಿನಿಮಾ 'ನಾಗರಹಾವು'!]

nagarahaavu-movie-team-to-spend-rs-4-crore-for-promotion

ನವೀನ ತಂತ್ರಜ್ಞಾನದ ಮೂಲಕ ಬೆಳ್ಳಿತೆರೆ ಮೇಲೆ ಅಪ್ಪಳಿಸಲಿರುವ 'ನಾಗರಹಾವು' ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡುವ ಸಲುವಾಗಿ ಚಿತ್ರತಂಡ ಮೀಸಲಿಟ್ಟಿರುವ ಹಣ ಎಷ್ಟು ಗೊತ್ತಾ? ಬರೋಬ್ಬರಿ 4 ಕೋಟಿ.!

ನಂಬಿದ್ರೆ ನಂಬಿ, 'ನಾಗರಹಾವು' ಚಿತ್ರದ ಪ್ರಮೋಷನ್ ಸಲುವಾಗಿ ಸುಮಾರು 4 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಮಾಪಕರಾದ ಸುಹೈಲ್ ಅನ್ಸಾರಿ ಹಾಗೂ ಧವಳ್ ಜಯಂತಿ ಲಾಲ್ ಗಡ ತಯಾರಿದ್ದಾರೆ. ಪ್ರಮೋಷನ್ ಟೀಮ್ ಮಾಡಲು 35 ಮಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಿಕೊಂಡಿದ್ದಾರಂತೆ. ['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

ಈಗಾಗಲೇ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಶಿಷ್ಟ ಸ್ಪರ್ಧೆಗೆ ಚಿತ್ರತಂಡ ಚಾಲನೆ ನೀಡಿದೆ. [ವಿಷ್ಣು ಅವರ 3D ಪೋಸ್ಟರ್ ಮುಂದೆ ಸೆಲ್ಫಿ ಕ್ಲಿಕ್ಕಿಸಿ ಆಕರ್ಷಕ ಬಹುಮಾನ ಗೆಲ್ಲಿ]

ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ಸಿಗ್ಬೇಕು ಎನ್ನುವ ಕಾರಣಕ್ಕೆ, ಭಾರತದಾದ್ಯಂತ ಇರುವ ಎಲ್ಲಾ ಮಾಲ್ ಗಳಲ್ಲಿ ಸಾಹಸಸಿಂಹ ಡಾ.ವಿಷ್ಣು ರವರ 'ನಾಗರಹಾವು' 3D ಸ್ಟ್ಯಾಂಡ್ ಇಡಲಾಗಿದ್ಯಂತೆ.

ಇದು ಮೊದಲ ಹೆಜ್ಜೆ ಅಷ್ಟೇ. ಈ ತಿಂಗಳ ಅಂತ್ಯದಲ್ಲಿ 'ನಾಗರಹಾವು' ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗುವ ಸಮಾರಂಭವನ್ನು ಅದ್ಧೂರಿ ಅಗಿ ಮಾಡಬೇಕು ಎನ್ನುವ ಸಲುವಾಗಿ ತಯಾರಿ ನಡೆಯುತ್ತಿದೆ. ಅಲ್ಲಿಗೆ, 'ನಾಗರಹಾವು' ಚಿತ್ರಕ್ಕೆ ಅಬ್ಬರದ ಪ್ರಚಾರ ಸಿಗುವುದು ಗ್ಯಾರೆಂಟಿ.

English summary
According to the sources, Kannada Movie 'Nagarahaavu' producers have decided to spend Rs 4 crore exclusively for the promotions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada