For Quick Alerts
  ALLOW NOTIFICATIONS  
  For Daily Alerts

  ಟ್ರೆಂಡ್ ನಲ್ಲಿ 'ನಾಗರಹಾವು' ಟೀಸರ್: ಇತಿಹಾಸ ಸೃಷ್ಟಿಸಲು ಮತ್ತೆ ಬಂದ ರಾಮಾಚಾರಿ

  By Naveen
  |
  ಜೋರಾಗಿದೆ ಸಾಹಸ ಸಿಂಹನ ಘರ್ಜನೆ...!!! | Filmibeat Kannada

  ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಮಹತ್ವದ ಸಿನಿಮಾ ಹಾಗೂ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ್ದ 'ನಾಗರಹಾವು' ಚಿತ್ರ ಮತ್ತೆ ಬರುತ್ತಿದೆ. ಪುಟ್ಟಣ್ಣ ಕಣಗಾಲ್ ಅವರ ಶ್ರೇಷ್ಟ ಸಿನಿಮಾ ಈಗ ಮತ್ತೆ ರೀ ರಿಲೀಸ್ ಆಗುತ್ತಿದೆ.

  ಕಿಚ್ಚ ಬಿಡುಗಡೆ ಮಾಡಿದ ಹೊಸ ನಾಗರಹಾವು ಟೀಸರ್ ಕಿಚ್ಚ ಬಿಡುಗಡೆ ಮಾಡಿದ ಹೊಸ ನಾಗರಹಾವು ಟೀಸರ್

  ನಿನ್ನೆ 'ನಾಗರಹಾವು' ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ನಟ ಸುದೀಪ್ ಟೀಸರ್ ಅನ್ನು ರಿಲೀಸ್ ಮಾಡಿದ್ದರು. ಆದರೆ ಈಗ ಆ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ಸಿನಿಮಾದ ಟೀಸರ್ ಯೂ ಟ್ಯೂಬ್ ನಲ್ಲಿ 14ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಬರೀ 13 ಗಂಟೆಗಳಲ್ಲಿ 1 ಲಕ್ಷದ 88 ಸಾವಿರಕ್ಕಿಂತ ಅಧಿಕ ಜನರು ವೀಕ್ಷಿಸಿದ್ದಾರೆ. ಸಾವಿರಾರೂ ವಿಷ್ಣು ಅಭಿಮಾನಿಗಳು ಟೀಸರ್ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

  ಅಂದಹಾಗೆ, 'ನಾಗರಹಾವು' ಸಿನಿಮಾವನ್ನು ಈಗ ಮತ್ತೆ ರಿಲೀಸ್ ಮಾಡುವುದಕ್ಕೆ ಹೊರಟಿರುವುದು ರವಿಚಂದ್ರನ್ ಅವರ ಸಹೋದರ ಬಾಲಾಜಿ. ವೀರಸ್ವಾಮಿ ಅವರ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದ ಈ ಸಿನಿಮಾ ಹೊಸ ತಂತ್ರಜ್ಙಾನದೊಂದಿಗೆ ಮತ್ತೆ ಬೆಳ್ಳಿತೆರೆ ಮೇಲೆ ಮೂಡುತ್ತಿದೆ.

  7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ ರಾಮಾಚಾರಿಯ ಘರ್ಜನೆ ಇನ್ನಷ್ಟು ಜೋರಾಗಿದೆ. ಟೀಸರ್ ವಿಷ್ಣು ಅಭಿಮಾನಿಗಳಲ್ಲಿ ಹೊಸ ಕ್ರೇಜ್ ಶುರು ಮಾಡಿದ್ದು, ಸಿನಿಮಾಗಾಗಿ ಕಾಯುತ್ತಿದ್ದಾರೆ. ಆದರೆ ಇನ್ನು ಚಿತ್ರದ ಬಿಡುಗಡೆಯ ದಿನಾಂಕ ಬಹಿರಂಗ ಆಗಿಲ್ಲ.

  English summary
  Kannada actor Vishnuvardhan's Nagarahavu movie new version teaser is 14th trending video in youtube. Kichcha Sudeep has released this teaser in his Twitter account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X