»   » ಅಬ್ಬಬ್ಬಾ.. 'ನಾಗರಹಾವು' ಟಿಕೆಟ್ ಗಾಗಿ ರಶ್ಯೋ ರಶ್ಯು!

ಅಬ್ಬಬ್ಬಾ.. 'ನಾಗರಹಾವು' ಟಿಕೆಟ್ ಗಾಗಿ ರಶ್ಯೋ ರಶ್ಯು!

Posted By:
Subscribe to Filmibeat Kannada

'ಸಾಹಸ ಸಿಂಹ' ವಿಷ್ಣುವರ್ಧನ್ ಅವರ ಬಹುಕೋಟಿ ವೆಚ್ಚದ 201ನೇ ಸಿನಿಮಾ 'ನಾಗರಹಾವು' ತೆರೆಗೆ ಬರಲು ಸಜ್ಜಾಗಿದೆ. ಇದೇ ಅಕ್ಟೋಬರ್ 14, ಶುಕ್ರವಾರದಂದು, ನಾಲ್ಕು ಭಾಷೆಯಲ್ಲಿ ಏಕಕಾಲದಲ್ಲಿ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.

ಕನ್ನಡದಲ್ಲಿ 'ನಾಗರಹಾವು', ತೆಲುಗಿನಲ್ಲಿ 'ನಾಗಭರಣಂ', ಮತ್ತು ತಮಿಳಿನಲ್ಲಿ 'ಶಿವನಾಗಂ' ಎಂಬ ಹೆಸರಿನಲ್ಲಿ ಈ ಸಿನಿಮಾ ತೆರೆ ಕಾಣುತ್ತಿದೆ. ಇನ್ನು ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಮುಖ್ಯ ಚಿತ್ರಮಂದಿರ ಭೂಮಿಕದಲ್ಲಿ ಟಿಕೆಟ್ ಹಾಟ್ ಕೇಕ್ ನಂತೆ ಬಿಕರಿಯಾಗುತ್ತಿದೆ.[ಸೆನ್ಸಾರ್ ನಲ್ಲಿ 'ನಾಗರಹಾವು' ಪ್ರತ್ಯಕ್ಷ: ಸದ್ಯದಲ್ಲೇ 'ನಾಗರಾಜ'ನ ದರ್ಶನ]


ನಾಡಹಬ್ಬ ದಸರಾ ಸಂಭ್ರಮದ ಜೊತೆಗೆ 'ನಾಗರಹಾವು' ಹಬ್ಬ ಕೂಡ ಆರಂಭವಾಗಿದ್ದು, ರಮ್ಯಾ ಮತ್ತು 'ಸಾಹಸ ಸಿಂಹ' ವಿಷ್ಣುವರ್ಧನ್ ಅವರ ಅಭಿಮಾನಿಗಳು ಈಗಿನಿಂದಲೇ ಟಿಕೆಟ್ ಖರೀದಿ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಮುಂದೆ ಓದಿ....


ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಸೋಲ್ಡ್ ಔಟ್

ದಸರಾ ಹಬ್ಬದ ಪ್ರಯುಕ್ತ ಸಾಲು-ಸಾಲು ರಜೆಗಳಿರುವ ಕಾರಣ ಎಲ್ಲಿ ಟಿಕೆಟ್ ಸಿಗಲ್ವೋ ಅಂತ ಅಭಿಮಾನಿಗಳು ಈಗಿನಿಂದಲೇ ಮುಗಿ ಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ.['ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್]


ಭೂಮಿಕದಲ್ಲಿ ನೂಕು-ನುಗ್ಗಲು

ಬೆಂಗಳೂರಿನ ಕೆ,ಜಿ ರಸ್ತೆಯಲ್ಲಿರುವ 'ಭೂಮಿಕ' ಚಿತ್ರಮಂದಿರದಲ್ಲಿ ಇಂದಿನಿಂದ ಟಿಕೆಟ್ ಹಂಚುತ್ತಿದ್ದು, ಅಭಿಮಾನಿಗಳು ನಾ ಮುಂದು-ತಾ ಮುಂದು ಅಂತ ಟಿಕೆಟ್ ಗಾಗಿ ಒದ್ದಾಡುತ್ತಿದ್ದಾರೆ. ಟಿಕೆಟ್ ಸಿಕ್ಕವರು ಅಂತೂ ಪ್ರಪಂಚ ಸಿಕ್ಕಷ್ಟು ಖುಷಿಯಿಂದ ಬೀಗಿದ್ದಾರೆ.


ಮೂರು ದಿನದ ಟಿಕೆಟ್ ಸೋಲ್ಡ್ ಔಟ್

ಭೂಮಿಕ ಚಿತ್ರಮಂದಿರದಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೂರು ದಿನದ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ.


ಕೇಕ್ ಕಟ್ ಮಾಡಿದ ಅಭಿಮಾನಿಗಳು

ಭೂಮಿಕ ಚಿತ್ರಮಂದಿರದ ಎದುರುಗಡೆ ವಿಷ್ಣುವರ್ಧನ್ ಅಭಿಮಾನಿ ಬಳಗದವರು ಸುಮಾರು 25 ಕೆ.ಜಿ ತೂಕದ ಕೇಕ್ ಕಟ್ ಮಾಡಿ ಟಿಕೆಟ್ ಹಂಚುವಿಕೆಗೆ ಚಾಲನೆ ನೀಡಿದ್ದಾರೆ. ವಿಷ್ಣು ಅವರಿಗೆ ಜೈಕಾರ ಹಾಕಿದ ಅಭಿಮಾನಿ ಬಳಗ ಸಿನಿಮಾ 100 ದಿನ ಪಕ್ಕಾ ಅಂತ ಘೋಷಣೆ ಮಾಡಿಯೇ ಬಿಟ್ಟರು.


ಬುಕ್ ಮೈ ಶೋ ಫುಲ್

ಈಗಾಗಲೇ ಬುಕ್ ಮೈ ಶೋನಲ್ಲೂ ಟಿಕೆಟ್ ಬುಕ್ ಓಪನಿಂಗ್ ಆಗಿದ್ದು, ಬಹುತೇಕ ಎಲ್ಲಾ ಚಿತ್ರಮಂದಿರಗಳು ಈಗಲೇ ಭರ್ತಿ ಅಂತ ತೋರಿಸುತ್ತಿವೆ.


ಇನ್ನೂ ಬುಕ್ ಮಾಡಿಲ್ವ?

ನೀವು 'ನಾಗರಹಾವು' ಸಿನಿಮಾದ ಟಿಕೆಟ್ ಇನ್ನೂ ಬುಕ್ ಮಾಡಿಲ್ವಾ?, ಹಾಗಿದ್ರೆ ಈಗ್ಲೆ ಬುಕ್ ಮೈ ಶೋ ನೋಡಿ ಮತ್ತು ಭೂಮಿಕ ಚಿತ್ರಮಂದಿರಕ್ಕೆ ದೌಡಾಯಿಸಿ.


'ಅರುಂಧತಿ' ನಿರ್ದೇಶಕರ ಕಮಾಲ್

ತೆಲುಗಿನ 'ಅರುಂಧತಿ' ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇವರ ಸಿನಿಮಾ ಅಂದ್ರೆ ಖಂಡಿತ ಕೊಂಚ ಕುತೂಹಲ ಜಾಸ್ತಿ ಇರುತ್ತೆ. ಅದಕ್ಕೆ ತಕ್ಕಂತೆ ಟ್ರೈಲರ್ ಮತ್ತು ಹಾಡುಗಳು ಪುಷ್ಠಿ ನೀಡಿವೆ. ಇನ್ನು ನವೀನ ತಂತ್ರಜ್ಞಾನದಿಂದ ವಿಷ್ಣು ಅವರನ್ನು ತೆರೆ ಮೇಲೆ ತೋರಿಸುವ ಪ್ರಯತ್ನಕ್ಕೆ ಅಭಿಮಾನಿಗಳು ಫಿದಾ ಆಗಿ, ಸಿನಿಮಾ ಬಿಡುಗಡೆಗೆ ಕಾತರರಾಗಿದ್ದಾರೆ.


English summary
Kannada movie 'Nagarahavu' bookings opened on Book My Show and Bhoomika theatre Bengaluru, 4 days before Release. Kannada Actress Ramya, Kannada Actor Diganth, Dr Vishnuvardhan in the lead role. The movie is directed by Kodi Ramakrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada