»   » ಮತ್ತೆ ರೀ ರಿಲೀಸ್ ಆಗುತ್ತಿದೆ ಪುಟ್ಟಣ್ಣನ 'ನಾಗರಹಾವು' ಸಿನಿಮಾ

ಮತ್ತೆ ರೀ ರಿಲೀಸ್ ಆಗುತ್ತಿದೆ ಪುಟ್ಟಣ್ಣನ 'ನಾಗರಹಾವು' ಸಿನಿಮಾ

Posted By:
Subscribe to Filmibeat Kannada
ಬೆಳ್ಳಿ ತೆರೆಮೇಲೆ ಮತ್ತೆ ವಿಷ್ಣುದಾದ | Vishnuvardhan's nagarahavu re release |Filmibeat Kannada

ಈಗ ಸಿನಿಮಾಗಳು ರಿಲೀಸ್ ಆದರೆ ಹತ್ತು ದಿನ ಓಡಿದರೆ ದೊಡ್ಡ ಮಾತು. ಕೆಲವು ಸಿನಿಮಾಗಳಿಗಂತು ಬೆಳ್ಳಗೆ ರಿಲೀಸ್ ಆದರೆ ಮದ್ಯಾಹ್ನದ ಶೋಗೆ ಜನರೇ ಇರುವುದಿಲ್ಲ. ಆದರೆ ಇಂದಿಗೂ ಹಳೆಯ ಸಿನಿಮಾ ಮಾತ್ರ ತನ್ನ ಘನತೆಯನ್ನು ಹಾಗೆ ಉಳಿಸಿಕೊಂಡಿದೆ. ಹಳೆಯ ಸಿನಿಮಾಗಳು ಇದೇ ಕಾರಣಕ್ಕೆ ಇಂದಿಗೂ ಮತ್ತೆ ಮತ್ತೆ ಮರು ಬಿಡುಗಡೆಯಾಗುತ್ತಿದೆ.

'ನಾಗರಹಾವು' ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅದ್ಬುತ ಸಿನಿಮಾಗಳಲ್ಲಿ ಒಂದು. ಕನ್ನಡದಲ್ಲಿ ಬಂದ ಎಂದು ಮರೆಯದ ಸಿನಿಮಾಗಳ ಪೈಕಿ 'ನಾಗರಹಾವು' ಸಿನಿಮಾ ಪ್ರಮುಖವಾಗಿದೆ. ವಿಷ್ಣುವರ್ಧನ್ ಸಿನಿ ಕೆರಿಯರ್ ನಲ್ಲಿ ಈ ಸಿನಿಮಾದ ಕೊಡುಗೆ ಬಹಳ ದೊಡ್ಡದಿದೆ. ನಾಗರಹಾವು 1973ರಲ್ಲಿ ಬಿಡುಗಡೆಯಾಗಿತ್ತು. ನಟ ಅಂಬರೀಶ್ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಎನ್ನುವುದು ಮತ್ತೊಂದು ವಿಶೇಷ. ಅಂದಹಾಗೆ, ಇಂತಹ ಸೂಪರ್ ಹಿಟ್ ಸಿನಿಮಾ ಈಗ ಮತ್ತೆ ತೆರೆಗೆ ಬರಲಿದೆ.

Nagarahavu kannada movie will re release soon

ಈ ಸಿನಿಮಾವನ್ನು ನಿರ್ಮಾಪಕ ವೀರಸ್ವಾಮಿ ನಿರ್ಮಾಣ ಮಾಡಿದ್ದರು. ಈಗ ಅವರ ಎರಡನೇ ಪುತ್ರ, ರವಿಚಂದ್ರನ್ ಸಹೋದರ ಬಾಲಾಜಿ ಈ ಚಿತ್ರವನ್ನು ಮತ್ತೆ ರೀ ರಿಲೀಸ್ ಮಾಡುವ ಚಿಂತನೆ ನಡೆಸಿದ್ದಾರೆ. ಹೊಸ ತಂತ್ರಜ್ಙಾನದೊಂದಿಗೆ 7.1 ಡಿಜಿಟಲ್ ಅಲ್ಟ್ರಾ ಸೌಂಡಿಂಗ್ ಎಫೆಕ್ಟ್ ನಲ್ಲಿ 'ನಾಗರಹಾವು' ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿತ್ರವನ್ನು ಮತ್ತೆ ಬಿಡುಗಡೆ ಮಾಡುವ ಪ್ಲಾನ್ ಮಾಡಿರುವ ಬಾಲಾಜಿ ಚಿತ್ರದ ಪ್ರಚಾರಕ್ಕೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಬಳಸಿಕೊಳ್ಳಲಿದ್ದಾರಂತೆ.

English summary
actor Vishnuvardhan super hit movie Nagarahavu kannada movie will re release soon. The movie directed by Puttanna Kanagal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X