»   » ದಿಗಂತ್ 'ಅಸಲಿ'ಯತ್ತು ಬಯಲು ಮಾಡಿದ 'ನಾಗರಹಾವು' ನಿರ್ಮಾಪಕ.!

ದಿಗಂತ್ 'ಅಸಲಿ'ಯತ್ತು ಬಯಲು ಮಾಡಿದ 'ನಾಗರಹಾವು' ನಿರ್ಮಾಪಕ.!

Posted By:
Subscribe to Filmibeat Kannada

ಡಾ.ವಿಷ್ಣುವರ್ಧನ್ ರವರ ಹೆಸರಿನಲ್ಲಿ ಬಡ ರೋಗಿಗಳಿಗೆ ಸಹಾಯ ಮಾಡುತ್ತಾ ಇಷ್ಟು ದಿನ ಒಳ್ಳೆ ರೀತಿಯಲ್ಲಿ ಪ್ರಚಾರ ಪಡೆದು ಕೊಳ್ಳುತ್ತಿದ್ದ 'ನಾಗರಹಾವು' ಚಿತ್ರ ಇದೀಗ 'ವಿವಾದ'ದಿಂದ ಸುದ್ದಿ ಮಾಡುತ್ತಿದೆ.

'ನಾಗರಹಾವು' ಚಿತ್ರದ ನಿರ್ಮಾಪಕರು ತಮಗೆ ನೀಡಬೇಕಾಗಿದ್ದ ಪೂರ್ಣ ಸಂಭಾವನೆ ನೀಡಿಲ್ಲ ಅಂತ ನಟ ದಿಗಂತ್ ಆರೋಪಿಸಿದ್ರು. ಈ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ', 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ಬಳಿ ಪ್ರಶ್ನಿಸಿದಾಗ ಅವರು ಬೇರೆಯದ್ದೇ ಕಥೆ ಹೇಳಿದರು. [ವಿವಾದದಲ್ಲಿ ಸಿಲುಕಿದ ವಿಷ್ಣು 'ನಾಗರಹಾವು': ಸತ್ಯ ಬಾಯ್ಬಿಟ್ಟ ನಟ ದಿಗಂತ್.!]


ದಿಗಂತ್ ಬಗ್ಗೆ 'ನಾಗರಹಾವು' ಚಿತ್ರದ ನಿರ್ಮಾಪಕ ಸಾಜಿದ್ ಖುರೇಶಿ ನೀಡಿರುವ ಸ್ಪಷ್ಟನೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿರಿ....


ಫುಲ್ ಪೇಮೆಂಟ್ ಮಾಡಲಾಗಿದೆ.!

ನಟ ದಿಗಂತ್ ರವರಿಗೆ ಫುಲ್ ಮತ್ತು ಫೈನಲ್ ಪೇಮೆಂಟ್ ಮಾಡಲಾಗಿದೆ ಅಂತ ನಿರ್ಮಾಪಕ ಸಾಜಿದ್ ಖುರೇಶಿ ಸ್ಪಷ್ಟ ಪಡಿಸಿದ್ದಾರೆ.


ಬೇಕಾದ್ರೆ ಈ ಸಂಭಾಷಣೆ ನೋಡಿ....

ದಿಗಂತ್ ರವರ ಅಕೌಂತ್ ಗೆ ಎರಡು ವರೆ ಲಕ್ಷ ರೂಪಾಯಿ ಸಂದಾಯ ಮಾಡಿರುವ ಬಗ್ಗೆ ನಿರ್ಮಾಪಕ ಸಾಜಿದ್ ಖುರೇಶಿ ಕಳುಹಿಸಿರುವ ಮೆಸೇಜ್ ಇದು.


ಫೈನಲ್ ಅಮೌಂಟ್ ಇದೇ.!

''ನಾಗರಹಾವು' ಚಿತ್ರಕ್ಕೆ ಇದೇ ನಿಮ್ಮ ಫುಲ್ ಅಂಡ್ ಫೈನಲ್ ಅಮೌಂಟ್'' ಅಂತ ದಿಗಂತ್ ರವರಿಗೆ ಕಳುಹಿಸಿರುವ ಮೆಸೇಜ್ ನಲ್ಲಿ ನಿರ್ಮಾಪಕ ಸಾಜಿದ್ ಖುರೇಶಿ ಉಲ್ಲೇಖಿಸಿದ್ದಾರೆ.


ಅವತ್ತಿಂದ ದಿಗಂತ್ ಕೈಗೆ ಸಿಗುತ್ತಿಲ್ಲ!

''ಸಂಭಾವನೆ ಕ್ಲಿಯರ್ ಮಾಡಿದ ದಿನದಿಂದ ದಿಗಂತ್ ನಮಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ'' ಎನ್ನುತ್ತಾರೆ ನಿರ್ಮಾಪಕ ಸಾಜಿದ್ ಖುರೇಶಿ.


ಪೋಸ್ಟರ್ ಬಗ್ಗೆ ತಕರಾರು

''ವಿಷ್ಣುವರ್ಧನ್ ರವರ ಪೋಸ್ಟರ್ ಬಿಡುಗಡೆ ಮಾಡುವ ಬಗ್ಗೆ ಕೂಡ ತಕರಾರು ಶುರು ಮಾಡಿದ್ದರು. 'ವಿಷ್ಣು ರವರ (Solo) ಪೋಸ್ಟರ್ ಬೇಡ, ಅದರಲ್ಲಿ ನಾನು ಇರಬೇಕು' ಅಂತ ಒತ್ತಾಯಿಸಿದ್ದರು. ಆದ್ರೆ, 'ಸದ್ಯಕ್ಕೆ ಹೀಗೆ ಇರಲಿ. ಮುಂದಿನ ಪ್ರಮೋಷನ್ ಗಳಲ್ಲಿ ನಿಮ್ಮನ್ನ ಬಳಸಿಕೊಳ್ಳುತ್ತೇವೆ' ಎಂದು ನಾನು ಹೇಳಿದ್ದೆ. ಅವತ್ತಿಂದ 'ನಾಗರಹಾವು' ಪ್ರಮೋಷನ್ ನಲ್ಲಿ ದಿಗಂತ್ ಭಾಗವಹಿಸುತ್ತಿಲ್ಲ'' - ನಿರ್ಮಾಪಕ ಸಾಜಿದ್ ಖುರೇಶಿ.


ಗುರುಕಿರಣ್, ಯೋಗರಾಜ್ ಭಟ್ರನ್ನ ಕೇಳಿ....

''ದಿಗಂತ್ ಯಾಕೆ ಪ್ರಮೋಷನ್ ಗಳಿಗೆ ಬರುತ್ತಿಲ್ಲ? ಅವರ ಬಳಿ ಮಾತನಾಡಿ' ಎಂದು ಕಳೆದ ತಿಂಗಳು ಗುರುಕಿರಣ್ ಮತ್ತು ಯೋಗರಾಜ್ ಭಟ್ ಬಳಿ ಮನವಿ ಮಾಡಿದ್ದೆ. ಬೇಕಾದರೆ ನೀವೇ ಕೇಳಿ'' ಅಂದರು ನಿರ್ಮಾಪಕ ಸಾಜಿದ್ ಖುರೇಶಿ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]


ದಿಗಂತ್ ಆರೋಪ ಏನು?

''ನಾಗರಹಾವು' ಚಿತ್ರದ ನಿರ್ಮಾಪಕರು ಇನ್ನೂ 5 ಲಕ್ಷ ರೂಪಾಯಿ ನೀಡಬೇಕು. ಸಿನಿಮಾ ಶುರು ಆದಾಗ 'ಸಾಯಿ ಕುಮಾರ್' ಹಾಗೂ 'ಡಾ.ವಿಷ್ಣುವರ್ಧನ್' ರವರ ಪಾತ್ರಗಳು ಇರ್ಲಿಲ್ಲ. ನಂತರ ಸಿನಿಮಾದಲ್ಲಿ ಅನೇಕ ಬದಲಾವಣೆಗಳನ್ನ ಮಾಡಲಾಗಿದೆ. ಡಾ.ವಿಷ್ಣುವರ್ಧನ್ ರವರ ಪಾತ್ರ ತುಂಬಾ ಚಿಕ್ಕದ್ದು. ಅದು ಕ್ಲೈಮ್ಯಾಕ್ಸ್ ಭಾಗ ಮಾತ್ರ. ನಾಗರಹಾವು' ಚಿತ್ರದಲ್ಲಿ ಅನೇಕ ಬದಲಾವಣೆ ಆಗಿರುವುದರಿಂದ ಸಿನಿಮಾಗೂ ನನಗೂ ಸಂಬಂಧ ಇದ್ಯಾ ಎಂಬ ಡೌಟ್ ಕೂಡ ಕಾಡುತ್ತಿದೆ'' ಎಂದಿದ್ದರು ನಟ ದಿಗಂತ್.


ಟ್ರೈಲರ್ ನಲ್ಲಿ ದಿಗಂತ್ ಪತ್ತೆ ಇಲ್ಲ!

ಡಾ.ವಿಷ್ಣುವರ್ಧನ್ ರವರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿದ್ದ 'ನಾಗರಹಾವು' ಟ್ರೈಲರ್ ನ ಒಂದೇ ಒಂದು ಫ್ರೇಮ್ ನಲ್ಲೂ ದೂದ್ ಪೇಡ ದಿಗಂತ್ ಇಲ್ಲ. ['ನಾಗರಹಾವು' ಟ್ರೈಲರ್: ಸಿಂಹ ನಡಿಗೆಯ ಸದ್ದಿಗೆ ಸ್ಯಾಂಡಲ್ ವುಡ್ ಶೇಕ್]


English summary
Kannada Movie 'Nagarahavu' Producer Sajid Qureshi gives his clarification on Kannada Actor Diganth Remuneration controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada