'ಅಮರ್' ಸಿನಿಮಾ ನಂತರ ಹೊಸ ಸಿನಿಮಾ ಅನೌನ್ಸ್ ಮಾಡಿದ ನಾಗಶೇಖರ್
ನಿರ್ದೇಶಕ ನಾಗಶೇಖರ್ ಸದ್ಯ 'ಅಮರ್' ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಇದೆ ಖುಷಿಯಲ್ಲಿ ಈಗ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಾಗಶೇಖರ್ ಈಗ ಮತ್ತೊಂದು ವಿಭಿನ್ನ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ.
ಸದ್ಯ ಚಿತ್ರದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ. ಹೌದು, ನಾಗಶೇಖರ್ ಹೊಸ ಚಿತ್ರಕ್ಕೆ 'ಸಂಜಯ್ ಅಲಿಯಾಸ್ ಸಂಜು' ಎಂದು ನಾಮಕರಣ ಮಾಡಿದ್ದಾರೆ. ಚಿತ್ರದ ಟೈಟಲ್ ಮತ್ತು ರಕ್ತಸಿಕ್ತವಾದ ಪೋಸ್ಟರ್ ಬ್ಯಾಗ್ರೌಂಡ್ ಮತ್ತು ಬೇಡಿ ಹಾಕಿದ ಕೈ ನೋಡುತ್ತಿದ್ರೆ ಇದೊಂದು ಕ್ರೈಮ್ ಆಧಾರಿತ ಚಿತ್ರ ಎನ್ನುವುದು ಗೊತ್ತಾಗುತ್ತಿದೆ.
ಇನ್ನು ವಿಶೇಷ ಅಂದ್ರೆ 'ಸಂಜಯ್ ಅಲಿಯಾಸ್ ಸಂಜು' ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಂತೆ. ನಾಗಶೇಖರ್ ನಿರ್ದೇಶಕ ಬಹುತೇಕ ಚಿತ್ರಗಳು ನೈಜ ಘಟನೆ ಆಧಾರಿತ ಚಿತ್ರಗಳಾಗಿವೆ. 'ಅಮರ್' ಸಿನಿಮಾ ಕೂಡ ಸತ್ಯ ಘಟನೆ ಆಧಾರಿತ ಚಿತ್ರವೆಂದು ಹೇಳಿದ್ದಾರೆ ನಾಗಶೇಖರ್.

'ಸಂಜಯ್ ಅಲಿಯಾಸ್ ಸಂಜು' ಸಿನಿಮಾ ಸಂಜು ವೆಡ್ಸ್ ಗೀತಾ' ಚಿತ್ರದ ಪಾರ್ಟ್-2 ಇರಬಹುದಾ ಎನ್ನುವ ಅನುಮಾನ ಕೂಡ ಅನೇಕರನ್ನು ಕಾಡುತ್ತಿದೆ. ಆದ್ರೆ ಸದ್ಯ ಟೈಟಲ್ ಪೋಸ್ಟರ್ ಮಾತ್ರ ರಿವೀಲ್ ಮಾಡಿರುವ ನಾಗಶೇಖರ್ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಈ ಚಿತ್ರದಲ್ಲಿ ಸಂಜಯ್ ಪಾತ್ರ ಮಾಡುವ ನಾಯಕ ಯಾರಾಗಲಿದ್ದಾರೆ. ನಾಯಕಿ ಯಾರು, ಎನ್ನುವ ಕುತೂಹಲ ಚಿತ್ರಾಭಿಮಾನಿಗಳನ್ನು ಕಾಡುತ್ತಿದೆ. ಆದ್ರೆ ಯಾವುದನ್ನು ರಿವೀಲ್ ಮಾಡಲಿಲ್ಲ ನಾಗಶೇಖರ್. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ರವಿ ವರ್ಮ ಸಾಹಸ, ವಿ ಶ್ರೀಧರ್ ಸಂಗೀತ ಚಿತ್ರಕ್ಕೆ ಇರಲಿದೆ.


Click it and Unblock the Notifications











