»   » ಹೊಸ ಸಂಜು ಮತ್ತು ಗೀತಾ ಯಾರು ಗೊತ್ತಾ?

ಹೊಸ ಸಂಜು ಮತ್ತು ಗೀತಾ ಯಾರು ಗೊತ್ತಾ?

Posted By:
Subscribe to Filmibeat Kannada

2011 ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ ಸಿನಿಮಾ 'ಸಂಜು ವೆಡ್ಸ್ ಗೀತಾ'. ಲಕ್ಕಿ ಸ್ಟಾರ್ ರಮ್ಯಾ ಮತ್ತು ಶ್ರೀನಗರ ಕಿಟ್ಟಿ ಜೋಡಿಯಾಗಿ ಅಭಿನಯದ ಈ ಚಿತ್ರ ಹೆಂಗಳೆಯರ ಮನ ಮುಟ್ಟಿತ್ತು. ಇದೀಗ ಇದೇ ಚಿತ್ರದ ಎರಡನೇ ಆವೃತ್ತಿ ತಯಾರಾಗುತ್ತಿದೆ.

ಅದಕ್ಕೆ 'ಸಂಜು ಮತ್ತು ಗೀತಾ ಪಾರ್ಟ್-2' ಅಂತ ಹೆಸರಿಡಲಾಗಿದೆ. ಹಾಗಂದ ಮಾತ್ರಕ್ಕೆ ಗೋಲ್ಡನ್ ಕ್ವೀನ್ ರಮ್ಯಾ ಇಲ್ಲಿ ಮತ್ತೆ ಬಣ್ಣ ಹಚ್ಚುತ್ತಿಲ್ಲ. ಶ್ರೀನಗರ ಕಿಟ್ಟಿ ಕೂಡ ಇಲ್ಲಿ ಕಾಣಿಸಿಕೊಳ್ಳೋದಿಲ್ಲ. 'ಪಾರ್ಟ್ - 2' ಅಂತ ಟೈಟಲ್ ಕೆಳಗೆ ಸೇರಿಸಿದ್ದರೂ, ಇದು 'ಸಂಜು ವೆಡ್ಸ್ ಗೀತಾ' ಮುಂದುವರಿದ ಭಾಗವೋ, ಇಲ್ಲಾ ಹೊಸ ಕಥೆಯೋ ಇನ್ನೂ ಬಹಿರಂಗವಾಗಿಲ್ಲ.

sanju mattu geetha

ಆದ್ರೆ, ಚಿತ್ರದ ತಾರಾಬಳಗ ನೋಡಿದ್ರೆ, ಇದು ಫ್ರೆಶ್ ರೋಮ್ಯಾಂಟಿಕ್ ಸ್ಟೋರಿ ಅಂತ ಅನಿಸದೇ ಇರೋಲ್ಲ. ಯಾಕಂದ್ರೆ, ರಮ್ಯಾ ಜಾಗಕ್ಕೆ ಅಂದ್ರೆ ಈ ಬಾರಿ ಗೀತಾ ಪಾತ್ರಧಾರಿ ಆಗುತ್ತಿರುವುದು ಕ್ಯೂಟ್ ಕೃತಿ ಕರಬಂದ. ಇವರನ್ನ ರೋಮ್ಯಾನ್ಸ್ ಮಾಡುವ ಹೀರೋ 'ಸಂಜು ವೆಡ್ಸ್ ಗೀತಾ' ಚಿತ್ರದ ನಿರ್ದೇಶಕ ನಾಗಶೇಖರ್!

ಹೌದು, ಅದಾಗಲೇ 'ಸಿಗರೇಟ್', 'ತರ್ಲೆ ನನ್ ಮಕ್ಳು' ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಾಗಶೇಖರ್ ಈಗ 'ಸಂಜು ಮತ್ತು ಗೀತಾ ಪಾರ್ಟ್-2' ಚಿತ್ರದಲ್ಲೂ ಹೀರೋ ಆಗುವ ನಿರ್ಧಾರ ಮಾಡಿದ್ದಾರೆ. ['ಸಂಜು ವೆಡ್ಸ್ ಗೀತಾ' ಭಾಗ 2ಕ್ಕೆ ನಾಗಶೇಖರ್ ರೆಡಿ]

sanju mattu geetha

ತಮ್ಮದೇ ಹೋಮ್ ಬ್ಯಾನರ್ 'ನಾಗಶೇಖರ್ ಮೂವೀಸ್' ನಲ್ಲಿ 'ಸಂಜು ಮತ್ತು ಗೀತಾ ಪಾರ್ಟ್-2' ತಯಾರಾಗಲಿದ್ದು, ನಾಗಶೇಖರ್ ಸಹೋದರ ರಾಮ್ ಚಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ.

ಮನೆಮಟ್ಟಕ್ಕೆ ಸಣ್ಣದಾಗಿ ಪೂಜೆ ಮಾಡಿ ಸ್ಕ್ರಿಪ್ಟ್ ವರ್ಕ್ ಗೆ ಚಾಲನೆ ನೀಡಿರುವ ನಾಗಶೇಖರ್ ಅಂದುಕೊಂಡಿದ್ದೆಲ್ಲಾ ಸರಾಗವಾಗಿ ಸಾಗಿದರೆ, ಸದ್ಯದಲ್ಲೇ 'ಸಂಜು ಮತ್ತು ಗೀತಾ ಪಾರ್ಟ್-2' ಸೆಟ್ಟೇರಲಿದೆ.

English summary
Director turned Hero Nagashekar and Kriti Kharbanda are roped into play lead in Sanju Mattu Geetha Part-2, sequel to Sanju Weds Geetha. The film will be releasing under Nagashekhar's home banner 'Nagashekhar Movies', directed by his brother Ramchiru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada