For Quick Alerts
  ALLOW NOTIFICATIONS  
  For Daily Alerts

  ಕೆಟ್ಟ ಸಿನಿಮಾವನ್ನು ಜೀವನದಲ್ಲಿ ಮಾಡಲ್ಲ : ನಾಗಶೇಖರ್ ಬೇಸರ

  |
  Amar Kannada Movie: ಚಿತ್ರತಂಡಕ್ಕೆ ಬೇಸರ ತಂತು ಕೆಲವು ವಿಮರ್ಶೆಗಳು | FILMIBEAT KANNADA

  'ಅಮರ್' ಸಿನಿಮಾಗೆ ಬಂದಿರುವ ಕೆಲ ವಿಮರ್ಶೆಗಳು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ನಿರ್ದೇಶಕ ನಾಗಶೇಖರ್ ಮಾತನಾಡಿದ್ದಾರೆ.

  ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ ವಿಮರ್ಶೆಗಳು ಸಹ ಮಿಶ್ರ ಅಭಿಪ್ರಾಯ ಹೊಂದಿವೆ. ಆದರೆ, ಕೆಲವು ವಿಮರ್ಶೆಗಳು ನನ್ನನ್ನು ಟಾರ್ಗೆಟ್ ಮಾಡಿ ಬರೆಯಲಾಗಿದೆ ಎಂದು ನಾಗೇಶೇಖರ್ ಹೇಳಿದ್ದಾರೆ.

  ಪತ್ರಿಕೆಗಳ ವಿಮರ್ಶೆ : 'ಅಮರ್' ಕೆಲವರಿಗೆ ಇಷ್ಟವಾಗಿದೆ.. ಕೆಲವರಿಗೆ ತೀರಾ ಕಷ್ಟವಾಗಿದೆ..

  ಚಿತ್ರಮಂದಿರಕ್ಕೆ ಹೋಗಲೇ ಬೇಡಿ ಎಂದು ಕೆಲವು ಕಡೆ ಬರೆದಿದ್ದಾರೆ. ನಾನು ಅಂತಹ ಕೆಟ್ಟ ಸಿನಿಮಾವನ್ನು ನನ್ನ ಜೀವನದಲ್ಲಿ ಮಾಡುವುದಿಲ್ಲ ಎಂದಿರುವ ನಾಗಶೇಖರ್ 'ಅಮರ್' ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಹಾಗೂ ವಿಮರ್ಶೆಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

  ಒಂದು, ಎರಡು ತಪ್ಪು ಆಗಿರಬಹುದು

  ಒಂದು, ಎರಡು ತಪ್ಪು ಆಗಿರಬಹುದು

  ''ನಮ್ಮ ಇಡೀ ತಂಡ ದೊಡ್ಡ ಅನುಭವ ಹೊಂದಿದೆ. ಪ್ರತಿ ಹಂತದಲ್ಲಿಯೂ ನಾವು ಜಾಗರುಕತೆಯಿಂದ ಚಿತ್ರ ಮಾಡಿದ್ದೇವೆ. ಹಾಗಿದ್ದರೂ ಒಂದು, ಎರಡು ತಪ್ಪು ಆಗಿರಬಹುದು. ನಾವು ತಪ್ಪೇ ಇಲ್ಲದೆ ಸಿನಿಮಾ ಮಾಡಲು ಸಾಧ್ಯವಿಲ್ಲ. ನಾವು ಮಾಸ್ಟರ್ ಅಲ್ಲ. ಸಣ್ಣ ತಪ್ಪನ್ನೇ ದೊಡ್ಡದಾಗಿ ಬರೆದು ಚಿತ್ರಮಂದಿರಕ್ಕೆ ಬರಬೇಡಿ ಎಂದು ಬರೆದಿರುವುದು ನಮಗೆ ಬೇಸರ ತಂದಿರುವ ವಿಷಯ.'' - ನಾಗಶೇಖರ್, ನಿರ್ದೇಶಕ

  ಜೀವನದಲ್ಲಿ ಅಂತಹ ಕೆಟ್ಟ ಸಿನಿಮಾ ಮಾಡುವುದಿಲ್ಲ

  ಜೀವನದಲ್ಲಿ ಅಂತಹ ಕೆಟ್ಟ ಸಿನಿಮಾ ಮಾಡುವುದಿಲ್ಲ

  ''25 ವರ್ಷಗಳಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. 5 ಸಿನಿಮಾ ನಿರ್ದೇಶನ ಮಾಡಿದ್ದೇನೆ. ಯಾರು ಕೂಡ ಚಿತ್ರಮಂದಿರಕ್ಕೆ ಬರಲೇ ಬೇಡಿ ಎಂದು ಯಾವ ಸಿನಿಮಾಗೂ ಬರೆದಿಲ್ಲ. ನಾನು ಜೀವನದಲ್ಲಿ ಅಂತಹ ಕೆಟ್ಟ ಸಿನಿಮಾ ಮಾಡುವುದಿಲ್ಲ. ಏನೇ ಆಗಿದ್ದರೂ 'ಅಮರ್' ಸಿನಿಮಾ ಬಹಳ ಒಳ್ಳೆಯ ವೆಲ್ ಕಮ್ ಸಿಕ್ಕಿದೆ. ದಾಖಲೆಯ ಕಲೆಕ್ಷನ್ ಸಿನಿಮಾ ಮಾಡಿದೆ.'' - ನಾಗಶೇಖರ್, ನಿರ್ದೇಶಕ

  'ಅಮರ್'ಗೆ ನೆಗೆಟಿವ್ ರಿವ್ಯೂ: ಯಂಗ್ ರೆಬಲ್ ಸ್ಟಾರ್ ಪ್ರತಿಕ್ರಿಯೆ

  ಎಲ್ಲ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವ ಕೆಲಸ

  ಎಲ್ಲ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವ ಕೆಲಸ

  ''ರಾಜ್ಯದ ಎಲ್ಲ ಕಡೆ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರರಸಿಕರಿಗೆ ಸಿನಿಮಾ ಇಷ್ಟ ಆಗುವುದು ಮುಖ್ಯ. ಎಲ್ಲ ವರ್ಷದ ಪ್ರೇಕ್ಷಕರನ್ನು ಮೆಚ್ಚಿಸುವ ಕೆಲಸವನ್ನು ಒಬ್ಬ ಕಮರ್ಷಿಯಲ್ ನಿರ್ದೇಶಕ ಮಾಡಬೇಕಾಗುತ್ತದೆ. ಸಾಧು ಕೋಕಿಲ ಕಾಮಿಡಿ ಬೆರೆತಿಲ್ಲ ಅಂತಾರೆ. ಹೌದು, ಕೆಲವು ಬಾರಿ ಅದು ಆಗಲ್ಲ. ಜನ ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಕಾಮಿಡಿ ಇಷ್ಟ ಪಡುತ್ತಿದ್ದಾರೆ.'' - ನಾಗಶೇಖರ್, ನಿರ್ದೇಶಕ

  ನಾನು 172 ಸಿನಿಮಾ ಮಾಡಿದ್ದೇನೆ

  ನಾನು 172 ಸಿನಿಮಾ ಮಾಡಿದ್ದೇನೆ

  ''ಒಂದು ಶಾಟ್ ತೆಗೆಯುವ ಕಷ್ಟ ಒಬ್ಬ ನಿರ್ದೇಶಕನಿಗೆ ಗೊತ್ತಿದೆ. ನಾನು ಎಲ್ ಕೆ ಜಿ ಹುಡುಗ ಅಲ್ಲ. ನಾನು 172 ಸಿನಿಮಾ ಮಾಡಿದ್ದೇನೆ. ಅದರ ವಿಮರ್ಶೆಗಳನ್ನು ಓದಿದ್ದೇನೆ. ಸಾವಿರಾರು ಸಿನಿಮಾಗಳನ್ನು ನೋಡಿಕೊಂಡು ಬದುಕಿದ್ದೇವೆ. ಸಿನಿಮಾ ಚೆನ್ನಾಗಿದ್ದರೆ ಜನ ಖಂಡಿತ ನೋಡುತ್ತಾರೆ. ಎಲ್ಲ ವಿಮರ್ಶೆಗಳು ಕೂಡ ಚೆನ್ನಾಗಿ ಬರೆದಿಲ್ಲ ಎಂದೂ ನಾನು ಹೇಳುವುದಿಲ್ಲ.'' - ನಾಗಶೇಖರ್, ನಿರ್ದೇಶಕ

  'ಮೈನಾ' ಸಿನಿಮಾ ಚೆನ್ನಾಗಿಲ್ಲ ಎಂದಿದ್ದರು

  'ಮೈನಾ' ಸಿನಿಮಾ ಚೆನ್ನಾಗಿಲ್ಲ ಎಂದಿದ್ದರು

  ''ಮೈನಾ'ಗೆ ಕೂಡ ಇದೇ ರೀತಿ ಸಿನಿಮಾ ಚೆನ್ನಾಗಿಲ್ಲ ಎನ್ನುವ ಮಾತು ಪ್ರಾರಂಭದಲ್ಲಿ ಬಂತು. ಆ ಸಿನಿಮಾ ವ್ಯಾಪಾರ ಆಗುತ್ತಿರಲಿಲ್ಲ. 'ಸಂಜು ವೆಡ್ಸ್ ಗೀತಾ' ಹಿಟ್ ಆಗಿದ್ದರೂ, ಮಾರ್ನಿಂಗ್ ಶೋ ಕಲೆಕ್ಷನ್ ಇರಲಿಲ್ಲ. ಅದರ ಬಳಿಕವೂ ಸಿನಿಮಾ ಸಿಲ್ವರ್ ಜೂಬ್ಲಿ ಆಯ್ತು. ತಮಿಳು, ತೆಲುಗು, ಮಲೆಯಾಳಂ, ಹಿಂದಿ ಹೀಗೆ ಎಷ್ಟೋ ಆಫರ್ ಗಳನ್ನು ನೀಡಿತ್ತು.'' - ನಾಗಶೇಖರ್, ನಿರ್ದೇಶಕ

  English summary
  Director Nagashekar reaction about negative review which came for Amar movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X