»   » ಶಿವಣ್ಣನ ಚಿತ್ರಕ್ಕೆ ಮೇಷ್ಟ್ರು ನಿರ್ದೇಶನ

ಶಿವಣ್ಣನ ಚಿತ್ರಕ್ಕೆ ಮೇಷ್ಟ್ರು ನಿರ್ದೇಶನ

Written By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಸ್ತುತದಲ್ಲಿ 'ಟಗರು' ಮತ್ತು 'ಲೀಡರ್' ಸಿನಿಮಾ ಗಳಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಎರಡು ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ, ಈ ಚಿತ್ರಗಳು ಮುಗಿಯುವ ಮುನ್ನವೇ ಮತ್ತೊಂದು ಸಿನಿಮಾದಲ್ಲಿ ನಟಿಸಲು ಓಕೆ ಎಂದಿದ್ದಾರೆ.['ಗೂಳಿ' ಪಳಗಿಸಲಿದ್ದಾರಂತೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್!]

ಸ್ಯಾಂಡಲ್ ವುಡ್ ನ ಸಖತ್ ಬ್ಯುಸಿ ನಟ ಅಂತಲೂ ಕರೆಸಿಕೊಳ್ಳುವ ಶಿವಣ್ಣ, ಸದ್ಯದಲ್ಲೇ ನಟಿಸಲು ಒಪ್ಪಿಗೆ ಸೂಚಿಸಿರುವ ಸಿನಿಮಾ ದ ಡೀಟೇಲ್ಸ್ ಇಲ್ಲಿದೆ..

ಶಿವಣ್ಣನಿಗೆ ಮೇಷ್ಟ್ರು ಆಕ್ಷನ್ ಕಟ್

ಕೆ ಮಂಜು ನಿರ್ಮಾಣದ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಚಿತ್ರದಲ್ಲಿ ನಟಿಸಲು ಸೆಂಚುರಿ ಸ್ಟಾರ್ ಇತ್ತೀಚೆಗೆ ಓಕೆ ಮಾಡಿದ್ದಾರೆ.

ನಾಗತಿಹಳ್ಳಿ ಮತ್ತು ಶಿವಣ್ಣ ಕಾಂಬಿನೇಷನ್ ಮೊದಲ ಚಿತ್ರ

ನಾಗತಿಹಳ್ಳಿ ಚಂದ್ರಶೇಖರ್ ಅವರು ಶಿವಣ್ಣನಿಗೆ ಈಗಾಗಲೇ ಕಥೆ ಹೇಳಿದ್ದು, ಅಧಿಕೃತ ಘೋಷಣೆ ಆದರೆ, ಶಿವಣ್ಣ ಮತ್ತು ಮೇಷ್ಟ್ರು ಕಾಂಬಿನೇಷನ್‌ ನಲ್ಲಿ ಮೊದಲ ಸಿನಿಮಾ ಮೂಡಿಬರಲಿದೆ.

ಮಾರ್ಚ್ ವೇಳೆಗೆ ಫೈನಲ್

ಶಿವಣ್ಣನಿಗೆ ಕಥೆ ಹೇಳಿರುವ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅವರು ಮಾರ್ಚ್ ವೇಳೆಗೆ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿ, ನಂತರ ಫೈನಲ್ ಮಾಡಲಿದ್ದಾರಂತೆ.

ಚಿತ್ರಕ್ಕೆ ಹಾಲಿವುಡ್ ತಂತ್ರಜ್ಞರು

ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ರೆಡಿ ಆಗುತ್ತಿರುವ ಮೇಷ್ಟ್ರು, ಚಿತ್ರಕ್ಕಾಗಿ ಹಾಲಿವುಡ್ ತಂತ್ರಜ್ಞರನ್ನು ಭೇಟಿ ಮಾಡಲು ಅಮೆರಿಕ ಮತ್ತು ಇಂಗ್ಲೆಂಡ್ ಪ್ರವಾಸ ಬೆಳೆಸಿದ್ದಾರಂತೆ.

ಸದ್ಯಕ್ಕೆ ಶಿವಣ್ಣ ಸಹ ಬ್ಯುಸಿ

ಅಂದಹಾಗೆ ಶಿವಣ್ಣ ಈಗ 'ಲೀಡರ್' ಮತ್ತು 'ಟಗರು' ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೇ ಇತ್ತೀಚೆಗೆ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ.

ಮೇಷ್ಟ್ರು ನಿರ್ದೇಶನದ ಶಿವಣ್ಣ ಚಿತ್ರದ ಕಥೆ ಏನು?

'ಅಮೆರಿಕ ಅಮೆರಿಕ', 'ಅಮೃತಧಾರೆ', 'ಹೂಮಳೆ', 'ಮಾತಾಡ್ ಮಾತಾಡ್ ಮಲ್ಲಿಗೆ', ಮತ್ತು 'ಇಷ್ಟಕಾಮ್ಯ' ಗಳಂತಹ ರೊಮ್ಯಾಂಟಿಕ್ ಚಿತ್ರಗಳನ್ನು ನಿರ್ದೇಶನ ಮಾಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಶಿವಣ್ಣ ಚಿತ್ರಕ್ಕೆ ಎಂತಹ ಕಥೆ ಆಯ್ಕೆ ಮಾಡಿದ್ದಾರೆ ಎಂಬ ಕುತೂಹಲ ಹೆಚ್ಚಾಗೆ ಇದೆ. ಆದರೆ ಕಥೆ ಬಗ್ಗೆ ಮಾಹಿತಿ ಬಹಿರಂಗಗೊಂಡಿಲ್ಲ.

English summary
Shivarajkumar has shown interest in working with the senior director, Nagathihalli Chandrashekar in a project, which is to be produced by K Manju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada