»   » 'ನಾಗವಲ್ಲಿ' ಆತ್ಮಕ್ಕೆ ಹೆದರಿ ತಾಯತ ಕಟ್ಟಿಸಿಕೊಂಡ ನಿರ್ದೇಶಕ ಪಿ.ವಾಸು

'ನಾಗವಲ್ಲಿ' ಆತ್ಮಕ್ಕೆ ಹೆದರಿ ತಾಯತ ಕಟ್ಟಿಸಿಕೊಂಡ ನಿರ್ದೇಶಕ ಪಿ.ವಾಸು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಆಪ್ತಮಿತ್ರ' ಸಿನಿಮಾ ಎಷ್ಟು ಫೇಮಸ್ಸೋ, 'ನಾಗವಲ್ಲಿ' ಕೂಡ ಅಷ್ಟೇ ಫೇಮಸ್ಸು.

'ಕೋಟಿಗೊಬ್ಬ' ಡಾ.ವಿಷ್ಣುವರ್ಧನ್ ಹಾಗೂ ಸೌಂದರ್ಯ ಅಭಿನಯದ 2004 ರಲ್ಲಿ ತೆರೆಕಂಡ 'ಆಪ್ತಮಿತ್ರ' ಚಿತ್ರದಲ್ಲಿ ''ರಾ..ರಾ..ಸರಸಕು ರಾ..ರಾ..'' ಅಂತ ಹಾಡ್ತಾ ಪ್ರೇಕ್ಷಕರನ್ನ ಸೆಳೆದ ಅಮೋಘ ಪಾತ್ರ 'ನಾಗವಲ್ಲಿ'.


ಆದ್ರೆ, 'ನಾಗವಲ್ಲಿ' ಕೇವಲ 'ಆಪ್ತಮಿತ್ರ' ಚಿತ್ರದ ಪಾತ್ರವಾಗಿ ಮಾತ್ರ ಉಳಿದಿಲ್ಲ. ಈಕೆಯ ಉಪಟಳದಿಂದಲೇ ನಟಿ ಸೌಂದರ್ಯ ಹಾಗೂ ವಿಷ್ಣುವರ್ಧನ್ ಅವರ ಸಾವು ಸಂಭವಿಸಿತು ಎಂಬ ಮಾತುಗಳು ಗಾಂಧಿನಗರದಲ್ಲಿ ಆಗಾಗ ಗಿರಕಿ ಹೊಡೆಯುತ್ತಿರುತ್ತವೆ. [ನಿರ್ದೇಶಕನ ಪಾಲಿಗೆ ವಿಷ್ಣುವೇ ಆಪ್ತರಕ್ಷಕ]


ಈಗ ಅದೇ 'ನಾಗವಲ್ಲಿ'ಯ ಬಗ್ಗೆ ನಾವು ಇಷ್ಟೆಲ್ಲಾ ಹೇಳಲು ಕಾರಣ ನಿರ್ದೇಶಕ ಪಿ.ವಾಸು. 'ಆಪ್ತಮಿತ್ರ', 'ಆಪ್ತರಕ್ಷಕ', 'ದೃಶ್ಯ' ಹಾಗೂ 'ಶಿವಲಿಂಗ' ಚಿತ್ರಗಳ ನಿರ್ದೇಶಕ ಪಿ.ವಾಸುಗೆ 'ನಾಗವಲ್ಲಿ' ಕಾಟ ಕೊಡುತ್ತಿದ್ದಾಳಂತೆ. ಮುಂದೆ ಓದಿ.....


ಪಿ.ವಾಸುಗೆ 'ನಾಗವಲ್ಲಿ' ಕಾಟ!

ನಿರ್ದೇಶಕ ಪಿ.ವಾಸು ರವರಿಗೆ 'ನಾಗವಲ್ಲಿ' ಇನ್ನೂ ಕನಸಿನಲ್ಲಿ ಕಾಟ ಕೊಡುತ್ತಿದ್ದಾಳಂತೆ. ಅದರ ಪರಿಣಾಮ ಪಿ.ವಾಸು ನೆಮ್ಮದಿಯಿಂದ ನಿದ್ದೆ ಮಾಡಿ ವರ್ಷಗಳೇ ಉರುಳಿವೆಯಂತೆ.


ತಾಯತ ಕಟ್ಟಿಸಿಕೊಂಡಿರುವ ಪಿ.ವಾಸು!

'ನಾಗವಲ್ಲಿ' ಕಾಟಕ್ಕೆ ಬೆಚ್ಚಿ ಬಿದ್ದಿರುವ ನಿರ್ದೇಶಕ ಪಿ.ವಾಸು ಮಂತ್ರವಾದಿಯೊಬ್ಬರನ್ನ ಭೇಟಿ ಮಾಡಿ ತಾಯತ ಕಟ್ಟಿಸಿಕೊಂಡಿದ್ದಾರೆ ಅಂತ ವರದಿ ಆಗಿದೆ.


ಹೇಳಿಕೊಳ್ಳುವುದಕ್ಕೆ ಭಯ!

'ನಾಗವಲ್ಲಿ' ಕಾಟದಿಂದ ಗಡಗಡ ನಡುಗಿರುವ ಪಿ.ವಾಸು, ಈ ವಿಷಯವನ್ನ ಬಹಿರಂಗ ಪಡಿಸುವುದಕ್ಕೂ ಹೆದರುತ್ತಾರೆ. ಅವರ ಕಷ್ಟ 'ಶಿವಲಿಂಗ' ಚಿತ್ರತಂಡಕ್ಕೆ ಅರಿವಾಗಿದೆ.


'ಆಪ್ತರಕ್ಷಕ' ಸಮಯದಿಂದಲೂ ಹೆದರಿಕೆ!

2010ರಲ್ಲಿ ತೆರೆಕಂಡ 'ಆಪ್ತರಕ್ಷಕ' ಚಿತ್ರದ ಸಮಯದಿಂದಲೂ ನಿರ್ದೇಶಕ ಪಿ.ವಾಸುಗೆ ಕೆಟ್ಟ ಕನಸು ಸೇರಿದಂತೆ ವಿಚಿತ್ರ ಅನುಭವಗಳು ಆಗುತ್ತಿವ್ಯಂತೆ.


ಡಾ.ವಿಷ್ಣುವರ್ಧನ್ ಗೂ ಹೀಗೆ ಆಗಿತ್ತು!

'ಆಪ್ತರಕ್ಷಕ' ಶೂಟಿಂಗ್ ಸಂದರ್ಭದಲ್ಲಿ 'ಸಾಹಸಸಿಂಹ' ಡಾ.ವಿಷ್ಣುವರ್ಧನ್ ರವರಿಗೂ 'ನಾಗವಲ್ಲಿ'ಯಿಂದ ವಿಚಿತ್ರ ಅನುಭವವಾಗಿತ್ತು. ಈ ಬಗ್ಗೆ ಅನೇಕ ಪತ್ರಿಕೆಗಳು ಮತ್ತು ಮಾಧ್ಯಮಗಳೂ ಕೂಡ ವರದಿ ಮಾಡಿತ್ತು.


'ಆಪ್ತಮಿತ್ರ' ನಂತ್ರ ಸೌಂದರ್ಯ, 'ಆಪ್ತರಕ್ಷಕ' ನಂತ್ರ ವಿಷ್ಣು!

'ಆಪ್ತಮಿತ್ರ' ಚಿತ್ರದ ನಂತ್ರ ನಟಿ ಸೌಂದರ್ಯ ದುರ್ಮರಣ ಹಾಗೂ 'ಆಪ್ತರಕ್ಷಕ' ಚಿತ್ರದ ನಂತರ ಡಾ.ವಿಷ್ಣುವರ್ಧನ್ ಕೊನೆಯುಸಿರೆಳೆದಿದ್ದು 'ನಾಗವಲ್ಲಿ' ಉಪಟಳದಿಂದಲೇ ಅಂತ ಅನೇಕರು ನಂಬಿದ್ದಾರೆ.


'ಶಿವಲಿಂಗ' ಸೆಟ್ ನಲ್ಲೂ 'ನಾಗವಲ್ಲಿ' ಕಾಟ

ಮಸೀದಿಯೊಂದರಲ್ಲಿ 'ಶಿವಲಿಂಗ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಮಸೀದಿಯಿಂದ ಹೊರಬಂದ ಸಹಾಯಕ ನಿರ್ದೇಶಕ ಏನನ್ನೋ ನೋಡಿ ಬೆಚ್ಚಿ ಬಿದ್ದರಂತೆ. ತದನಂತರ ಚಳಿ-ಜ್ವರ ಬಂದ ಕಾರಣ ಅವರು ಮತ್ತೆ ಚಿತ್ರೀಕರಣಕ್ಕೆ ವಾಪಸ್ ಆಗಲೇ ಇಲ್ವಂತೆ.


ಪಿ.ವಾಸು ಅವರಿಗೂ ಹೀಗೆ!

'ಶಿವಲಿಂಗ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಮನೆಯಲ್ಲೂ ಪಿ.ವಾಸು ಅವರಿಗೆ ವಿಚಿತ್ರ ಶಬ್ಧ ಕೇಳಿದ ಅನುಭವವಾಗಿದೆ.


ಯಾರೋ ಪಕ್ಕದಲ್ಲಿ ಕೂತ ಹಾಗೆ!

ಅಗಾಗ ಪಿ.ವಾಸು ಪಕ್ಕ ಯಾರೋ ಬಂದು ಕುಳಿತ ಹಾಗೆ, ಯಾರೋ ಹಿಂಬಾಲಿಸಿದ ಹಾಗೆ ಪಿ.ವಾಸು ಅವರಿಗೆ ಅನುಭವ ಆಗಿದೆ.


'ಶಿವಲಿಂಗ' ನಿರ್ಮಾಪಕ ಸುರೇಶ್ ಏನು ಹೇಳ್ತಾರೆ?

'ಪಿ.ವಾಸು ಅವರಿಗೆ ಮಾತ್ರ ಅಲ್ಲ. ಚಿತ್ರದಲ್ಲಿ ಕೆಲಸ ಮಾಡಿದ ಕೆಲವರಿಗೆ ಇಂತಹ ಅನುಭವ ಆದ ಕಾರಣ ಎಲ್ಲರೂ 'ನಾಗವಲ್ಲಿ' ಕಾಟವನ್ನ ನಂಬುವಂತಾಗಿದೆ' ಅಂತಾರೆ ನಿರ್ಮಾಪಕ ಸುರೇಶ್.


'ಶಿವಲಿಂಗ' ಕೂಡ ಹಾರರ್ ಸಿನಿಮಾ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶಿವಲಿಂಗ' ಕೂಡ ಹಾರರ್ ಚಿತ್ರ. ಇದೇ ಕಾರಣಕ್ಕೆ ಕೆಲ ವಿಚಿತ್ರ ಘಟನೆಗಳು ಸಂಭವಿಸುತ್ತಿದೆ ಎನ್ನೋದು ಚಿತ್ರತಂಡದ ಅಭಿಪ್ರಾಯ.


ರಜನಿಕಾಂತ್ ಕೂಡ ಹೆದರಿದ್ದರು!

'ಆಪ್ತಮಿತ್ರ' ಚಿತ್ರದ ತಮಿಳು ರೀಮೇಕ್ ವರ್ಷನ್ ನಲ್ಲಿ ನಟಿಸಿದ್ದ ರಜನಿಕಾಂತ್ ಕೂಡ 'ನಾಗವಲ್ಲಿ'ಗೆ ಹೆದರಿ ಮೃತ್ಯುಂಜಯ ಹೋಮ ಮಾಡಿಸಿದ್ದು ನಿಮಗೆ ನೆನಪಿರಬಹುದು. [ನಾಗವಲ್ಲಿ ದಿಗ್ಬಂಧನಕ್ಕೆ ರಜನಿ ಮೃತ್ಯುಂಜಯ ಹೋಮ]


ಅಸಲಿಗೆ 'ನಾಗವಲ್ಲಿ' ಯಾರು?

ನಾಗವಲ್ಲಿ ಯಾರು? ಎಲ್ಲಿಯವಳು? ಏನಾಗಿದ್ದಳು? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.[ಈ ನಾಗವಲ್ಲಿ ಯಾರು? ತರ್ಕಕ್ಕೆ ನಿಲುಕದ ಪ್ರಶ್ನೆ]


ನಾಳೆ 'ಶಿವಲಿಂಗ' ರಿಲೀಸ್

ಪಿ.ವಾಸು ನಿರ್ದೇಶನದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ವೇದಿಕಾ ಅಭಿನಯಿಸಿರುವ 'ಶಿವಲಿಂಗ' ಸಿನಿಮಾ ನಾಳೆ ತೆರೆಕಾಣುತ್ತಿದೆ.


English summary
According to the reports, Director P.Vasu and unit people of Kannada Movie 'Shivalinga' was haunted by the spirit of Nagavalli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada