»   » ನಲ್ಲ ಸುದೀಪ್ ಆಕ್ಷನ್ ಕಟ್ ನಲ್ಲಿ ಮಲ್ಲ ರವಿಚಂದ್ರನ್

ನಲ್ಲ ಸುದೀಪ್ ಆಕ್ಷನ್ ಕಟ್ ನಲ್ಲಿ ಮಲ್ಲ ರವಿಚಂದ್ರನ್

Posted By:
Subscribe to Filmibeat Kannada

ಬ್ರೇಕ್ ನ ನಿರೀಕ್ಷೆಯಲ್ಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಫಿಲ್ಮೋಗ್ರಫಿಯಲ್ಲಿ ಭಾರಿ ತಿರುವು ಸಿಗುತ್ತಿದೆ. ಕಿಚ್ಚ ಸುದೀಪ್ ಅವರ ಆಕ್ಷನ್ ಕಟ್ ನಲ್ಲಿ ಕ್ರೇಜಿಸ್ಟಾರ್ ಅಭಿನಯಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರವನ್ನು ಎಂಎನ್ ಕುಮಾರ್ ನಿರ್ಮಿಸುತ್ತಿದ್ದಾರೆ.

ಈ ಹಿಂದೆಯೇ ಕುಮಾರ್ ಅವರು ಸುದೀಪ್ ಜೊತೆ ಕಮಿಟ್ ಆಗಿದ್ದರು. ಆದರೆ ಸುದೀಪ್ ಅವರ ಕಮಿಂಟ್ ಮೆಂಟ್ ಗಳ ಕಾರಣ ಚಿತ್ರ ಮುಂದೂಡಲ್ಪಟ್ಟಿತ್ತು. ಏತನ್ಮಧ್ಯೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸುದೀಪ್ ಬಿಜಿಯಾಗಿದ್ದರು. ಈಗ ಚಿತ್ರಕ್ಕೆ ಮುಹೂರ್ತ ಕೂಡಿಬಂದಿದ್ದು ಆಗಸ್ಟ್ ಎರಡನೇ ವಾರದಲ್ಲಿ ಚಿತ್ರ ಸೆಟ್ಟೇರುತ್ತಿದೆ.


ಚಿತ್ರ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ. ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಬಣ್ಣವನ್ನೂ ಹಚ್ಚುತ್ತಿದ್ದಾರೆ ಸುದೀಪ್. ಇಬ್ಬರು ಹೀರೋಗಳು ಎಂದ ಮೇಲೆ ನಾಯಕಿಯರೂ ಇಬ್ಬರು ಇರಲೇಬೇಕಲ್ಲವೆ? ಸುದೀಪ್ ಗೆ ಜೋಡಿಯಾಗಿ ಗೋಲ್ಡನ್ ಗರ್ಲ್ ರಮ್ಯಾ ಅವರನ್ನು ಕರೆತರಲು ಮಾತುಕತೆ ನಡೆಯುತ್ತಿದೆ.

ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಯಾರು ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಕನ್ನಡ ಚಿತ್ರರಂಗದಲ್ಲಿ ಮಲ್ಲ ಹಾಗೂ ನಲ್ಲ ಎಂದು ಗುರುತಿಸಿಕೊಂಡಿರುವ ರವಿಚಂದ್ರನ್ ಹಾಗೂ ಸುದೀಪ್ ಇಬ್ಬರು ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ಆಲ್ ದ ಬೆಸ್ಟ್. (ಏಜೆನ್ಸೀಸ್)

English summary
Kichcha Sudeep all set to direct a film to Crazy Star Ravichandran, This is the first time that the likes of Sudeep and Ravichandran coming together. The untitled movie being produced by MN Kumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada