»   » ನಮ್ದುಕೆ ನಿಮ್ದುಕೆ ಅವರ್ದುಕೆ ನೋಡ್ಬೇಕಾದ್ ವಿಡಿಯೋ

ನಮ್ದುಕೆ ನಿಮ್ದುಕೆ ಅವರ್ದುಕೆ ನೋಡ್ಬೇಕಾದ್ ವಿಡಿಯೋ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ಬರುತ್ತಿಲ್ಲ ಎಂಬ ಕೊರಗು ಕನ್ನಡಿಗರಲ್ಲಿ ಇದ್ದೇ ಇದೆ. ಅಕಸ್ಮಾತ್ ಒಳ್ಳೆ ಪ್ರಯತ್ನ ಕಂಡು ಬಂದರೂ ಅದರ ಪ್ರಚಾರ ಮಾಡುವುದಿಲ್ಲ ಎಂಬ ಕೊರಗಿತ್ತು. ಆದರೆ, ಈಗ ಕಾಲ ಬದಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಸಿನ್ಮಾ ರಿಲೀಸ್ ಆದ ಕೆಲ ಹೊತ್ತಿನಲ್ಲೇ ರಿವ್ಯೂ ಹೊರ ಬಂದಿರುತ್ತದೆ. ಬಾಯಿ ಮಾತಿನ ಪಬ್ಲಿಸಿಟಿ ಸೇರಿ ಹಲವು ಚಿತ್ರಗಳು ಗೆಲ್ಲುತ್ತಿವೆ. ಕರ್ನಾಟಕದಲ್ಲಿ ನೆಲೆಸಿರುವ ಪರಭಾಷಿಗರನ್ನು ಸೆಳೆಯುವಲ್ಲಿ ಸಾಮಾಜಿಕ ಜಾಲ ತಾಣಗಳು ಮುಖ್ಯಪಾತ್ರವಹಿಸಿವೆ.

  ಹೀಗೆ ಕನ್ನಡ, ನಾಡು, ನುಡಿ, ಸಂಸ್ಕೃತಿ, ಮಾಧ್ಯಮ, ಸಿನಿಮಾ, ಪರಂಪರೆ ಬಗ್ಗೆ ಕನ್ನಡಿಗರಿಗೆ ಹಾಗೂ ಪರಭಾಷಿಗರಿಗೆ ಹೆಮ್ಮೆ ಮೂಡಬೇಕು. ಹೆಚ್ಚಿನ ಬೋಧನೆ ಇಲ್ಲದೆ, ಸಂದೇಶ ಇಲ್ಲದ, ಮನರಂಜನೆ ಮೂಲಕ ಕನ್ನಡ ಕಾಳಜಿ ತೋರುವುದು ನಮ್ಮ ಉದ್ದೇಶ ಎನ್ನುತ್ತಾರೆ ನಮ್ದುಕೆ ತಂಡ. [ಚಿತ್ರರಂಗ 2015ರ ಶ್ರೇಷ್ಠತೆಗಳು]

  ಏನಿದು ನಮ್ದುಕೆ? ನಮ್ಮ ಕರ್ನಾಟಕ ಎಂಬುದನ್ನು ಸರಳವಾಗಿ ನಮ್ದುಕೆ ಎಂದು ಇಟ್ಟುಕೊಂಡು ವಿಡಿಯೋಗಳನ್ನು ಹೊರ ತರುತ್ತಿದ್ದಾರೆ. ಈ ತಂಡದಲ್ಲಿ ಬಹುತೇಕ ಸಾಫ್ಟ್ ವೇರ್ ಟೆಕ್ಕಿಗಳೆ ಇರುವುದು ವಿಶೇಷ. ಇನ್ಫೋಸಿಸ್, ರಾಬರ್ಟ್ ಬಾಷ್, ಫ್ಲಿಪ್ ಕಾರ್ಟ್ ನಂಥ ಸಂಸ್ಥೆಗಳಲ್ಲಿ ಉದ್ಯೋಗ ನಿರತರಾಗಿರುವ ಸ್ನೇಹಿತರೆಲ್ಲರು ಒಟ್ಟುಗೂಡಿ ಈ ಪ್ರಯತ್ನ ಮಾಡಿದ್ದೇವೆ ಎಂದು ಶ್ರವಣ್ ಹೇಳಿದರು.

  ನಮ್ದುಕೆ ತಂಡದ ಟಿವಿ69 ವಿಡಿಯೋ ಸೂಪರ್ ಹಿಟ್

  ಆರಂಭದಲ್ಲಿ ಟಿವಿ69 ವಿಡಿಯೋ ಸೂಪರ್ ಹಿಟ್ ಆಗಿತ್ತು. ಈಗ "ನಿಮ್ಮ ಕನ್ನಡದಲ್ಲೂ ಒಳ್ಳೆ ಸಿನಿಮಾ ಇದ್ಯಾ?" ಅಂತ ಕೇಳುವ ಪರಭಾಷಿಗರಿಗೆ ಪ್ರತಿಕ್ರಿಯೆ ರೂಪದಲ್ಲಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.

  ಈ ವಿಡಿಯೋ ಆಂಗ್ಲ ಭಾಷೆಯಲ್ಲಿ ಏಕಿದೆ

  ನಮ್ದುಕೆ ತಂಡ 2015 ರ ಅತ್ತ್ಯುತ್ತಮ ಕನ್ನಡ ಚಿತ್ರಗಳನ್ನು ಈ ವೀಡಿಯೊದಲ್ಲಿ ಪಟ್ಟಿ ಮಾಡಿದೆ. ಎಷ್ಟೋ ಮಂದಿ ಈ ವಿಡಿಯೋ ಆಂಗ್ಲ ಭಾಷೆಯಲ್ಲಿ ಏಕಿದೆ ಎಂದು ಕೇಳಿದ್ದಾರೆ. ಅದಕ್ಕೆ ಕಾರಣ ಪರಭಾಷಿಗರಿಗೂ ಅರ್ಥ ಆಗ್ಲಿ ಅಂತ. ಈ ವೀಡಿಯೊನ ಆಂಗ್ಲ ಭಾಷೆಯಲ್ಲಿ ಮಾಡಿದ್ದೇವೆ ಎಂದು ನಮ್ದುಕೆ ತಂಡ ಹೇಳಿದೆ.

  ನಮ್ದುಕೆ ತಂಡದ ಪರಿಚಯ

  ಕ್ರಿಯೇಟಿವ್ ಹೆಡ್: ಶ್ರವಣ್ ನಾರಾಯಣ್
  ಪ್ರೊಡೆಕ್ಷನ್ ಮ್ಯಾನೇಜರ್, ಕ್ರಿಯೇಟಿವ್ ಟೀಂ: ಭಾರದ್ವಾಜ್, ರಜತ್, ಸಂದೀಪ್
  ಸಂಕಲನ, ವಿಎಫ್ ಎಕ್ಸ್: ಕಾರ್ತಿಕ್
  ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಬಾರದೇ ನಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಶ್ರವಣ್ ಹೇಳುತ್ತಾರೆ.

  ಸಾಮಾಜಿಕ ಕಳಕಳಿಯ ವಿಡಿಯೋ ಕೂಡಾ ಇವೆ

  ಅಡ್ಡ, ಇಂಗ್ಲೀಷ್ ನಲ್ಲಿ ಬೀಯಿಂಗ್ ಟಾಲೆರೆಂಟ್, ಹರ್ ಡ್ರೆಸ್, ಕತ್ತಲೆ ಭಾಗ್ಯದ ಬಗ್ಗೆ ವಿಡಂಬನೆ, ಅಗಂತುಕ, ನೋಡಿ ಸ್ವಾಮಿ ನಾವಿರೋದೆ ಹೀಗೆ ಕಿರುಚಿತ್ರ ನಿರ್ಮಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಇಲ್ಲಿ ಟಿವಿ69 ಅಣಕು ವಿಡಿಯೋ ನೋಡಿ ಆನಂದಿಸಿ

  ಕನ್ನಡ ಟಾಕೀಸ್ ಸರಣಿಯ ವಿಮರ್ಶೆಗಳು

  ನಮ್ದುಕೆ ಆಯ್ಕೆಯ 2015ರ ಅತ್ಯುತ್ತಮ ಚಿತ್ರಗಳು:
  ಕೃಷ್ಣ ಲೀಲಾ
  ಉಪ್ಪಿ 2
  ರಂಗಿ ತರಂಗ
  ಕೆಂಡಸಂಪಿಗೆ
  ನಾ ಅವನಲ್ಲ ಅವಳು
  ಆಟಗಾರ

  ಕನ್ನಡ ಟಾಕೀಸ್ ಸರಣಿಯಲ್ಲಿ ರಂಗಿ ತರಂಗ ಚಿತ್ರದ ವಿಮರ್ಶೆ, ಅಚ್ಚಕನ್ನಡದ ಹಾಡುಗಳ ಬಗ್ಗೆ ಈ ಹಿಂದೆ ವಿಡಿಯೋ ಮಾಡಿದ್ದರು. ಇಲ್ಲಿ 2015 ಕೆಲವು ಚಿತ್ರಗಳ ಬಗ್ಗೆ ಮಾತ್ರ ನೀಡಲಾಗಿದೆ. ಇದಲ್ಲದೆ, ದರ್ಶನ್ ಹಾಗೂ ಯಶ್, ಪುನೀತ್ , ಸುದೀಪ್ ಅವರ ಚಿತ್ರಗಳು ಸದ್ದು ಮಾಡಿವೆ. ಎಲ್ಲವನ್ನು ನೋಡಿ, ಇತರರಿಗೂ ತಿಳಿಸುವುದು ಕನ್ನಡಿಗರಿಗೆ ಬಿಟ್ಟಿದ್ದು

  English summary
  NamduK team presenting the best Kannada movies of 2015. Team has request to recommend this video to all your Kannada and Non-Kannadiga friends who are not Kannada cinema fans. Let them know that we have good Kannada movies.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more