»   » ರೂಪಾ ಅಯ್ಯರ್ ಸಾರಥ್ಯದ 'ನಮೋ' ಸಿನಿಮಾದ ಪೋಸ್ಟರ್ ಬಿಡುಗಡೆ

ರೂಪಾ ಅಯ್ಯರ್ ಸಾರಥ್ಯದ 'ನಮೋ' ಸಿನಿಮಾದ ಪೋಸ್ಟರ್ ಬಿಡುಗಡೆ

Posted By:
Subscribe to Filmibeat Kannada

ಒಂದು ಕಡೆ ನಟ ಉಪೇಂದ್ರ ಪಕ್ಷದಿಂದ ನಿರ್ದೇಶಕಿ ರೂಪಾ ಅಯ್ಯರ್ ತಮ್ಮ ರಾಜಕೀಯ ಕೆರಿಯರ್ ಶುರು ಮಾಡಿದ್ದಾರೆ. ಆದರೆ ಇನ್ನೊಂದು ಕಡೆ ರೂಪಾ ಅಯ್ಯರ್ ತಮ್ಮ ಮತ್ತೊಂದು ಸಿನಿಮಾವನ್ನು ಶುರು ಮಾಡಿದ್ದಾರೆ. ವಿಶೇಷ ಅಂದರೆ ಅವರು ಈಗ ಸಿನಿಮಾ ಮಾಡುತ್ತಿರುವುದು ಕೂಡ ರಾಜಕೀಯಕ್ಕೆ ಸಂಭಂಧಪಟ್ಟ ವ್ಯಕ್ತಿಯ ಬಗ್ಗೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಈಗ ರೂಪಾ ಅಯ್ಯರ್ ಒಂದು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಸಿನಿಮಾಗೆ ಈಗಾಗಲೇ 'ನಮೋ ಟ್ರೂ ಇಂಡಿಯನ್' ಎಂಬ ಹೆಸರನ್ನು ಇಟ್ಟಿದ್ದಾರೆ. ವಿಶೇಷ ಅಂದರೆ ಇಂದು ಮಹಿಳಾ ದಿನಾಚರಣೆಯ ವಿಶೇಷವಾಗಿ ತಮ್ಮ ಸಿನಿಮಾ ಫಸ್ಟ್ ಲುಕ್ ಅನ್ನು ಅವರು ಬಿಡುಗಡೆ ಮಾಡಿದ್ದಾರೆ. ಮೂರು ಬಣ್ಣದಲ್ಲಿ ಚಿತ್ರದ ಪೋಸ್ಟರ್ ಹೊರ ಬಂದಿದೆ. ಭಾರತ ದ ಬಾವುಟದ ಬಣ್ಣವಾದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಮೂರು ವಿಶೇಷ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.

'ಕಲರ್ಸ್' ಎಂಬ ವಿಭಿನ್ನ ಸಿನಿಮಾವನ್ನು ಮಾಡಿದ್ದ ರೂಪಾ ಅಯ್ಯರ್ ಆ ನಂತರ ನಮೋ ಟ್ರೂ ಇಂಡಿಯನ್' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸಿನಿಮಾಗೆ ಗಾಯತ್ರಿ ರವಿ ಬಂಡಾಳ ಹಾಕಿದ್ದು, ರೂಪಾ ಅಯ್ಯರ್ ಅವರ ಈ ಕನಸಿಗೆ ಸಾಥ್ ನೀಡಿದ್ದಾರೆ. ಶ್ರೀ ಸಂಕಲನ, ಗೌತಮ್ ಶ್ರೀವತ್ಸ ಸಂಗೀತ, ಸೀತಾರಾಮ್ ಜಿ ಎಸ್ ವಿ ಕ್ಯಾಮರಾ ಕೆಲಸವನ್ನು ನಿರ್ವಹಿಸಲಿದ್ದಾರೆ.

Namo true indian kannada movie first look released

ನರೇಂದ್ರ ಮೋದಿ ಅವರ ಜೀವನಾಧಾರತ ಸಿನಿಮಾ ಇದಾಗಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ. ಸಿನಿಮಾದ ಕಥೆ, ಚಿತ್ರಕಥೆಯನ್ನು ಸಾಕಷ್ಟು ರಿಸರ್ಜ್ ಮಾಡಿ ರೆಡಿ ಮಾಡಲಾಗಿದೆ. ಮೋದಿ ಅವರ ಬಗ್ಗೆ ತಿಳಿಯದ ಅನೇಕ ವಿಷಯಗಳು ಈ ಸಿನಿಮಾದ ಮೂಲಕ ರಿವೀಲ್ ಆಗಲಿದೆ.

English summary
Kannada director Roopa Iyer's 'Namo true indian' kannada movie first look released. The movie is a life story of Narendra Modi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada