For Quick Alerts
  ALLOW NOTIFICATIONS  
  For Daily Alerts

  ಯಶ್‌ಗೆ ಬೇಸರ ಮಾಡುವ ಉದ್ದೇಶ ನಮಗಿಲ್ಲ: ನಂದ ಕಿಶೋರ್

  |

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದ ಮುಹೂರ್ತ ಇಂದು ನೆರವೇರಿದ್ದು ಸಿನಿಮಾಕ್ಕೆ 'ರಾಣಾ' ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ.

  'ರಾಣಾ' ಹೆಸರಿನಲ್ಲಿ ಯಶ್ ಸಿನಿಮಾ ಮಾಡುತ್ತಾರೆಂದು ಈಗಾಗಲೇ ಘೋಷಣೆ ಆಗಿತ್ತು. ಆ ಸಿನಿಮಾವನ್ನು ಹರ್ಷ ನಿರ್ದೇಶನ ಮಾಡುವುದಾಗಿ ನಿಶ್ಚಯವಾಗಿತ್ತು. ಆದರೆ ಈಗ ಅದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿದೆ.

  ಮುಹೂರ್ತದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ ನಂದ ಕಿಶೋರ್, ''ರಾಣಾ' ಹೆಸರು ನಿರ್ಮಾಪಕ ಕೆ.ಮಂಜು ಅವರ ಬಳಿಯೇ ಇತ್ತು. ಸಿನಿಮಾದ ಕತೆ ಅಂತಿಮವಾದ ಮೇಲೆ ಸೂಕ್ತ ಹೆಸರಿಗಾಗಿ ಹುಡುಕುತ್ತಿದ್ದಾಗ ಕೆ.ಮಂಜು ಅವರ ನಿರ್ಮಾಣ ಸಂಸ್ಥೆಯ ಬಳಿ ಇರುವ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಎಂದಾಯಿತು. ಆಗ ನಮಗೆ ಆಕರ್ಷಕವಾಗಿ ಕಂಡಿದ್ದು 'ರಾಣಾ' ಎಂದರು ನಂದ ಕಿಶೋರ್.

  ನಾವು ಮಾಡುತ್ತಿರುವ ಆಕ್ಷನ್ ಥ್ರಿಲ್ಲರ್ ಕತೆಗೆ 'ರಾಣಾ' ಹೆಸರು ಚೆನ್ನಾಗಿ ಒಪ್ಪಿಗೆ ಆಗುತ್ತದೆ ಎಂಬ ಕಾರಣಕ್ಕೆ ನಾವು ಹೆಸರು ಆಯ್ಕೆ ಮಾಡಿದೆವೇ ಹೊರತು ಯಾರಿಗಾದರೂ ಬೇಸರ ಮಾಡಬೇಕು. ಅವರ ಬಳಿಯಿಂದ ಹೆಸರನ್ನು ಎತ್ತಿಕೊಂಡ ಬರಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ'' ಎಂದಿದ್ದಾರೆ ನಂದ ಕಿಶೋರ್.

  ''ಹೊಸ ನಾಯಕರಿಗೆ ಬೇಕಾದಂತಹಾ ಪಬ್ಲಿಸಿಟಿ 'ರಾಣಾ' ಟೈಟಲ್‌ನಲ್ಲಿ ಇದೆ. 'ರಾಣಾ' ಹೆಸರು ಕೇಳಿದಾಗ ಆ ಹೆಸರು ನಮ್ಮ ನಾಯಕ ಶ್ರೇಯಸ್‌ಗೆ ಹಾಗೂ ಆತ ಮಾಡುತ್ತಿರುವ ಪಾತ್ರಕ್ಕೆ ಸೂಟ್ ಆಗುತ್ತದೆ ಎನಿಸಿತು ಹಾಗಾಗಿ ಸಿನಿಮಾಕ್ಕೆ ಅದೇ ಹೆಸರಿಟ್ಟಿದ್ದೇವೆ'' ಎಂದಿದ್ದಾರೆ ನಂದ ಕಿಶೋರ್.

  Recommended Video

  ಅಪಘಾತ ಎಲ್ಲಿ ? ಯಾವಾಗ ? ಹೇಗಾಯ್ತು? | Filmibeat Kannada

  'ರಾಣಾ' ಸಿನಿಮಾದ ಬಗ್ಗೆ ಮಾತನಾಡಿದ ನಂದ ಕಿಶೋರ್, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ, ದೊಡ್ಡ ಕಥಾ ಹಂದರ ಅಲ್ಲದೇ ಇದ್ದರೂ ಪ್ರಾಮಾಣಿಕ ಪ್ರಯತ್ನ ಮತ್ತು ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ಇದಾಗಿರಲಿದೆ'' ಎಂದಿದ್ದಾರೆ.

  English summary
  Director Nanda Kishore talks about movie title Rana. He said we didn't want to hurt anybody. previously Yash's movie announced on the same name.
  Saturday, July 3, 2021, 8:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X