Don't Miss!
- Finance
Milk Price: ಅಮುಲ್ ಬಳಿಕ ಈ ಬ್ರ್ಯಾಂಡ್ ಹಾಲಿನ ದರ 3 ರೂಪಾಯಿ ಏರಿಕೆ!
- News
50% ಟ್ರಾಫಿಕ್ ಫೈನ್: ಒಂದೇ ದಿನ ಹರಿದು ಬಂತು ಕೋಟಿಗಟ್ಟಲೇ ಹಣ, ಲಕ್ಷಗಟ್ಟಲೇ ಪ್ರಕರಣ ಇತ್ಯರ್ಥ- ಅಂಕಿಅಂಶ
- Lifestyle
ನಿಮ್ಮ ಕೂದಲು ಉದುರುವುದಕ್ಕೂ ಮೊಬೈಲ್ಗೂ ಸಂಬಂಧವಿದೆ ಗೊತ್ತೆ?
- Sports
ಲೂನಾ ಸವಾರಿ ಮಾಡುವುದನ್ನು ನಿಲ್ಲಿಸು ಎಂದು ಚೇತೇಶ್ವರ ಪೂಜಾರಗೆ ಹೇಳಿದ್ದ ರವಿಶಾಸ್ತ್ರಿ
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೊಗರು' ನಂತರ ಯುವನಟನಿಗೆ ಆಕ್ಷನ್-ಕಟ್ ಹೇಳಲಿರುವ ನಂದ ಕಿಶೋರ್
ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ ಮಿಶ್ರ ಪ್ರತಿಕ್ರಿಯೆಗೆ ಗುರಿಯಾದರೂ ಕಲೆಕ್ಷನ್ ಲೆಕ್ಕದಲ್ಲಿ ನಿರ್ಮಾಪಕರಿಗೆ ಒಳ್ಳೆಯ ಲಾಭವನ್ನೇ ಮಾಡಿಕೊಟ್ಟಿತು.
'ಪೊಗರು' ಸಿನಿಮಾ ಬಿಡುಗಡೆ ಬಳಿಕ ಸಿನಿಮಾದ ನಿರ್ದೇಶಕ ನಂದ ಕಿಶೋರ್‌ಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು, ಬ್ರಾಹ್ಮಣ ಸಮುದಾಯವನ್ನು ಹೀನವಾಗಿ ಚಿತ್ರಿಸಲಾಗಿದೆ ಎಂದು ಹಲವರು ಪ್ರತಿಭಟನೆ ಮಾಡಿ ದೂರು ನೀಡಿದರು. ನಂದ ಕಿಶೋರ್ ಅವರು ನೇರವಾಗಿ ಮೂದಲಿಕೆಗೆ ಗುರಿಯಾದರು.
ಆದರೆ ಈಗ 'ಪೊಗರು' ಪ್ರಭೆಯಿಂದ ಮುಂದಕ್ಕೆ ಸರಿದಿರುವ ನಂದ ಕಿಶೋರ್, ಕನ್ನಡದ ಯುವ ನಾಯಕ ನಟನಿಗೆ ಸಿನಿಮಾ ನಿರ್ದೇಶನ ಮಾಡುವುದಾಗಿ ಪ್ರಕಟಿಸಿದ್ದಾರೆ. ಸಿನಿಮಾದ ಘೋಷಣೆಯನ್ನೂ ಮಾಡಿ ಆಗಿದೆ.
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಮುಂದಿನ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರೆ. ನಿನ್ನೆ (ಮಾರ್ಚ್ 05) ಶ್ರೇಯಸ್ ಹಟ್ಟುಹಬ್ಬವಿದ್ದು ಅದೇ ದಿನದಂದು ಹೊಸ ಸಿನಿಮಾದ ಘೋಷಣೆ ಮಾಡಲಾಗಿದೆ.
'ಪಡ್ಡೆಹುಲಿ' ಸಿನಿಮಾದ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಎರಡನೇ ಸಿನಿಮಾ 'ವಿಷ್ಣುಪ್ರಿಯ'ದ ಬಿಡುಗಡೆಗೆ ಕಾಯುತ್ತಿದ್ದಾರೆ. 'ವಿಷ್ಣುಪ್ರಿಯ' ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ. ಈ ನಡುವೆ ನಂದ ಕಿಶೋರ್, ಶ್ರೇಯಸ್ ಒಟ್ಟಾಗಿ ಸಿನಿಮಾ ಮಾಡುವ ಘೋಷಣೆ ಹೊರಬಿದ್ದಿದೆ.
ನಂದ ಕಿಶೋರ್-ಶ್ರೇಯಸ್ ಸಿನಿಮಾವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಾಣ ಮಾಡಲಿದ್ದಾರೆ. ಗುಜ್ಜಲ್ ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದು. ಈ ಮೊದಲು 'ಟಗರು' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ ಅನುಭವವನ್ನು ಅವರು ಹೊಂದಿದ್ದಾರೆ.
ಶ್ರೇಯಸ್-ನಂದ ಕಿಶೋರ್ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಆದರೆ ತಾಂತ್ರಿಕ ವರ್ಗದ ಆಯ್ಕೆ ಬಹುತೇಕ ಅಂತಿಮವಾಗಿದೆ. ಸಿನಿಮಾದ ಛಾಯಾಗ್ರಹಣವನ್ನು ಶೇಖರ್ ಚಂದ್ರು, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯಲಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾದ ಶೀರ್ಷಿಕೆ ಘೋಷಿಸುವುದಾಗಿ ಹೇಳಿದೆ ಚಿತ್ರತಂಡ.
Recommended Video
'ಪೊಗರು' ಬಳಿಕ ಧ್ರುವ ಸರ್ಜಾಗೆ 'ದುಬಾರಿ' ಸಿನಿಮಾ ನಿರ್ದೇಶನ ಮಾಡುವುದಾಗಿ ನಂದ ಕಿಶೋರ್ ಹೇಳಿದ್ದರು. ಶಿವರಾಜ್ ಕುಮಾರ್ ಅವರಿಗೂ ಒಂದು ಸಿನಿಮಾ ನಿರ್ದೇಶನ ಮಾಡುವುದಾಗಿ ನಂದ ಕಿಶೋರ್ ಹೇಳಿದ್ದರು. ಆದರೆ ಈಗ ಅಚಾನಕ್ಕಾಗಿ ಶ್ರೇಯಸ್ ಜೊತೆ ಕೈ ಜೋಡಿಸಿದ್ದಾರೆ.