»   » 'ಹಾಲಿವುಡ್'ಗೆ ಹಾರಿದ ಸುಧೀರ್ ಪುತ್ರ ನಿರ್ದೇಶಕ ನಂದ ಕಿಶೋರ್!

'ಹಾಲಿವುಡ್'ಗೆ ಹಾರಿದ ಸುಧೀರ್ ಪುತ್ರ ನಿರ್ದೇಶಕ ನಂದ ಕಿಶೋರ್!

Posted By:
Subscribe to Filmibeat Kannada

ಸ್ಟಾರ್ ಡೈರೆಕ್ಟರ್ ನಂದ ಕಿಶೋರ್ ಈಗ ತುಂಬ ಬಿಜಿ ಇರುವ ನಿರ್ದೇಶಕ. ಟಾಪ್ ಹೀರೋಗಳ ರೀತಿಯಲ್ಲಿ ಕೈನಲ್ಲಿ ಮೂರು ಸಿನಿಮಾ ಇಟ್ಟುಕೊಂಡಿರುವ ನಂದ ಕಿಶೋರ್ ಈಗ ಹಾಲಿವುಡ್ ಚಿತ್ರವನ್ನು ಮಾಡುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾ ನೀಡಿರುವ ನಂದ ಈಗ ಹಾಲಿವುಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷ ಅಂದರೆ 'ಹಾಲಿವುಡ್'ಗೆ ಹಾರಿದ ಕನ್ನಡ ಮೊದಲ ನಿರ್ದೇಶಕ ಎಂಬ ಖ್ಯಾತಿ ಈಗ ನಂದ ಪಾಲಾಗಿದೆ. ಇನ್ನು ಹಾಲಿವುಡ್ ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಬಗ್ಗೆ ಸ್ವತಃ ನಂದಕಿಶೋರ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...

ಹಾಲಿವುಡ್ ಚಿತ್ರ

ಸ್ಯಾಂಡಲ್ ವುಡ್ ಸಾಲು ಸಾಲು ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ನಂದ ಕಿಶೋರ್ ಈಗ ಹಾಲಿವುಡ್ ನಲ್ಲಿ ಚಿತ್ರ ಮಾಡುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ 'ಹಾಲಿವುಡ್'ಗೆ ಹಾರಿದ ಕನ್ನಡ ಮೊದಲ ನಿರ್ದೇಶಕ ಎಂಬ ಹೆಗ್ಗಾಳಿಕೆಯನ್ನು ಸುಧೀರ್ ಪುತ್ರ ಪಡೆದಿದ್ದಾರೆ.

ಅನೂಪ್ ರೇವಣ್ಣ ನಟನೆ

ವಿಶೇಷ ಅಂದರೆ ನಂದ ಕಿಶೋರ್ ನಿರ್ದೇಶನದ ಈ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಟ ಅನೂಪ್ ರೇವಣ್ಣ.

ಅನೂಪ್ ತರಬೇತಿ

ಕಳೆದ ಒಂದು ವರ್ಷದಿಂದ ಈ ಚಿತ್ರಕ್ಕಾಗಿ ಅನೂಪ್ ನೂಯರ್ಕ್ ಫಿಲ್ಮ್ಸ್ ಅಕಾಡಮಿಯಲ್ಲಿ ತರಬೇತಿ ತೆಗೆದುಕೊಳ್ಳುತ್ತಿದ್ದಾರೆ.

ಎರಡು ಭಾಷೆಯಲ್ಲಿ ತೆರೆಗೆ

ನಂದಕಿಶೋರ್ ಮತ್ತು ಅನೂಪ್ ಅವರ ಈ ಹೊಸ ಸಿನಿಮಾ ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ತೆರೆಗೆ ಬರಲಿದೆ.

ಹಾಲಿವುಡ್ ತಂತ್ರಜ್ಞರು

ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸ ಶುರುವಾಗಿದ್ದು, ಸಿನಿಮಾದ ಚಿತ್ರೀಕರಣ 2018ರಲ್ಲಿ ಪ್ರಾರಂಭವಾಗಲಿದೆ. ಇನ್ನು ಈ ಚಿತ್ರದಲ್ಲಿ ಹಾಲಿವುಡ್ ತಂತ್ರಜ್ಞರೆ ಕೆಲಸ ಮಾಡಲಿದ್ದಾರಂತೆ.

ಫಸ್ಟ್ ಲುಕ್ ಟೀಸರ್

ಫೆಬ್ರವರಿ 8ಕ್ಕೆ ನಟ ಅನೂಪ್ ರೇವಣ್ಣ ಹುಟ್ಟುಹಬ್ಬದ ವಿಶೇಷವಾಗಿ ಈ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಲಿದೆ.

ಚಿತ್ರೀಕರಣದ ವೇಳೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ ಮನೋರಂಜನ್ ಅಂಡ್ ಟೀಂ

ನಂದ ಕಿಶೋರ್ ಸಿನಿಮಾಗಳು

ಸದ್ಯ ಹಾಲಿವುಡ್ ಚಿತ್ರವನ್ನು ಹೊರತುಪಡಿಸಿ ನಂದ ಕಿಶೋರ್ ಖಾತೆಯಲ್ಲಿ 'ಬೃಹಸ್ಪತಿ' ಮತ್ತು 'ಪೋಗರು' ಸಿನಿಮಾಗಳಿವೆ.

English summary
Director Nanda Kishore planning to do a hollywood movie with Anup Revanna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X