For Quick Alerts
  ALLOW NOTIFICATIONS  
  For Daily Alerts

  ಉಪ್ಪಿ-ಕಿಚ್ಚನ ಸಿನಿಮಾ ಶೂಟಿಂಗ್ ದಿನಾಂಕ ಯಾವಾಗ ಗೊತ್ತಾ?

  By Suneetha
  |

  ಸ್ಯಾಂಡಲ್ ವುಡ್ ಮತ್ತೋರ್ವ ಸ್ಟಾರ್ ನಟರಾದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದಾಗಿ ರಿಮೇಕ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಾವು ಇದೇ ಫಿಲ್ಮಿ ಬೀಟಲ್ಲಿ ಹೇಳಿದ್ವಿ ತಾನೇ.

  ಇದೀಗ ಈ ಮಲ್ಟಿ ಸ್ಟಾರರ್ ಚಿತ್ರತಂಡದಿಂದ ಹೊರಬಿದ್ದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ ಹಿಂದಿ ಸಿನಿಮಾ 'ಓ ಮೈ ಗಾಡ್' ನ ರಿಮೇಕ್ ಆಗಿರುವ ಈ ಸಿನಿಮಾದ ಶೂಟಿಂಗ್ ಜನವರಿ 23 ರಿಂದ ಆರಂಭವಾಗಲಿದೆ.

  ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಅವರು ಕಾಣಿಸಿಕೊಳ್ಳುತ್ತಿದ್ದು, 'ರನ್ನ' ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ನಂದಕಿಶೋರ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.! ]

  ಉಪೇಂದ್ರ ಅವರ ಜೊತೆ ಸುದೀಪ್ ಅವರಿಗೆ ಈ ಸಿನಿಮಾ ಮೊದಲನೇ ಮಲ್ಟಿ ಸ್ಟಾರರ್ ಸಿನಿಮಾ ಆದರೆ ಶಿವಣ್ಣ ಅವರ ಜೊತೆ 'ಕಲಿ' ಚಿತ್ರದಲ್ಲಿ ಕಾಣಿಸಿಕೊಳ್ಳುವುದರಿಂದ ಅದು ಕಿಚ್ಚ ಅವರಿಗೆ ಎರಡನೇ ಮಲ್ಟಿ ಸ್ಟಾರರ್ ಸಿನಿಮಾ. ಅಲ್ಲಿಗೆ ಸುದೀಪ್ ಅವರು ಎರಡು ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ ಎಂದಾಯ್ತು.

  ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಅವರು ಸಾಮಾನ್ಯ ಭಕ್ತನಾದರೆ, ಕಿಚ್ಚ ಸುದೀಪ್ ಅವರು ಶ್ರೀ ಕೃಷ್ಣ ಪರಮಾತ್ಮನ ಪಾತ್ರದಲ್ಲಿ ಮಿಂಚಲಿದ್ದಾರೆ. ಅಂದಹಾಗೆ ಕಿಚ್ಚ ಕ್ರಿಯೇಷನ್ಸ್, ಎನ್ ಕುಮಾರ್ ಮತ್ತು ಜಯಶ್ರೀ ದೇವಿ ಎಂಬ ಮೂರು ಪ್ರೊಡಕ್ಷನ್ಸ್ ಕಂಪೆನಿಗಳು ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ.

  ಮೂಲಗಳ ಪ್ರಕಾರ ಈ ತಿಂಗಳು ಪೂರ್ತಿ ಹಾಗೂ ಫಸ್ಟ್ ಶೆಡ್ಯೂಲ್ ಸುದೀಪ್ ಮತ್ತು ಉಪೇಂದ್ರ ಅವರ ಪಾತ್ರಗಳ ಚಿತ್ರೀಕರಣ ನಡೆಯಲಿದ್ದು, ಸೆಕೆಂಡ್ ಶೆಡ್ಯೂಲ್ ರಿಯಲ್ ಸ್ಟಾರ್ ಉಪೇಂದ್ರ ಅವರ ಪಾತ್ರಕ್ಕಾಗಿ ಶೂಟಿಂಗ್ ನಡೆಯಲಿದೆ.

  ಒಟ್ನಲ್ಲಿ ಇತ್ತೀಚೆಗೆ ಗಾಂಧಿನಗರದಲ್ಲಿ ಮಲ್ಟಿಸ್ಟಾರರ್ ಸಿನಿಮಾ ಹವಾ ಜೋರಾಗಿರುವ ಈ ಸಂದರ್ಭದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಮಿಂಚುವುದರಿಂದ ಈ ಸ್ಟಾರ್ ವಾರ್ ಅನ್ನೋ ಭೂತ ಇಡೀ ಸ್ಯಾಂಡಲ್ ವುಡ್ ಕ್ಷೇತ್ರದಿಂದಲೇ ತೊಲಗಿದಂತಾಗುತ್ತದೆ.

  English summary
  Kannada Actor Sudeep -Upendra starrer film to be directed by Nanda Kishore will start on January 23. The film is a remake of the Hindi film Oh My God. This is the first of the two multi-starrers Sudeep is acting in in 2016. In the first film Upendra plays a man who files a case against God and Sudeep plays the role of Lord Krishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X