ಶ್ರೀರೆಡ್ಡಿ ಮತ್ತು ನಾನಿ ವಿವಾದಕ್ಕೆ ಎಂಟ್ರಿ ಕೊಟ್ಟ ನಾನಿ ಪತ್ನಿ
ಟಾಲಿವುಡ್ ನಟಿ ಶ್ರೀರೆಡ್ಡಿ ಮತ್ತು ನಾನಿ ನಡುವಿನ ವಿವಾದ ದಿನದಿಂದ ದಿನಕ್ಕೆ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಶ್ರೀರೆಡ್ಡಿ ಕುರಿತು ನಾನಿ ಆಗಲಿ ಅಥವಾ ಅವರ ಕುಟುಂದ ಸದಸ್ಯರಾಗಲಿ ಯಾರೋಬ್ಬರು ಕಾಮೆಂಟ್ ಮಾಡಿರಲಿಲ್ಲ.
ಇದೀಗ, ಶ್ರೀರೆಡ್ಡಿ ವಿರುದ್ಧ ನಾನಿ ಪತ್ನಿ ಗುಡುಗಿದ್ದಾರೆ. ನಾನಿ ಮೇಲೆ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ನಾನಿ ಪತ್ನಿ ಅಂಜಲಿ ಕಾಸ್ಟಿಂಗ್ ಕೌಚ್ ತಾರೆಗೆ ಟಾಂಗ್ ಕೊಟ್ಟಿದ್ದಾರೆ.

''ಈ ಸಿನಿಮಾ ಇಂಡಸ್ಟ್ರಿ ತುಂಬಾ ಕ್ಷಮಾ ಗುಣವನ್ನ ಹೊಂದಿದೆ. ಆದ್ರೆ, ಪಬ್ಲಿಸಿಟಿಗಾಗಿ ಬೇರೆಯವರ ಜೀವನವನ್ನ ಹಾಳುಮಾಡುವಂತವರು ಸಿನಿರಂಗಕ್ಕೆ ಬರುವುದು ತುಂಬಾ ಬೇಸರದ ಸಂಗತಿ. ಅವರು ನೀಡುತ್ತಿರುವ ಹೇಳಿಕೆಗಳು ಯಾರೂ ಸಭ್ಯರು ಎಂದು ತೋರಿಸುತ್ತಿದೆ. ಪ್ರಚಾರಕ್ಕಾಗಿ ಅವರ ವೈಯಕ್ತಿಕ ಜೀವನವನ್ನೇ ಇಷ್ಟು ಕೆಳಮಟ್ಟಕ್ಕೆ ತೆಗೆದುಕೊಂಡು ಬಂದಿರುವುದು ದುರಂತ'' ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುಂಚೆ ''ನಾನಿ ನನಗೆ ಮೋಸ ಮಾಡಿದ್ದಾನೆ, ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ'' ಎಂದು ಟೀಕಿಸಿದ್ದಳು. ತದ ನಂತರ ನಾನಿ, ಶ್ರೀರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ನೋಟಿಸ್ ಕೂಡ ನೀಡಿದ್ದರು.


Click it and Unblock the Notifications











