'ಸಾವಿರ ಮೈಲಿಯ ಪಯಣ ಶುರುವಾಗುವುದು ಮೊದಲ ಹೆಜ್ಜೆಯಿಂದ..' ಎಂಬ ಮಾತಿದೆ. ಮಗುವಿನ ಮೊದಲ ಹೆಜ್ಜೆ, ಮೊದಲು ಶಾಲೆಗೆ ಹೋದ ದಿನ, ಮೊದಲ ಪ್ರೀತಿ, ಮೊದಲ ಗೆಲುವು, ಮೊದಲ ಅನುಭವಗಳು.. ಹೀಗೆ 'ಮೊದಲು' ಎನ್ನುವುದಕ್ಕೆ ನಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ನಮಗೆ ಗೊತ್ತಿಲ್ಲದೆ ನಾವೇ ನೀಡಿರುತ್ತೇವೆ.
ಚಿತ್ರರಂಗದಲ್ಲಿ ಇರುವವರಿಗೂ ಕೂಡ 'ಮೊದಲ' ಸಿನಿಮಾ ಬಹಳ ಮುಖ್ಯ. ಮೊದಲ ಸಿನಿಮಾ ಎನ್ನುವುದು ಒಬ್ಬ ಕಲಾವಿದನಿಗೆ ಎಷ್ಟೋ ವರ್ಷದ ಕನಸು ಆಗಿರುತ್ತದೆ. ಮೊದಲ ಸಿನಿಮಾ ಗೆಲ್ಲಬಹುದು.. ಸೋಲಬಹುದು.. ಏನೇ ಆದರೂ ಆ ಸಿನಿಮಾದ ನೆನಪು ಮಾತ್ರ ಅಜರಾಮರ. ಮೊದಲ ಸಿನಿಮಾ ಅಂದರೆ ಅದೇನೋ ಪ್ರೀತಿ, ಅದೇನೋ ಮುಗ್ದತೆ ಅಡಗಿರುತ್ತದೆ.
ಮೊದಲ ಸಿನಿಮಾದ ಶ್ರಮ ಹಾಗೂ ಶ್ರೇಷ್ಠತೆ ಸಾರುವ ಉದ್ದೇಶದಿಂದ ನಿಮ್ಮ 'ಫಿಲ್ಮಿಬೀಟ್ ಕನ್ನಡ'.. 'ನನ್ನ ಮೊದಲ ಸಿನಿಮಾ' ಎಂಬ ಹೊಸ ಸರಣಿ ಲೇಖನಗಳನ್ನು ಪ್ರಕಟಿಸಲಿದೆ. ಈ ಶನಿವಾರದಿಂದ ಪ್ರಾರಂಭವಾಗುವ ಈ ವಿಶೇಷ ಲೇಖನ ಪ್ರತಿ ವಾರಾಂತ್ಯ ಬರಲಿದೆ. ಕನ್ನಡ ಚಿತ್ರರಂಗದ ನಟ, ನಟಿ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ಛಾಯಾಗ್ರಾಹಕ, ಗೀತರಚನೆಕಾರ ಹೀಗೆ ಚಿತ್ರರಂಗದ ಹಲವು ವಿಭಾಗದವರು ತಮ್ಮ ಮೊದಲ ಸಿನಿಮಾದ ಅನೇಕ ಕುತೂಹಲಕಾರಿ ವಿಷಯವನ್ನು ಹಂಚಿಕೊಳ್ಳಲಿದ್ದಾರೆ. ಪ್ರತಿ ವಾರ ಒಬ್ಬೊಬ್ಬರ ಲೇಖನಗಳು ಪ್ರಕಟ ಆಗಲಿದೆ.
ಒಂದು ಸಿನಿಮಾದ ಒಳಗೆ ಒಂದು ಕಥೆ ಇದ್ದರೆ, ಆ ಸಿನಿಮಾ ಹುಟ್ಟುವುದಕ್ಕೂ ಒಂದು ಕಥೆ ಇರುತ್ತದೆ. ಅಂತಹ ಕಥೆಯನ್ನು ಹೇಳುವ ಪ್ರಯತ್ನ ನಮ್ಮದು. ಎರಡುವರೆ ಗಂಟೆ ಚಿತ್ರಮಂದಿರದಲ್ಲಿ ಓಡುವ ಸಿನಿಮಾದ ಹಿಂದಿನ ಪರಪಂಚದ ದರ್ಶನ ಇಲ್ಲಿ ನಿಮಗೆ ಆಗಲಿದೆ. ಓದಿ.. ನಿಮ್ಮ ಅಭಿಪ್ರಾಯ ತಿಳಿಸಿ....
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.