For Quick Alerts
  ALLOW NOTIFICATIONS  
  For Daily Alerts

  'ನಟ ಸಾರ್ವಭೌಮ' ಸಕ್ಸಸ್ ಟೂರ್ : ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು

  |
  Nata Sarvabhouma Movie: ಅಭಿಮಾನಿಗಳ ಪ್ರೀತಿಗೆ ಅಪ್ಪು ಶರಣು

  ಪುನೀತ್ ರಾಜ್ಯಾದಂತ್ಯ ಟೂರ್ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಅಪ್ಪು ಯಾಕೆ ಟೂರ್ ಮಾಡುತ್ತಿದ್ದಾರೆ ಅಂತ ಗೊಂದಲಪಡಬೇಡಿ. ಪುನೀತ್ ಕರ್ನಾಟಕದ ಸುತ್ತ ಸುತ್ತಿರುವುದು 'ನಟ ಸಾರ್ವಭೌಮ' ಚಿತ್ರದ ವಿಶೇಷವಾಗಿ.

  'ನಟ ಸಾರ್ವಭೌಮ' ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ವೇಳೆ ಸಿನಿಮಾವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಪುನೀತ್ ಧನ್ಯವಾದ ಹೇಳಿದ್ದಾರೆ. ರಾಜ್ಯಾದಂತ್ಯ ಪುನೀತ್, ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಚಿತ್ರತಂಡ ಯಾತ್ರೆ ನಡೆಸಿದೆ.

  Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..

  ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು, ಶಿರಾ, ರಾಣಿಬೆನ್ನೂರು, ಹಾವೇರಿ ಹೀಗೆ ಸಾಕಷ್ಟು ಜಿಲ್ಲೆಗಳಿಗೆ ಪುನೀತ್ ಭೇಟಿ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ರನ್ನು ತಮ್ಮ ಊರಿನಲ್ಲಿಯೇ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

  'ನಟ ಸಾರ್ವಭೌಮ' ಫೆಬ್ರವರಿ 7 ರಂದು ಬಿಡುಗಡೆಯಾಗಿರುವ 'ನಟ ಸಾರ್ವಭೌಮ' ಯಶಸ್ವಿ ಪ್ರದರ್ಶನ ಮುಂದುವರೆಸಿದೆ. ಪುನೀತ್ ರಾಜ್ ಕುಮಾರ್ ಪವರ್ ಫುಲ್ ಡ್ಯಾನ್ಸ್ ಹಾಗೂ ಫೈಟ್ಸ್ ಸಿನಿಮಾದ ಹೈಲೈಟ್ ಆಗಿದೆ.

  ಅಪ್ಪು ಕಾರ್ ಅಡ್ಡಗಟ್ಟಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

  ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪುನೀತ್ ಹಾಗೂ ಅನುಪಮ ಪರಮೇಶ್ವರನ್ ಕಾಂಬಿನೇಶನ್ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.

  English summary
  'Nata Sarvabhouma 'kannada movie success tour. Puneeth Rajkumar's visited Haveri, Chithraduraga, Dhavanagere and met his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X