»   » ವಿಡಿಯೋ: 'ನಟ ಸಾರ್ವಭೌಮ' ಜಬರ್ದಸ್ತ್ ಟೀಸರ್

ವಿಡಿಯೋ: 'ನಟ ಸಾರ್ವಭೌಮ' ಜಬರ್ದಸ್ತ್ ಟೀಸರ್

Posted By:
Subscribe to Filmibeat Kannada
'ನಟ ಸಾರ್ವಭೌಮ' ಜಬರ್ದಸ್ತ್ ಟೀಸರ್ | FIlmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ 'ನಟ ಸಾರ್ವಭೌಮ' ಎಂದು ಹೆಸರಿಡಲಾಗಿದೆ. ಟೈಟಲ್ ಜೊತೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಟೀಸರ್ ರಿಲೀಸ್ ಮಾಡಿದೆ.

ಕ್ಯಾಮೆರಾ ಹಿಡಿದು ಕ್ಲಾಸ್ ಲುಕ್ ನಲ್ಲಿ ಪೋಸ್ ಕೊಟ್ಟಿರುವ ಪುನೀತ್ ಮೊದಲ ಲುಕ್ ನಲ್ಲೇ ಎಲ್ಲರ ಗಮನ ಸೆಳೆದಿದ್ದಾರೆ. ಹೇರ್ ಸ್ಟೈಲ್, ಫಸ್ಟ್ ಲುಕ್ ಗಮನಿಸಿದ ನಂತರ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಾತ್ರದ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತಿದೆ.

ಸಂದರ್ಶನ:ಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆ

ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದೆ. ಸಿನಿಮಾದ ಆಕ್ಷನ್ ಸೀನ್ ಗಳನ್ನ 'ಬಾಹುಬಲಿ' ಚಿತ್ರಕ್ಕೆ ಸಾಹಸ ಮಾಡಿದ್ದ ಪೀಟರ್ ಹೆನ್ ಅವರನ್ನ ಕರೆತರಲಾಗಿದೆ.

Nata Sarvabowma movie teaser released

ಇನ್ನು ಪುನೀತ್ ಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದಕ್ಕೂ ಮುಂಚೆ 'ಚಕ್ರವ್ಯೂಹ' ಚಿತ್ರದಲ್ಲಿ ಪುನೀತ್ ಮತ್ತು ರಚಿತಾ ರಾಮ್ ಜೊತೆಯಾಗಿದ್ದರು.

ಅಪ್ಪು ಬರ್ತಡೇಗೆ ಪೋಸ್ಟರ್ ರಿಲೀಸ್ ಮಾಡಿದ ಸಂತೋಷ್ ಆನಂದ್ ರಾಮ್

ನಟ ಸಾರ್ವಭೌಮ ಟೀಸರ್ ನೋಡಿ

English summary
Kannada film actor Puneet Rajkumar's new movie Nata Sarvabowma teaser released. The film is produced by Rockline Venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X