For Quick Alerts
  ALLOW NOTIFICATIONS  
  For Daily Alerts

  ಈ ವಾರ 'ನಟರಾಜ ಸರ್ವೀಸ್' ಜೊತೆಗೆ 'ಬದ್ಮಾಶ್' ಚಿತ್ರವನ್ನ ನೋಡಿ

  By Bharath Kumar
  |

  ಕಳೆದ ವಾರ ಸಿನಿಮಾಗಳಿಲ್ಲದೇ ಮಂಕಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಈ ವಾರ ಡಬಲ್ ಧಮಾಕ. ಎರಡು ನಿರೀಕ್ಷೆಯ ಚಿತ್ರಗಳು ಈ ವಾರ ತೆರೆಗೆ ಬರ್ತಿದ್ದು, ಚಿತ್ರಪ್ರೇಮಿಗಳು ಖುಷಿ ಖುಷಿಯಾಗಿ ಸಿನಿಮಾ ನೋಡಬಹುದು.

  ಶರಣ್ ಹಾಗೂ ಮಯೂರಿ ಅಭಿನಯದ 'ನಟರಾಜ ಸರ್ವೀಸ್' ಹಾಗೂ ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಬದ್ಮಾಶ್' ಚಿತ್ರಗಳು ಈ ವಾರ ಪ್ರೇಕ್ಷಕರೆದುರು ಬರುತ್ತಿದೆ.['ಮುಕುಂದ ಮುರಾರಿ'ಯಿಂದ 'ನಟರಾಜ'ನಿಗೆ ಕಷ್ಟ-ಕಷ್ಟ]

  ಎಲ್ಲ ಅಂದುಕೊಂಡಂತೆ ಆಗಿದ್ದರೇ, 'ನಟರಾಜ ಸರ್ವೀಸ್' ಚಿತ್ರ ಅಕ್ಟೋಬರ್ 21ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ, ಚಿತ್ರಮಂದಿರಗಳ ಅಭಾವದಿಂದ ನಾಳೆ ಅಂದ್ರೆ, ನವೆಂಬರ್ 17 ರಂದು ತೆರೆಕಾಣುತ್ತಿದೆ.[ಸೆನ್ಸಾರ್ ಪಾಸ್‌ ಆದ ನಟರಾಜ' ಅಕ್ಟೋಬರ್‌ 20ಕ್ಕೆ ಬರ್ತಾವ್ನೆ ! ]

  Nataraja Service And Badmaash Movies Releasing This week

  'ನಟರಾಜ್ ಸರ್ವೀಸ್', ಈ ಚಿತ್ರವನ್ನ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಇದು ಪಕ್ಕಾ ಕಾಮಿಡಿ ಎಂಟರ್‌ಟೈನರ್ ಚಿತ್ರವಾಗಿದ್ದು, ಸಾಮಾನ್ಯ ಮನುಷ್ಯನ ಸಣ್ಣ ಸಣ್ಣ ಅಂಶಗಳನ್ನಿಟ್ಟು ಕಥೆ ಎಣೆಯಲಾಗಿದೆ.

  ಶರಣ್ ಗೆ ಕೃಷ್ಣಲೀಲಾ ಖ್ಯಾತಿಯ ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಇವರಿಬ್ಬರು ತೆರೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಹಾಡುಗಳು ಸೂಪರ್‌ಹಿಟ್‌ ಎನಿಸಿಕೊಂಡಿದೆ.

  ಇನ್ನೂ ಸ್ಪೆಷಲ್ ಹೀರೋ 'ಧನಂಜಯ್ ಬಹು ನಿರೀಕ್ಷಿತ ಚಿತ್ರ 'ಬದ್ಮಾಶ್', ಇದೇ ವಾರ ಅಂದ್ರೆ, ನವೆಂಬರ್ 18 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.[ಸ್ಪೆಷಲ್ ವ್ಯಕ್ತಿಯಿಂದ 'ಬದ್ಮಾಶ್' ಸ್ಪೆಷಲ್ ಟ್ರೈಲರ್ ಬಿಡುಗಡೆ ]

  ಧನಂಜಯ್ ಗೆ ಸಂಚಿತಾ ಶೆಟ್ಟಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ 'ಬದ್ಮಾಶ್' ಚಿತ್ರದ ಟ್ರೈಲರ್ ಗೆ ಉತ್ತಮ ಪ್ರಶಂಸೆ ಸಿಕ್ಕಿದ್ದು, ಸಲ್ಮಾನ್ ಖಾನ್, ಶಿವರಾಜ್ ಕುಮಾರ್, ಟಾಲಿವುಡ್ ನಿರ್ಮಾಪಕರು ಸೇರಿದಂತೆ ಹಲವರು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ. ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರವಿ ಕಶ್ಯಪ್ ಅವರು ಬಂಡವಾಳ ಹೂಡಿದ್ದಾರೆ.[ತೆಲುಗಿನಲ್ಲಿ 'ಬದ್ಮಾಶ್' ಆಗ್ತಾರಾ ಅಲ್ಲು ಅರ್ಜುನ್.? ]

  ಸದ್ಯ, ದೇಶಾದ್ಯಂತ 500 ಹಾಗೂ 1000 ಸಾವಿರ ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿದ್ದು, ದಿನನಿತ್ಯದ ಖರ್ಚಿಗಾಗಿ ಜನರ ಪರದಾಡುತ್ತಿದ್ದಾರೆ. ಹೀಗಿರುವಾಗ ಜನರ ಸಿನಿಮಾ ನೋಡಲು ಬರುತ್ತಾರ ಎಂಬ ಅನುಮಾನದ ನಡುವೆ ಇವೆರೆಡು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಸಮಸ್ಯೆಯ ನಡುವೆಯೂ ನೀವು ಸಿನಿಮಾ ನೋಡುವುದಾದರೇ, ಯಾವ ಚಿತ್ರಕ್ಕೆ ಹೋಗಬೇಕು ಅಂತ ಈಗಲೇ ಡಿಸೈಡ್ ಮಾಡಿ.

  English summary
  Kannada movie 'Nataraja Service', and 'Badmaash' both will hit silver screen all over Karnataka this week. Sharan starrer 'Nataraja Service' movie is releasing Tomorrow (November 17), and Dhananjay starrer 'Badmaash' will release day after tomorrow (November 18).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X