»   » 500, 1000 ರೂ. ಹಳೇ ನೋಟಿಗೆ 'ನಟರಾಜ್ ಸರ್ವೀಸ್' ಚಿತ್ರ ನೋಡಬಹುದು

500, 1000 ರೂ. ಹಳೇ ನೋಟಿಗೆ 'ನಟರಾಜ್ ಸರ್ವೀಸ್' ಚಿತ್ರ ನೋಡಬಹುದು

Written By:
Subscribe to Filmibeat Kannada

ದಿಢೀರ್ ಅಂತ 500, 1000 ಮುಖ ಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿರುವುದರಿಂದ, ಎಲ್ಲರೂ ನೋಟುಗಳನ್ನು ಬದಲಿಸಿಕೊಳ್ಳುವ ಆತುರದಲ್ಲಿದ್ದಾರೆ. ಕೆಲವರಿಗಂತೂ ಇದೇ ದೊಡ್ಡ ಟೆನ್ಷನ್ ಆಗ್ಬಿಟ್ಟಿದೆ.

ಸಹಜವಾಗಿ ಎಲ್ಲಾ ಬ್ಯಾಂಕ್ ಗಳ ಮುಂದೆ ಕ್ಯೂ ಕಿಲೋಮೀಟರ್ ಗಟ್ಟಲೆ ಇದೆ. ಹೀಗಿರುವಾಗ, ಸಿನಿಮಾ ನೋಡುವ ಮೂಡ್ ನಲ್ಲಿ ಯಾರಿದ್ದಾರೆ ಸ್ವಾಮಿ.? ನೋಡುವ ಇಚ್ಛೆ ಇದ್ದರೂ ಚೇಂಜ್ ಎಲ್ಲಿದೆ.?

Nataraja Service Movie Release on November 17th

ಹೀಗೆ 'ಚಿಲ್ಲರೆ ಸಮಸ್ಯೆ' ಎದುರಾಗಿರುವ ಕಾರಣ ಗಾಂಧಿನಗರ ಬಿಕೋ ಎನ್ನುತ್ತಿದೆ. ಬಹುತೇಕ ಎಲ್ಲಾ ಥಿಯೇಟರ್ ಗಳೂ ಖಾಲಿ ಹೊಡೆಯುತ್ತಿವೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರಗಳನ್ನ ವೀಕ್ಷಿಸಲೂ ಪ್ರೇಕ್ಷಕರು ಬರುತ್ತಿಲ್ಲ. ಇನ್ನೂ ಈ ವಾರ ಬಿಡುಗಡೆಯಾಗುವ ಸಿನಿಮಾಗಳ ಕಥೇ ಏನು ಗುರು ಅಂತ ನಿರ್ಮಾಪಕರು ತಲೆಕೆಡಿಸಿಕೊಂಡು ಕೂತಿದ್ದಾರೆ. ಆದ್ರೆ, ಈ ಟೆನ್ಷನ್ 'ನಟರಾಜ್ ಸರ್ವೀಸ್' ಚಿತ್ರತಂಡಕ್ಕಿಲ್ಲ.

Nataraja Service Movie Release on November 17th

ಹೌದು, ಜನರನ್ನ ಥಿಯೇಟರ್ ಗೆ ಸೆಳೆಯುವುದಕ್ಕೆ 'ನಟರಾಜ್ ಸರ್ವೀಸ್' ಚಿತ್ರತಂಡ ದಿಟ್ಟೆದೆಯ ನಿರ್ಧಾರ ಕೈಗೊಂಡಿದೆ. ಹಳೇ ನೋಟುಗಳ ನಿಷೇಧದ ಮಧ್ಯೆಯೂ, 'ನಟರಾಜ್ ಸರ್ವೀಸ್' ಚಿತ್ರತಂಡ ಹಳೇ ನೋಟುಗಳನ್ನ ತೆಗೆದುಕೊಳ್ಳಲಿದೆಯಂತೆ. ತಮ್ಮ ಚಿತ್ರವನ್ನ ನೋಡಲು ಬರುವ ಪ್ರೇಕ್ಷಕರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಈ ನಿರ್ಧಾರವನ್ನ ಕೈಗೊಂಡಿದ್ದು, ಚಿತ್ರಮಂದಿರಗಳಲ್ಲಿ ಹಳೆಯ 500, 1000 ಮುಖ ಬೆಲೆಯ ನೋಟ್ ಗಳಿಗೆ ಟಿಕೆಟ್ ನೀಡಲು ಮುಂದಾಗಿದೆ.

Nataraja Service Movie Release on November 17th

'ನಟರಾಜ್ ಸರ್ವೀಸ್' ಇದೇ ವಾರ, ಅಂದ್ರೆ ನವೆಂಬರ್ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಹಳೆಯ 500, 1000 ಮುಖ ಬೆಲೆಯ ನೋಟ್ ಗಳಿಗೆ ಟಿಕೆಟ್ ಪಡೆದು ಸಿನಿಮಾ ನೋಡಬಹುದು. ಈ ಅವಕಾಶ ನವೆಂಬರ್ 30ನೇ ತಾರೀಕಿನವರೆಗೂ ಮಾತ್ರ ಚಾಲ್ತಿಯಲ್ಲಿರಲಿದೆಯಂತೆ. ಈ ವಿಷ್ಯವನ್ನ ಸ್ವತಃ ಚಿತ್ರದ ನಿರ್ಮಾಪಕ ಹಾಗೂ ವಿತರಕರು ಖಚಿತ ಪಡಿಸಿದ್ದು, ಪ್ರೇಕ್ಷಕರ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

Nataraja Service Movie Release on November 17th

'ನಟರಾಜ್ ಸರ್ವೀಸ್' ಚಿತ್ರವನ್ನ ಪವನ್ ಒಡೆಯರ್ ನಿರ್ದೇಶನ ಮಾಡಿದ್ದು, ಶರಣ್ ಹಾಗೂ ಮಯೂರಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಎಸ್ ರಾಜ್ ಕುಮಾರ್ ಬಂಡವಾಳ ಹಾಕಿದ್ದು, ಅನೂಪ್ ಸೀಳಿನ್ ಸಂಗೀತ ಒದಗಿಸಿದ್ದಾರೆ.

English summary
keeping in mind the current scenario, Nataraja Service Movie film team has come up with unique way to grab the audience towards the theater with old 500, 1000 notes. 'Nataraja Service' Movie will hit silver screen all over Karnataka on november 17th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada