For Quick Alerts
  ALLOW NOTIFICATIONS  
  For Daily Alerts

  ಭಾನುವಾರ 'ನಾತಿಚರಾಮಿ' ಚಿತ್ರದ ವಿಶೇಷ ಪ್ರದರ್ಶನ

  |

  'ನಾತಿಚರಾಮಿ' ಸಿನಿಮಾದ ವಿಶೇಷ ಪ್ರದರ್ಶನ ಇದೇ ಭಾನುವಾರ ನಡೆಯಲಿದೆ. ಸಂಜೆ 4 ಗಂಟೆಗೆ ಚಾಮರಾಜಪೇಟೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

  ಅವಿರತ ತಂಡ ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ವಿಶೇಷವಾಗಿ 'ನಾತಿಚರಾಮಿ' ಸಿನಿಮಾದ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡಲಾಗಿದೆ. ಈ ಮೂಲಕ ಚಿತ್ರಮಂದಿರದಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಟಿಕೆಟ್ ಬೆಲೆ 200 ರೂಪಾಯಿ ಇದೆ.

  ಚಿತ್ರ ವಿಮರ್ಶೆ: ನಾತಿಚರಾಮಿ-ಸ್ವಾಭಿಮಾನಿ ಮಹಿಳೆಯ ಪ್ರಶ್ನೆಗಳು, ತುಮುಲಗಳು

  ಜಗನ್ಮೋಹನ್ ರೆಡ್ಡಿ, ಶಿವಕುಮಾರ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಮಂಸೋರೆ ಅವರ ಎರಡನೇ ನಿರ್ದೇಶನದ ಸಿನಿಮಾ ಇದಾಗಿದೆ. ಶೃತಿ ಹರಿಹರನ್, ಸಂಚಾರಿ ವಿಜಯ್, ಪೂರ್ಣ ಚಂದ್ರ ಮೈಸೂರು, ಬಾಲಾಜಿ ಮನೋಹರ್ ಚಿತ್ರದಲ್ಲಿ ನಟಿಸಿದ್ದಾರೆ.

  ಭಾನುವಾರದ ಚಿತ್ರ ಪ್ರದರ್ಶನದಲ್ಲಿ ಚಿತ್ರತಂಡ ಸಹ ಭಾಗಿಯಾಗಲಿದ್ದು, ಅವರ ಜೊತೆಗೆ ಸಿನಿಮಾವನ್ನು ನೋಡಬಹುದಾಗಿದೆ. ಚಿತ್ರ ಪ್ರದರ್ಶನದ ಬಳಿಕ ನಿಮ್ಮ ಅಭಿಪ್ರಾಯವನ್ನು ಸಹ ಚಿತ್ರತಂಡದ ಜೊತೆಗೆ ಹಂಚಿಕೊಳ್ಳಬಹುದಾಗಿದೆ.

  English summary
  Nathicharami kannada movie special show on this sunday (February 17th) at kalavidara sanga chamrajpet Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X