For Quick Alerts
  ALLOW NOTIFICATIONS  
  For Daily Alerts

  ರಾಷ್ಟ್ರ ಪ್ರಶಸ್ತಿಯಿಂದ ಕರ್ನಾಟಕ ರತ್ನ; ಪುನೀತ್ ಗೆದ್ದ ಎಲ್ಲಾ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

  |

  ಇಂದು ( ನವೆಂಬರ್ 1 ) ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಡಗರ ಜೋರಾಗಿದೆ. ಎಲ್ಲೆಡೆ ಹಳದಿ ಕೆಂಪು ಬಾವುಟಗಳು ಕಂಗೊಳಿಸುತ್ತಿದ್ದು, ಕನ್ನಡಿಗರು ಭುವನೇಶ್ವರಿ, ರಾಜ್‌ಕುಮಾರ್ ಹಾಗೂ ಕುವೆಂಪು ಸೇರಿದಂತೆ ರಾಜ್ಯಕ್ಕಾಗಿ ದುಡಿದ ಹಲವು ನಟ ಮತ್ತು ಸಾಹಿತಿಗಳ ಫೋಟೊಗಳನ್ನು ಇಟ್ಟು ನಮಿಸಿ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

  ಇನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವ ವಿಶೇಷ ಹಾಗೂ ಭರ್ಜರಿಯಾಗಿ ಆಚರಿಸಲೂ ಸಹ ತೀರ್ಮಾನಿಸಲಾಗಿದೆ. ಕಳೆದ ವರ್ಷ ನಟ ಪುನೀತ್ ರಾಜ್‌ಕುಮಾರ್ ನಿಧನನ ಹೊಂದಿದ ಮೂರೇ ದಿನಗಳಿಗೆ ರಾಜ್ಯೋತ್ಸನ ಇದ್ದ ಕಾರಣ ವಿಜೃಂಭಣೆಯ ರಾಜ್ಯೋತ್ಸವ ಆಚರಣೆ ನಡೆದಿರಲಿಲ್ಲ. ಇತ್ತ ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಇದೇ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು ರಾಜ್ಯೋತ್ಸವದ ಆಚರಣೆ ಜೋರಾಗಿದೆ.

  ರಾಜ್ಯೋತ್ಸವದ ದಿನ ಸಂಜೆ ನಾಲ್ಕು ಗಂಟೆಗೆ ಪುನೀತ್ ರಾಜ್‌ಕುಮಾರ್ ಅವರಿಗೆ ವಿಧಾನಸೌಧದ ಮುಂಭಾಗ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರದಾನ ಮಾಡಲಿದ್ದಾರೆ. ಪುನೀತ್ ಪರವಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಹೀಗೆ ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆಯಲಿರುವ ಪುನೀತ್ ರಾಜ್‌ಕುಮಾರ್ ಈ ಹಿಂದೆಯೂ ಹಲವಾರು ಸರ್ಕಾರಿ ಹಾಗೂ ಖಾಸಗಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗಿದ್ದರೆ ಅಪ್ಪು ಗೆದ್ದಿರುವ ಎಲ್ಲಾ ಪ್ರಶಸ್ತಿಗಳು ಯಾವುವು ಎಂಬ ಪಟ್ಟಿ ಈ ಕೆಳಕಂಡಂತಿದೆ.

  ಪುನೀತ್‌ಗೆ ಸಂದ ಸರ್ಕಾರಿ ಗೌರವಗಳು

  ಪುನೀತ್‌ಗೆ ಸಂದ ಸರ್ಕಾರಿ ಗೌರವಗಳು

  1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರದ ನಟನೆಗಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಬಾಲನಟ ಕೆಟಗರಿ ಅಡಿಯಲ್ಲಿ ರಾಷ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹೀಗೆ ತನ್ನ ಹತ್ತನೇ ವಯಸ್ಸಿನಲ್ಲೇ ಪುನೀತ್ ರಾಜ್‌ಕುಮಾರ್ ದೇಶದ ಬೃಹತ್ ಪ್ರಶಸ್ತಿಯನ್ನು ಪಡೆದು ಸಾಧನೆ ಮಾಡಿದ್ದರು. ಈಗ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನಕ್ಕೆ ಪುನೀತ್ ರಾಜ್‌ಕುಮಾರ್ ಭಾಜನರಾಗಿದ್ದಾರೆ. ಹೀಗೆ ದೇಶ ಮತ್ತು ರಾಜ್ಯದ ಎರಡು ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದಿರುವ ಪುನೀತ್ ರಾಜ್‌ಕುಮಾರ್ ಮೈಸೂರು ವಿಶ್ವವಿದ್ಯಾನಿಯಲದಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.

  ಅತಿಹೆಚ್ಚು ಸೈಮಾ ಪ್ರಶಸ್ತಿ ಗೆದ್ದ ಕನ್ನಡದ ನಟ

  ಅತಿಹೆಚ್ಚು ಸೈಮಾ ಪ್ರಶಸ್ತಿ ಗೆದ್ದ ಕನ್ನಡದ ನಟ

  ಇನ್ನು ದಕ್ಷಿಣ ಭಾರತ ಚಿತ್ರಗಳಿಗೆ ನೀಡಲಾಗುವ ಪ್ರಮುಖ ಪ್ರಶಸ್ತಿಯಾದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ ಅನ್ನು ಅತಿಹೆಚ್ಚು ಬಾರಿ ಗೆದ್ದ ನಟ ಎಂಬ ದಾಖಲೆಯನ್ನು ಪುನೀತ್ ರಾಜ್‌ಕುಮಾರ್ ಹೊಂದಿದ್ದಾರೆ. ಈ ಬಾರಿ ಯುವರತ್ನ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಸೈಮಾ ಅವಾರ್ಡ್ ಪಡೆದ ಪುನೀತ್ ರಾಜ್‌ಕುಮಾರ್ ಒಟ್ಟು ಐದು ಬಾರಿ ಸೈಮಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

  ಫಿಲ್ಮ್‌ಫೇರ್‌ನಲ್ಲೂ ಇದೆ ದಾಖಲೆ

  ಫಿಲ್ಮ್‌ಫೇರ್‌ನಲ್ಲೂ ಇದೆ ದಾಖಲೆ

  ಫಿಲ್ಮ್ ಫೇರ್ ಪ್ರಶಸ್ತಿಯಲ್ಲೂ ಸಹ ಪುನೀತ್ ರಾಜ್‌ಕುಮಾರ್ ವಿಶಿಷ್ಟ ದಾಖಲೆ ಹೊಂದಿದ್ದಾರೆ. ಅತಿಹೆಚ್ಚು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಈಗಿನ ತಲೆಮಾರಿನ ನಟ ಎಂಬ ಸಾಧನೆಯನ್ನು ಪುನೀತ್ ರಾಜ್‌ಕುಮಾರ್ ಹೊಂದಿದ್ದಾರೆ. ಇನ್ನು ಈ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಕನ್ನಡದ ಪರ ಅತಿಹೆಚ್ಚು ಬಾರಿ ವರನಟ ರಾಜ್‌ಕುಮಾರ್ ( 8 ಬಾರಿ ) ಗೆದ್ದಿದ್ದಾರೆ. ಇನ್ನು ಆರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದಿರುವ ಅನಂತ್ ನಾಗ್ ಹಾಗೂ ಪುನೀತ್ ರಾಜ್‌ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

  ಕರ್ನಾಟಕ ರಾಜ್ಯ ಪ್ರಶಸ್ತಿ

  ಕರ್ನಾಟಕ ರಾಜ್ಯ ಪ್ರಶಸ್ತಿ

  ಪುನೀರ್ ರಾಜ್‌ಕುಮಾರ್ ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮಿಲನ ಹಾಗೂ ಜಾಕಿ ಈ ನಾಲ್ಕು ಚಿತ್ರಗಳ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹೀಗೆ ಪುನೀತ್ ರಾಜ್‌ಕುಮಾರ್ ಈಗಿನ ಸ್ಟಾರ್ ನಟರ ಪೈಕಿ ಅತಿಹೆಚ್ಚು ಪ್ರಶಸ್ತಿ ಹಾಗೂ ದೇಶದ ಮತ್ತು ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ಪಡೆದ ನಟ ಎನಿಸಿಕೊಂಡಿರುವುದು ಅಭಿಮಾನಿಗಳ ಪಾಲಿಗೆ ಹೆಮ್ಮೆಯೇ ಸರಿ.

  English summary
  National award to Karnataka Ratna: List of awards bagged by Puneeth Rajkumar. Take a look,
  Tuesday, November 1, 2022, 10:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X