»   » ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಿಥಿ' ಸಿನಿಮಾ ಈ ವಾರ ತೆರೆಗೆ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಿಥಿ' ಸಿನಿಮಾ ಈ ವಾರ ತೆರೆಗೆ

Posted By:
Subscribe to Filmibeat Kannada

ನಿನ್ನೆಯಷ್ಟೇ (ಮೇ 3) ನವದೆಹಲಿಯ ವಿಜ್ಞಾನ ಭವನದಲ್ಲಿ 2015ನೇ ಸಾಲಿನ ಪ್ರತಿಷ್ಟಿತ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

'ತಿಥಿ' ಸಿನಿಮಾಗೆ ಪ್ರಾದೇಶಿಕ ವಿಭಾಗದಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. 'ತಿಥಿ' ಚಿತ್ರದ ನಿರ್ದೇಶಕ ರಾಮ್ ರೆಡ್ಡಿ ರವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಸ್ತಿ ಪ್ರದಾನ ಮಾಡಿದರು. [63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳು]


national-award-winning-movie-thithi-release-on-may-6th

ಪ್ರಶಸ್ತಿ ಸ್ವೀಕರಿಸಿದ ಖುಷಿಯಲ್ಲಿರುವ 'ತಿಥಿ' ಚಿತ್ರತಂಡ ಈ ವಾರ ನಿಮ್ಮ ಮುಂದೆ ಬರುತ್ತಿದೆ. ಅರ್ಥಾತ್ 'ತಿಥಿ' ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.


ಈರೇಗೌಡ ರಚಿಸಿರುವ ಕಥೆಗೆ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚನ್ನೇಗೌಡ, ತಮ್ಮೇಗೌಡ, ಅಭಿಷೇಕ್ ಸೇರಿದಂತೆ ಹೊಸಬರ ದಂಡೇ ತುಂಬಿ ತುಳುಕುವ 'ತಿಥಿ' ಚಿತ್ರಕ್ಕೆ ಬಂಡವಾಳ ಹಾಕಿರುವವರು ಪ್ರತಾಪ್ ರೆಡ್ಡಿ.


ಈಗಾಗಲೇ ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆದ ಲೋಕಾರ್ನೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ತಿಥಿ' ಚಿತ್ರಕ್ಕೆ 2 ಪ್ರಶಸ್ತಿ ಸಿಕ್ಕಿದೆ. ಜೊತೆಗೆ ರಾಷ್ಟ್ರ ಪ್ರಶಸ್ತಿಯ ಹೆಮ್ಮೆ. [ಸೆಂಚುರಿ ಗೌಡರ 'ತಿಥಿ'ಯಲ್ಲಿ ಪವರ್ ಸ್ಟಾರ್ ಪುನೀತ್]


ಇವೆಲ್ಲದರ ಜೊತೆ 'ತಿಥಿ' ಚಿತ್ರವನ್ನ ವೀಕ್ಷಿಸಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ, ಇನ್ಯಾಕೆ ತಡ, ಸಮಾಜಕ್ಕೆ ಉತ್ತಮ ಸಂದೇಶ ಇರುವ 'ತಿಥಿ' ಚಿತ್ರವನ್ನ ಇದೇ ಶುಕ್ರವಾರ (ಮೇ 6) ನೋಡಲು ಈಗಲೇ ಟಿಕೆಟ್ ಕಾಯ್ದಿರಿಸಿ....


'ತಿಥಿ' ಚಿತ್ರದಲ್ಲಿ ಸಿಂಗ್ರಿ ಗೌಡ

'ತಿಥಿ' ಚಿತ್ರದಲ್ಲಿ ಸಿಂಗ್ರಿ ಗೌಡ

'ತಿಥಿ' ಚಿತ್ರದಲ್ಲಿ ಅಭಿಶೇಕ್ ಹಾಗೂ ಪೂಜಾ

'ತಿಥಿ' ಚಿತ್ರದಲ್ಲಿ ಅಭಿಶೇಕ್ ಹಾಗೂ ಪೂಜಾ

'ತಿಥಿ' ಚಿತ್ರದಲ್ಲಿ ಪೂಜಾ

'ತಿಥಿ' ಚಿತ್ರದಲ್ಲಿ ಪೂಜಾ

'ತಿಥಿ' ಚಿತ್ರದ ಒಂದು ದೃಶ್ಯ

'ತಿಥಿ' ಚಿತ್ರದ ಒಂದು ದೃಶ್ಯ

'ತಿಥಿ' ಚಿತ್ರದಲ್ಲಿ ಚನ್ನೇಗೌಡ

'ತಿಥಿ' ಚಿತ್ರದಲ್ಲಿ ಚನ್ನೇಗೌಡ

'ತಿಥಿ' ಚಿತ್ರಕ್ಕೆ ಶುಭ ಕೋರಿದ ಪವರ್ ಸ್ಟಾರ್

'ತಿಥಿ' ಚಿತ್ರಕ್ಕೆ ಶುಭ ಕೋರಿದ ಪವರ್ ಸ್ಟಾರ್

ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ರಾಮ್ ರೆಡ್ಡಿ

ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕ ರಾಮ್ ರೆಡ್ಡಿ

English summary
63rd National Film Award winning Kannada Movie 'Thithi' is all set to release this friday (May 6th). The movie is directed by Ram reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada