»   » 64ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

64ನೇ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

Posted By:
Subscribe to Filmibeat Kannada

2016ನೇ ಸಾಲಿನ ಪ್ರತಿಷ್ಠಿತ 64 ನೇ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು(ಮೇ 3) ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ 'ರುಸ್ತುಂ' ಚಿತ್ರದ ಅಭಿನಯಕ್ಕಾಗಿ ಮತ್ತು 'ನೀರ್ಜಾ' ಚಿತ್ರದಲ್ಲಿಯ ಅಭಿನಯಕ್ಕಾಗಿ ನಟಿ ಸೋನಮ್ ಕಪೂರ್ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಉತ್ತರ ಪ್ರದೇಶಕ್ಕೆ 'ಅತ್ಯುತ್ತಮ ಸಿನಿಮಾ ಸ್ನೇಹಿ ರಾಜ್ಯ' ಪ್ರಶಸ್ತಿಯನ್ನು ಪ್ರಣಬ್ ಮುಖರ್ಜಿ ರವರು ಪ್ರದಾನ ಮಾಡಿದರು.

ಚಿತ್ರ ಕೃಪೆ; ಡಿಡಿ ನ್ಯಾಷನಲ್

ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಅಕ್ಷಯ್ ಕುಮಾರ್

ಟಿನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದ 'ರುಸ್ತುಂ' ಚಿತ್ರದಲ್ಲಿ ಭಾರತೀಯ ನೌಕಾಪಡೆಯ ನಿಷ್ಠಾವಂತ ಕಮಾಂಡರ್ ಪಾತ್ರದ ಅಭಿನಯಕ್ಕೆ ಅಕ್ಷಯ್ ಕುಮಾರ್ ಗೆ 64 ನೇ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ಸಂದರ್ಭದಲ್ಲಿ ಅಕ್ಷಯ್ ಕುಮಾರ್ "ನನ್ನ ಜೀವನದ ಅತಿ ಅಮೂಲ್ಯ ಕ್ಷಣವಿದು. ಈ ಸಂದರ್ಭದಲ್ಲಿ ಜಗತ್ತಿನಲ್ಲಿ ನನಗೆ ಬಹಳ ಮುಖ್ಯವಾದ ನನ್ನ ಕುಟುಂಬದವರು ನನ್ನೊಂದಿಗೆ ಇದ್ದಾರೆ. ಪ್ರಥಮಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಈ ಸಂತೋಷವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಸೋನಮ್ ಕಪೂರ್ ಗೆ ವಿಶೇಷ ಮನ್ನಣೆ ಪ್ರಶಸ್ತಿ

ಬಾಲಿವುಡ್ ನಟಿ ಸೋನಮ್ ಕಪೂರ್ ರವರಿಗೆ 'ನೀರ್ಜಾ' ಚಿತ್ರದ ಅಭಿನಯಕ್ಕಾಗಿ ವಿಶೇಷ ಮನ್ನಣೆ ಪ್ರಶಸ್ತಿಯನ್ನು ಪ್ರಣಬ್ ಮುಖರ್ಜಿ ಪ್ರದಾನ ಮಾಡಿದರು.

ಕೆ.ವಿ.ವಿಶ್ವನಾಥ್ ಗೆ 'ದಾದಾಸಾಹೇಬ್ ಫಾಲ್ಕೆ'

2016 ಸಾಲಿನ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮರಂಭದಲ್ಲಿ ಟಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ಕಲಾವಿದರಾದ ಶ್ರೀ ಕಾಶೀನಾಥುನಿ ವಿಶ್ವನಾಥ್ ಅವರಿಗೆ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರದಾನ ಮಾಡಿದರು.

ರಾಜು ಸುಂದರಂಗೆ ಅತ್ಯುತ್ತಮ ನೃತ್ಯ ಸಂಯೋಜನೆ ಪ್ರಶಸ್ತಿ

ಡ್ಯಾನ್ಸ್ ಮಾಸ್ಟರ್ ರಾಜು ಸಂದರಂ ರವರು ತೆಲುಗಿನ 'ಜನತಾ ಗ್ಯಾರೇಜ್' ಚಿತ್ರದ ಕೋರಿಯೋಗ್ರಫಿಗಾಗಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದರು.

ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ತರುಣ್

ಟಾಲಿವುಡ್ ನಿರ್ದೇಶಕ ತರುಣ್ ಭಾಸ್ಕರ್ ಧಾಸ್ಸಿಂ 'ಪೆಳ್ಳಿ ಛೂಪುಲು' ಚಿತ್ರದ ಸಂಭಾಷಣೆಗಾಗಿ 64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದರು.

'ದಂಗಲ್' ನಟಿಗೆ ಪ್ರಶಸ್ತಿ

'ದಂಗಲ್' ಚಿತ್ರದ ಅಭಿನಯಕ್ಕಾಗಿ ಜೈರಾ ವಾಸಿಂ 'ಅತ್ಯುತ್ತಮ ಪೋಷಕ ನಟಿ' ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ಭವನದಲ್ಲಿ ಸ್ವೀಕರಿಸಿದರು.

English summary
The 2016 National Film Awards ceremony was held on 3 May, 2017 and President Pranab Mukherjee awarded and honoured the winners. This was the 64th edition of this award ceremony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada