»   » 'ಪದ್ಮಾವತಿ' ವಿರುದ್ದ ಸಿಡಿದೆದ್ದ ಬೆಂಗಳೂರಿನ ಜನ

'ಪದ್ಮಾವತಿ' ವಿರುದ್ದ ಸಿಡಿದೆದ್ದ ಬೆಂಗಳೂರಿನ ಜನ

Posted By:
Subscribe to Filmibeat Kannada

ಡಿಸೆಂಬರ್ 1 ರಂದು ತೆರೆಗೆ ಬರಲು ಸಿದ್ದವಾಗಿರುವ 'ಪದ್ಮಾವತಿ' ಸಿನಿಮಾದ ವಿರುದ್ದ ಬೆಂಗಳೂರಿನ ಜನತೆ ಗರಂ ಆಗಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿರುವ ರಜಪೂತರು ಸಿನಿಮಾ ಬಿಡುಗಡೆ ಮಾಡದಂತೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ಇಂದು (ನವೆಂಬರ್ 13) ಸುದ್ದಿಗೋಷ್ಠಿ ನಡೆಸಿರುವ ಶ್ರೀ ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಸಂಘಟನಾಕಾರರು, ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡದಂತೆ ಸ್ವಾಭಿಮಾನ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.

 National rajapooth karani sena to be protest against padmavathi

ಭಾರತೀಯ ಇತಿಹಾಸವನ್ನ ತಿರುಚಿ 'ಪದ್ಮಾವತಿ' ಸಿನಿಮಾ ಮಾಡಲಾಗಿದೆ. ಹಿಂದೂ ಸಂಸ್ಕೃತಿಯ ಉಡುಗೆ ತೊಡುಗೆಯನ್ನ ಮತ್ತು ಅಂಗಪ್ರದರ್ಶನವನ್ನ ತಿರುಚಿ ತೋರಿಸಲಾಗಿದೆ. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರ ಮತ್ತು ಅತ್ಯಾಚಾರಿ. ಈತನನ್ನ ಮುಖ್ಯ ನಾಯಕನನ್ನಾಗಿ ತೋರಿಸಿದ್ದಾರೆ ಎಂದು ರಾಷ್ಟ್ರೀಯ ರಜಪೂತ್ ಕರಣಿ ಸೇನಾ ಸಂಘಟನಾಕಾರರು ಕಿಡಿ ಕಾರಿದ್ದಾರೆ.

ಈ ಹಿನ್ನಲೆಯಲ್ಲಿ ದಿನಾಂಕ 15.11.2017 ರಂದು ಬೆಳಗ್ಗೆ 10 ಗಂಟೆಗೆ ಪ್ರೆಸ್ ಕ್ಲಬ್ ನಿಂದ ಸ್ವಾಭಿಮಾನ ಮೆರವಣೆಗೆ ಮಾಡಲು ಮುಂದಾಗಿದೆ. ಸದ್ಯ, ದೇಶದಲ್ಲೆಡೆ 'ಪದ್ಮಾವತಿ' ವಿರುದ್ದ ಪ್ರತಿಭಟನೆ ಹೆಚ್ಚಾಗಿರುವ ಕಾರಣ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ರಜಪೂತ್ ಕರಣಿ ಸಂಘಟನಾಕಾರರಿಗೆ ಸಿನಿಮಾ ತೋರಿಸಲು ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡ್ತಿವೆ.

English summary
National rajapooth karani sena going to be protest against padmavathi movie in banglore,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada