For Quick Alerts
  ALLOW NOTIFICATIONS  
  For Daily Alerts

  ಗುರುವಾರದ ಚುರುಮುರಿ: ಸಿನಿ ದುನಿಯಾದ ಟಾಪ್ ಸುದ್ದಿಗಳು

  |

  ಸ್ಯಾಂಡಲ್‌ವುಡ್‌ ಪಾಲಿಗೆ ಇವತ್ತು ಹೊಂಬಾಳೆ 11ನೇ ಸಿನಿಮಾ ಪ್ರಕಟಣೆ ಹಾಗೂ ಸಲಗ ಪ್ರಮೋಷನಲ್ ಹಾಡಿನದ್ದೇ ಸದ್ದು. ಜೊತೆಗೆ ನಟಿ ಆಶಿಕಾ ರಂಗನಾಥ್ ಹುಟ್ಟುಹಬ್ಬ. ಈ ವಿಶೇಷವಾಗಿ ಮದಗಜ ಹೊಸ ಪೋಸ್ಟರ್, ಅವತಾರ ಪುರುಷ ಪೋಸ್ಟರ್ ಬಿಡುಗಡೆ.

  ಈ ಪ್ರಮುಖ ಸುದ್ದಿಗಳ ನಡುವೆ ಕೆಲವು ಚುರುಮುರಿ ಸುದ್ದಿಗಳು ಇವೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ಗುರುವಾರ ಸದ್ದು ಮಾಡಿದ ಕೆಲವು ಸಿನಿ ಸುದ್ದಿಗಳೆಲ್ಲವೂ ಒಂದೇ ಕಡೆ ಸಿಗುವ ವಿಶೇಷ ಲೇಖನ ಇದು.

  ಹೊಂಬಾಳೆ ಹೊಸ ಸಿನಿಮಾ: ಮತ್ತೆ ಸ್ಟಾರ್ ನಟನ ಕಡೆ ಅಭಿಮಾನಿಗಳ ಕಣ್ಣುಹೊಂಬಾಳೆ ಹೊಸ ಸಿನಿಮಾ: ಮತ್ತೆ ಸ್ಟಾರ್ ನಟನ ಕಡೆ ಅಭಿಮಾನಿಗಳ ಕಣ್ಣು

  'ನವರಸನ್' ಪ್ರೀಮಿಯರ್

  ಮಣಿರತ್ನಂ ಮತ್ತು ಜಯೇಂದ್ರ ಪಂಚಪಕೇಶನ್ ಜಂಟಿಯಾಗಿ ನಿರ್ಮಾಣ ಮಾಡಿರುವ 'ನವರಸ' ಸಿನಿಮಾ ಆಗಸ್ಟ್ 6 ರಂದು ಮಧ್ಯಾಹ್ನ 12.30ಕ್ಕೆ ನೆಟ್‌ಪ್ಲಿಕ್ಸ್‌ನಲ್ಲಿ ಪ್ರೀಮಿಯರ್ ಕಾಣ್ತಿದೆ. ಪ್ರೀಮೀಯರ್‌ಗೂ ಮುಂಚೆ ಚಿತ್ರದ ಒಂಬತ್ತು ಎಕ್ಸ್‌ಕ್ಲೂಸಿವ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಮೊದಲೇ ತಿಳಿದಿರುವಂತೆಸ 'ನವರಸ' ಸಿನಿಮಾ ಒಂಬತ್ತು ಭಾವನೆಗಳ ವಿಭಿನ್ನ ಕಥೆ.

  'ನವರಸ' ಚಿತ್ರದ ಒಂದೊಂದು ಭಾಗವನ್ನು ಒಬ್ಬೊಬ್ಬ ನಿರ್ದೇಶಕ ನಿರ್ದೇಶಿಸಿದ್ದಾರೆ. ರವೀಂದ್ರನ್ ಪ್ರಸಾದ್, ಅರವಿಂದ ಸ್ವಾಮಿ, ಬಿಜೊಯ್ ನಂಬಿಯಾರ್, ಗೌತಮ್ ವಾಸುದೇವ್ ಮೆನನ್, ಸರ್ಜುನ್ ಕೆಎಂ, ಪ್ರಿಯದರ್ಶನ್, ಕಾರ್ತಿಕ್ ನರೇನ್, ಕಾರ್ತಿಕ್ ಸುಬ್ಬರಾಜ್ ಮತ್ತು ವಸಂತ್ ಆಕ್ಷನ್ ಕಟ್ ಹೇಳಿದ್ದಾರೆ.

  ಲಯಕೋಕಿಲ ನಿರ್ದೇಶನದ 'ತಾಯ್ತ'

  ಸಾಧುಕೋಕಿಲಾ ಸಹೋದರ ಲಯ ಕೋಕಿಲಾ ಈಗ ನಿರ್ದೇಶಕರಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ನಟ-ಸಂಗೀತ ನಿರ್ದೇಶಕರಾಗಿದ್ದ ಲಯ ಕೋಕಿಲಾ ಚೊಚ್ಚಲ ಬಾರಿಗೆ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಈ ಚಿತ್ರ ಶುರುವಾಗಿದ್ದು, ರಾಮನಗರ ಸುತ್ತಮುತ್ತ ಮೊದಲ ಸಿನಿಮಾ ಶೂಟಿಂಗ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಚಿತ್ರಕ್ಕೆ 'ತಾಯ್ತ' ಎಂದು ಹೆಸರಿಟ್ಟಿದ್ದು, ಡಾ ಶಾಹೀದ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಕಥೆಯೂ ಇವರೇ ಬರೆದಿರುವುದು ವಿಶೇಷ.

  Navarasa To Premiere On Netflix And Dhanush 44th Movie Launch

  ಧನುಶ್ 44ನೇ ಸಿನಿಮಾ ಆರಂಭ

  ತಮಿಳು ನಟ ಧನುಶ್ ಅಭಿನಯಿಸಲಿರುವ 44ನೇ ಸಿನಿಮಾ ಆಗಸ್ಟ್ 4 ರಂದು ಅಧಿಕೃತವಾಗಿ ಸೆಟ್ಟೇರಿದೆ. ಇನ್ನು ಹೆಸರಿಡದ ಈ ಚಿತ್ರದ ಮುಹೂರ್ತ ಸಮಾರಂಭ ಚೆನ್ನೈನಲ್ಲಿ ನೆರವೇರಿದ್ದು, ನಟ ಧನುಶ್, ನಟಿ ನಿತ್ಯಾ ಮೆನನ್, ಪ್ರಕಾಶ್ ರಾಜ್, ಭಾರತಿರಾಜ ಭಾಗವಹಿಸಿದ್ದರು. ಮಿಥುನ್ ಆರ್ ಜವಾಹರ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಎಂದು ಹೇಳಲಾಗಿದೆ. ರಾಶಿ ಖನ್ನಾ, ಪ್ರಿಯಾ ಭವಾನಿ ಶಂಕರ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ.

  ಸಖತ್ ಸೌಂಡ್ ಮಾಡ್ತಿದೆ 'ಸಲಗ' ಪ್ರಮೋಷನಲ್ ಹಾಡುಸಖತ್ ಸೌಂಡ್ ಮಾಡ್ತಿದೆ 'ಸಲಗ' ಪ್ರಮೋಷನಲ್ ಹಾಡು

  'ಕರ್ಣನ್' ಸಿನಿಮಾದ ಯಶಸ್ಸಿನ ಬಳಿಕ 'ಜಗಮೇ ತಂಥೀರಮ್' ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರ ಅಷ್ಟಾಗಿ ಸಕ್ಸಸ್ ಕಂಡಿಲ್ಲ. ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಜೊತೆ ನಟಿಸಿರುವ 'ಅಟ್ರಂಗಿ ರೇ' ತೆರೆಗೆ ಬರಬೇಕಿದೆ. ಹಾಲಿವುಡ್‌ ಸಿನಿಮಾ ಚಿತ್ರೀಕರಣ ಮುಗಿಸಿ ಬಂದಿದ್ದಾರೆ. ಕಾರ್ತಿಕ್ ನರೇನ್ ಜೊತೆ 'ಮಾರನ್' ಎನ್ನುವ ಚಿತ್ರ ಮಾಡ್ತಿದ್ದು, ಈ ನಡುವೆ 'ಡಿ-44' ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.

  ಪುಷ್ಪ ಹಾಡಿನ ಬಗ್ಗೆ ವಿಜಯ್ ಪ್ರಕಾಶ್ ಮಾತು

  ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಸಿನಿಮಾದ ಮೊದಲ ಹಾಡು ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ. ಈ ಹಾಡು ತುಂಬಾ ಅದ್ಭುತವಾಗಿ ಬಂದಿದೆ ಎಂದು ಗಾಯಕ ವಿಜಯ್ ಪ್ರಕಾಶ್ ಹೇಳಿದ್ದಾರೆ. ವಿಜಯ್ ಪ್ರಕಾಶ್ ಅವರ ಮಾತಿಗೆ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಪ್ರತಿಕ್ರಿಯಿಸಿದ್ದು, ''ಎಲ್ಲರಿಗೂ ನನ್ನ ನಮಸ್ಕಾರ'' ಎಂದು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

  'ಮಾಸ್ಟರ್‌ಶೆಫ್' ತೆಲುಗು ಪ್ರೋಮೋ

  ತೆಲುಗಿನಲ್ಲಿ ಮಾಸ್ಟರ್‌ಶೇಫ್ ಹೊಸ ಕಾರ್ಯಕ್ರಮ ಬರ್ತಿದ್ದು, ನಟಿ ತಮನ್ನಾ ಭಾಟಿಯಾ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಶೋನ ಪ್ರೋಮೋ ಇಂದು ಬಿಡುಗಡೆಯಾಗಿದ್ದು, ತೆಲುಗಿನ ಖಾದ್ಯಗಳ ಬಗ್ಗೆ ತಮನ್ನಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಸ್ಟರ್‌ಶೇಫ್ ನಿರೂಪಣೆ ಮಾಡುತ್ತಿದ್ದಾರೆ. ಕನ್ನಡದಲ್ಲಿಯೂ ಈ ಕಾರ್ಯಕ್ರಮ ಬರಲಿದ್ದು, ಕಿಚ್ಚ ಸುದೀಪ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

  ದೀಪಾವಳಿ ಹಬ್ಬಕ್ಕೆ 'ಗನಿ' ಎಂಟ್ರಿ

  ವರುಣ್ ತೇಜ ನಟಿಸಿರುವ ಗನಿ ಸಿನಿಮಾ ದೀಪಾವಳಿ ಪ್ರಯುಕ್ತ ಬಿಡುಗಡೆಯಾಗುವುದಾಗಿ ಮಾಹಿತಿ ಸಿಕ್ಕಿದೆ. ಸ್ವತಃ ವರುಣ್ ತೇಜ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಕೊರೊನಾ ವೈರಸ್ ಕಾರಣದಿಂದ ಈ ಚಿತ್ರದ ರಿಲೀಸ್ ಪದೇ ಪದೇ ವಿಳಂಬವಾಗುತ್ತಿತ್ತು.

  English summary
  Thursday update: Mani ratnam Presents Navarasa to premiere on netflix on august 6th, Dhanush 44th movie start, masterchef telugu promo released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X