ಸಿಎಂ ಸಿದ್ದರಾಮಯ್ಯ ಪರ ಸುದೀಪ್ ಪ್ರಚಾರಕ್ಕೆ ವಿಘ್ನ

By Pavithra

Recommended Video

ಅಭಿನಯ ಚಕ್ರವರ್ತಿಗೆ ಎದುರಾಗಲಿದ್ದಾರೆ ಯಶ್ | Filmibeat Kannada

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದುಕೊಂಡಿದೆ. ಮತಯಾಚನೆ ಮಾಡಲು ಅಭ್ಯರ್ಥಿಗಳು ಬೇರೆ ಬೇರೆ ರೀತಿಯಲ್ಲಿ ಕಸರತ್ತು ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಜನರನ್ನು ಒಟ್ಟು ಮಾಡಲು ರಾಜಕೀಯ ವ್ಯಕ್ತಿಗಳು ಸಿನಿಮಾ ಸ್ಟಾರ್ ಗಳನ್ನ ಸ್ಟಾರ್ ಪ್ರಚಾರಕರನ್ನಾಗಿ ಬಳಸಿಕೊಳ್ಳುವುದು ಹೊಸ ವಿಚಾರವೇನಲ್ಲ.

ಅದೇ ರೀತಿಯಲ್ಲಿ ಈಗಾಗಲೇ ರಾಕಿಂಗ್ ಸ್ಟಾರ್ ಯಶ್ ರೋಡ್ ಶೋ ಮೂಲಕ ತಮಗೆ ಇಷ್ಟವಾಗವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಇದೇ ವಾರದಲ್ಲಿ ಕಿಚ್ಚ ಸುದೀಪ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ಬಾದಾಮಿ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಮತಯಾಚನೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Nayaka Community has requested Sudeep not to campaign for Chief Minister Siddaramaiah

ಆದರೆ ಬಾದಾಮಿಯಲ್ಲಿರುವ ನಾಯಕ ಸಮುದಾಯದವರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಸಿ ಎಂ ವಿರುದ್ದವಾಗಿ ಬಿಜೆಪಿ ಪಕ್ಷದಿಂದ ಶ್ರೀ ರಾಮುಲು ಕಣಕ್ಕಿಳಿದ್ದಿದ್ದಾರೆ. ಶ್ರೀರಾಮುಲು ನಾಯಕ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಬಾದಾಮಿಯಲ್ಲಿ ಶ್ರೀರಾಮುಲು ಗೆಲ್ಲಬೇಕು ನೀವು ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಬೇಡಿ ಎಂದಿದ್ದಾರೆ.

ಬಾದಾಮಿಯಲ್ಲಿ ನಾಯಕ ಸಮುದಾಯಕ್ಕೆ ಸೇರಿರುವ ಜನರು ಹೆಚ್ಚಾಗಿರುವುದರಿಂದ ಸುದೀಪ್ ಅವರನ್ನ ಸ್ಟಾರ್ ಪ್ರಚಾರಕರಾಗಿ ಅಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷ ಯೋಜನೆ ಹಾಕಿಕೊಂಡಿತ್ತು. ಆದರೆ ಅಲ್ಲಿನ ಜನರು ಇದಕ್ಕೆ ವಿರೋಧ ವ್ಯಕ್ತ ಪಡಿಸುತ್ತಿರುವುದರಿಂದ ಸುದೀಪ್ ಈಗ ಯಾವ ನಿರ್ಧಾರಕ್ಕೆ ಬರುತ್ತಾರೆ ಎನ್ನುವುದು ತೀರ ಕುತೂಹಲವನ್ನು ಉಂಟು ಮಾಡಿದೆ.

More from Filmibeat

English summary
The Nayaka Community has requested Sudeep not to campaign for Chief Minister Siddaramaiah in Karnataka Assembly elections 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X