»   » ಸ್ಯಾಂಡಲ್ ವುಡ್ ಚಿತ್ರರಂಗದ ಮತ್ತೊಬ್ಬ ನಟಿಗೆ ನಿಶ್ಚಿತಾರ್ಥದ ಸಂಭ್ರಮ

ಸ್ಯಾಂಡಲ್ ವುಡ್ ಚಿತ್ರರಂಗದ ಮತ್ತೊಬ್ಬ ನಟಿಗೆ ನಿಶ್ಚಿತಾರ್ಥದ ಸಂಭ್ರಮ

Posted By:
Subscribe to Filmibeat Kannada
ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ಖ್ಯಾತಿಯ ನಟಿ ನಯನ ಪುಟ್ಟಸ್ವಾಮಿ ಮದುವೆ ಫಿಕ್ಸ್

ಸ್ಯಾಂಡಲ್ ವುಡ್ ನಲ್ಲಿ ಈಗ ಮದುವೆ ಸುಗ್ಗಿ ಜೋರಾಗಿದೆ. ವಾರಕ್ಕೆ ಕನ್ನಡ ಚಿತ್ರರಂಗದ ಒಬ್ಬರ ಮದುವೆ ಸುದ್ದಿ ಆದರೂ ಕೇಳಿ ಬರುತ್ತಿದೆ. ನಿರ್ದೇಶಕ ಪವನ್ ಓಡೆಯರ್ ನಿಶ್ಚಿತಾರ್ಥದ ಹಿಂದೆಯೇ ಈಗ ನಟಿ ನಯನ ಪುಟ್ಟಸ್ವಾಮಿ ಎಂಗೇಜ್ ಮೆಂಟ್ ಕೂಡ ಆಗಿದೆ.

ಎಂಗೇಜ್ ಆದ ಪವನ್: ಬಾಗಲಕೋಟೆ ಹುಡುಗಿಯನ್ನ ಮದುವೆ ಆಗುವ ಹಿಂದಿದೆ ಸೀಕ್ರೆಟ್.!

ಸುವರ್ಣ ವಾಹಿನಿಯ 'ಪ್ಯಾಟೆ ಹುಡುಗೀರ ಹಳ್ಳಿ ಲೈಫು' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಯನ ಮುಂದೆ ಸಿನಿಮಾರಂಗಕ್ಕೆ ಕೂಡ ಎಂಟ್ರಿ ಕೊಟ್ಟಿದರು. ವಿನಯ್ ರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ 'ಸಿದ್ಧಾರ್ಥ' ಸೇರಿದಂತೆ ಕೆಲವು ಸಿನಿಮಾಗಳಲ್ಲಿನ ಮುಖ್ಯ ಪಾತ್ರಗಳಲ್ಲಿ ನಯನ ನಟಿಸಿದರು.

Nayana Puttaswamy got engaged with Charan Thej.

ಅಂದಹಾಗೆ, ಚರಣ್ ತೇಜ್ ಎಂಬ ಯುವಕನ ಜೊತೆ ಸದ್ಯ ನಯನ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಚರಣ್ ತೇಜ್ ಮೂಲತಃ ಹೈದರಾಬಾದ್ ನವರು ಎನ್ನುವುದನ್ನು ಬಿಟ್ಟರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಇನ್ನು ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ನಯನ ತಮ್ಮ ಸಂತಸವನ್ನು ಅವರ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

English summary
kannada actress Nayana Puttaswamy got engaged with Charan Thej.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada