»   » ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ ಈಕೆಯೇ.!

ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ ಈಕೆಯೇ.!

Posted By:
Subscribe to Filmibeat Kannada

ಹಳೆ ಪ್ರೇಮ ಕಹಾನಿಗೆ ಫುಲ್ ಸ್ಟಾಪ್ ಇಟ್ಟು, ಮರಳಿ ಬಣ್ಣ ಹಚ್ಚುವುದಕ್ಕೆ ಶುರುಮಾಡಿದ ನಯನತಾರಾ ಈಗ ಕಾಲಿವುಡ್ ನ ಬಹುಬೇಡಿಕೆಯ ನಟಿ.

'ರಾಜಾ ರಾಣಿ', 'ಆರಂಭಂ', 'ಅನಾಮಿಕ', 'ಮಾಸ್', 'ಥನಿ ಓರುವನ್' ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡುತ್ತಿರುವ ನಯನತಾರಾ ಹಿರಿಮೆಗೆ ಇದೀಗ ಮತ್ತೊಂದು ಗರಿ ಸಿಕ್ಕಿದೆ.

nayantara

ವಿಕ್ರಂ ಅಭಿನಯಿಸಲಿರುವ ಹೊಸ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್ ಆಗಿರುವ ನಯನತಾರಾ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 3 ಕೋಟಿ.!

ವರದಿಗಳ ಪ್ರಕಾರ, ತಮ್ಮ ಮುಂದಿನ ಚಿತ್ರಕ್ಕೆ 3 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ತ್ರಿಷಾ ಕೃಷ್ಣನ್ ಮತ್ತು ಅನುಶ್ಕಾ ಶೆಟ್ಟಿಯನ್ನ ಹಿಂದಕ್ಕೆ ತಳ್ಳಿ 'ದಕ್ಷಿಣ ಭಾರತದ ಅತ್ಯಂತ ದುಬಾರಿ ನಟಿ'ಯಾಗಿದ್ದಾರೆ ನಯನತಾರಾ. [ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?]

ವಿಕ್ರಂ ಜೊತೆಗಿನ ಸಿನಿಮಾದೊಂದಿಗೆ ನಯನತಾರಾ ಕೈಯಲ್ಲಿನ್ನೂ ಮೂರ್ನಾಲ್ಕು ಚಿತ್ರಗಳಿವೆ. ಸದ್ಯಕ್ಕೆ ರೋಮ್ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ನಯನತಾರಾ ಭಾರತಕ್ಕೆ ವಾಪಸ್ ಆದ ತಕ್ಷಣ ಶೂಟಿಂಗ್ ಗೆ ಹಾಜರಾಗುತ್ತಾರೆ. (ಏಜೆನ್ಸೀಸ್)

English summary
According to the reports, Actress Nayantara is currently South India's highest paid Actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada