For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ, ಅನಿಕಾ ಬಿಚ್ಚಿಟ್ಟ ಸೆಲೆಬ್ರಿಟಿಗಳ ನಂಟು!

  |

  ಸಿನಿಮಾ ಜಗತ್ತಿನಲ್ಲಿ ಡ್ರಗ್ಸ್ ಬಳಕೆಯಾಗುತ್ತಿದೆ ಎಂಬ ಆರೋಪ ಅನೇಕ ಬಾರಿ ಕೇಳಿ ಬಂದಿದೆ. ಈ ಹಿಂದೆ ಟಾಲಿವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಹಿಂದೆ ಬಿದ್ದಿದ್ದ ಪೊಲೀಸ್ ಅಧಿಕಾರಿಗಳು ಸ್ಟಾರ್ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದ್ದರು. ಬಾಲಿವುಡ್‌ನ ಹಲವು ಸ್ಟಾರ್‌ಗಳ ಮೇಲೆ ಡ್ರಗ್ಸ್ ಸೇವನೆ ಆರೋಪ ಇದೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಇದೀಗ, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂಬ ವಿಚಾರ ಬೆಳಕಿದೆ ಬಂದಿದೆ. ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳಿಂದ ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿದೆ.

  ಟಾಲಿವುಡ್ ಡ್ರಗ್ ಮಾಫಿಯಾ: ರವಿತೇಜಾ ಸೇರಿ ಎಲ್ಲಾ ಸ್ಟಾರ್ ಗಳಿಗೂ ಕ್ಲೀನ್ ಚಿಟ್

  ಈ ದಾಳಿಯಲ್ಲಿ ಅಕ್ರಮವಾಗಿ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ ಅನಿಕಾ, ಅನೂಪ್​, ರಾಜೇಶ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 180 LSD, 145 MDMA ಮಾದಕ ಮಾತ್ರೆಗಳು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ ಸಿನಿಮಾ ಇಂಡಸ್ಟ್ರಿಯ ಅನೇಕರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ವಿಷಯ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದೆ. ಮುಂದೆ ಓದಿ....

  ಯಾರು ಆ ಸ್ಯಾಂಡಲ್‌ವುಡ್ ಸ್ಟಾರ್ಸ್?

  ಯಾರು ಆ ಸ್ಯಾಂಡಲ್‌ವುಡ್ ಸ್ಟಾರ್ಸ್?

  ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿರುವ ಡ್ರಗ್ಸ್ ದಂಧೆಗೆ ಅನಿತಾ ಎಂಬ ಮಹಿಳೆ ರೂವಾರಿ ಎಂದು ತಿಳಿದು ಬಂದಿದೆ. ಆ ಮಹಿಳೆಯೇ ಇಂಡಸ್ಟ್ರಿಯಲ್ಲಿರುವ ನಟ, ನಟಿಯರು ಹಾಗೂ ಸಂಗೀತ ನಿರ್ದೇಶಕರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

  ಡ್ರಗ್ಸ್ ಪ್ರಿಯರಿಗೆ ಢವಢವ

  ಡ್ರಗ್ಸ್ ಪ್ರಿಯರಿಗೆ ಢವಢವ

  ಬಂಧಿತ ಆರೋಪಿ ಅನಿಕಾ ವಿಚಾರಣೆ ವೇಳೆ ಸಿನಿಮಾರಂಗ ಹಾಗೂ ಕಿರುತೆರೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಡ್ರಗ್ಸ್ ಸರಬರಾಜು ಮಾಡಿರುವ ಬಗ್ಗೆ ಎನ್‌ಸಿಬಿ ಅಧಿಕಾರಿಗಳ ಬಳಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅನಿಕಾ ಅವರ ಮಾಹಿತಿಯ ಪ್ರಕಾರ ಈಗ ಆ ಸ್ಯಾಂಡಲ್‌ವುಡ್ ಸ್ಟಾರ್ಸ್‌ಗಳ ವಿಚಾರಣೆಗೆ ಮುಂದಾಗುವ ಸಾಧ್ಯತೆ ಇದೆ ಎಂದು ಎನ್‌ಸಿಬಿ ಮೂಲಗಳ ತಿಳಿಸಿವೆ.

  ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಲಿಂಕ್

  ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಲಿಂಕ್

  ಡ್ರಗ್ಸ್ ಡೀಲರ್ ಅನಿಕಾ ಅವರ ಪತಿ ರೆಹಮಾನ್ ಈ ಡ್ರಗ್ಸ್ ದಂಧೆಯ ಮಾಸ್ಟರ್ ಮೈಂಡ್. ಮೂಲತಃ ನೈಜಿರೀಯಾ ಪ್ರಜೆಯಾದ ರೆಹಮಾನ್ ಪ್ರಸ್ತುತ ಮುಂಬೈನಲ್ಲಿ ವಾಸವಾಗಿದ್ದಾನೆ. ಅಲ್ಲಿಂದ ಬೆಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು. ಅದನ್ನು ಅನಿಕಾ ಕನ್ನಡದ ನಟ-ನಟಿ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಸಪ್ಲೈ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಸತ್ಯಾಂಶ ಹೊರಬಿದ್ದಿದೆ.

  ಹೆಸರುಗಳು ಬಹಿರಂಗವಾಗಿಲ್ಲ

  ಹೆಸರುಗಳು ಬಹಿರಂಗವಾಗಿಲ್ಲ

  ಕಿಂಗ್‌ಪಿನ್ ಅನಿಕಾ ಕನ್ನಡದ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಸಿನಿಮಾ ಮಂದಿಯ ಜೊತೆ ಸಂಪರ್ಕ ಹೊಂದಿದ್ದರು. ಲಾಕ್‌ಡೌನ್‌ ವೇಳೆಯೂ ಹೆಚ್ಚು ಡ್ರಗ್ಸ್ ಸರಬರಾಜು ಮಾಡಿದ್ದಾರೆ. ಈ ಹಿನ್ನೆಲೆ ಅನಿಕಾ ಜೊತೆ ಸಂಪರ್ಕದಲ್ಲಿದ್ದ ಸೆಲೆಬ್ರಿಟಿಗಳ ಮಾಹಿತಿ ಸಹ ಎನ್‌ಸಿಬಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  English summary
  Narcotics Control Bureau busts drug racket in Bengaluru. Sandalwood actors, musicians suspected.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X