For Quick Alerts
  ALLOW NOTIFICATIONS  
  For Daily Alerts

  20 ತಾರೆಯರ ಪಟ್ಟಿ ಸಿದ್ಧ: ಟಾಲಿವುಡ್ ಮಾದರಿಯಲ್ಲಿ 'ಡ್ರಗ್ಸ್' ಕುರಿತು ವಿಚಾರಣೆ!

  |

  ಮೂರು ವರ್ಷಗಳ ಹಿಂದೆ ಟಾಲಿವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಡ್ರಗ್ಸ್ ಸೇವನೆ, ಡ್ರಗ್ಸ್ ಬಳಕೆ ಹಾಗೂ ಡ್ರಗ್ಸ್ ಡೀಲರ್‌ಗಳ ಜೊತೆ ಒಡನಾಟದ ಆರೋಪದ ಮೇಲೆ ತೆಲುಗು ಚಿತ್ರರಂಗದ ಹಲವರನ್ನು ಎಸ್‌ಐಟಿ ತಂಡ ವಿಚಾರಣೆಗೆ ಒಳಪಡಿಸಿತ್ತು.

  Upendra Reaction On Sandalwood Drug Mafia | Filmibeat Kannada

  ಖ್ಯಾತ ನಟ ರವಿತೇಜಾ ಹಾಗೂ ಅವರ ಸಹೋದರ, ನಿರ್ದೇಶಕ ಪೂರಿ ಜಗನ್ನಾಥ್, ನಟಿ ಚಾರ್ಮಿ, ಗಾಯಕಿ ಗೀತಾ ಮಾಧುರಿ ಸೇರಿದಂತೆ ಖ್ಯಾತ ನಾಮರ ಹೆಸರು ಡ್ರಗ್ಸ್ ಜಾಲದಲ್ಲಿ ಚರ್ಚೆಗೆ ಬಂದಿತ್ತು. ಇವರಲ್ಲಿ ಕೆಲವರು ಪೊಲೀಸ್ ವಿಚಾರಣೆಗೆ ಸಹ ಒಳಪಟ್ಟಿದ್ದರು.

  ಡ್ರಗ್ಸ್ ಮಾಫಿಯಾ ಬಯಲಾಗಲು ರವಿತೇಜ ಸಹೋದರನ ಸಾವು ಕಾರಣ.!ಡ್ರಗ್ಸ್ ಮಾಫಿಯಾ ಬಯಲಾಗಲು ರವಿತೇಜ ಸಹೋದರನ ಸಾವು ಕಾರಣ.!

  ಇದೀಗ, ಇಂತಹದ್ದೆ ಘಟನೆ ಸ್ಯಾಂಡಲ್‌ವುಡ್‌ನಲ್ಲಿ ಮರುಕಳಿಸಬಹುದು ಎಂಬ ಸುಳಿವು ಸಿಕ್ಕಿದೆ. ಡ್ರಗ್ಸ್ ಡೀಲರ್ ಬಿಚ್ಚಿಟ್ಟ ಮಾಹಿತಿ ಪ್ರಕಾರ, ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗೆ ಸಂಬಂಧಿಸಿದ 20 ಜನರ ಪಟ್ಟಿಯನ್ನು ಎನ್‌ಸಿಬಿ (Narcotics Control Bureau-ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ತಂಡ ಸಿದ್ಧಪಡಿಸಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

  ಅನಿಕಾ ಬಾಯ್ಬಿಟ್ಟ ಹೆಸರುಗಳು ಯಾವುದು?

  ಅನಿಕಾ ಬಾಯ್ಬಿಟ್ಟ ಹೆಸರುಗಳು ಯಾವುದು?

  ಬೆಂಗಳೂರಿನಲ್ಲಿ ಡ್ರಗ್ಸ್ ಡೀಲರ್ ಅನಿಕಾಳನ್ನು ಎನ್‌ಸಿಬಿ ತಂಡ ಬಂಧಿಸಿತ್ತು. ವಿಚಾರಣೆಗೆ ಒಳಪಡಿಸಿದ ನಂತರ ಕಿರುತೆರೆ ಹಾಗೂ ಸಿನಿಮಾರಂಗದವರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಈಕೆಯ ಜೊತೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂದು ಮಾಹಿತಿ ಪಡೆದಿದ್ದು, ಸುಮಾರು 20 ತಾರೆಯರ ಪಟ್ಟಿಯನ್ನು ಎನ್‌ಸಿಬಿ ತಂಡ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾರ ಹೆಸರು ಸಹ ಬಹಿರಂಗವಾಗಿಲ್ಲ.

  ಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರುಡ್ರಗ್ಸ್ ಮಾಫಿಯಾದಲ್ಲಿ 15 ಟಾಲಿವುಡ್ ತಾರೆಯರ ಹೆಸರು

  ವಿಚಾರಣೆಗೆ ನೋಟಿಸ್ ಕಳಿಸುವ ಸಾಧ್ಯತೆ!

  ವಿಚಾರಣೆಗೆ ನೋಟಿಸ್ ಕಳಿಸುವ ಸಾಧ್ಯತೆ!

  ಇಪತ್ತು ಜನರ ಪಟ್ಟಿಯಲ್ಲಿ ಮೂವರು ಖ್ಯಾತ ನಟಿಯರಿದ್ದು, ಮೂವರು ಧಾರಾವಾಹಿ ಕಲಾವಿದರು, ಓರ್ವ ಸಂಗೀತ ನಿರ್ದೇಶಕ, ಹಾಗೂ ನಾಲ್ವರು ಗಣ್ಯ ವ್ಯಕ್ತಿಗಳ ಮಕ್ಕಳು ಸಹ ಇದ್ದಾರೆ ಎಂದು ಹೇಳಲಾಗಿದೆ. ಇಷ್ಟು ಜನಕ್ಕೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಲು ಎನ್‌ಸಿಬಿ ನೋಟಿಸ್ ಕಳಿಸುವ ಸಾಧ್ಯತೆ ಹೆಚ್ಚಿದೆ.

  ಇಂದ್ರಜಿತ್‌ಗೆ ಸಿಸಿಬಿ ನೋಟಿಸ್!

  ಇಂದ್ರಜಿತ್‌ಗೆ ಸಿಸಿಬಿ ನೋಟಿಸ್!

  ಡ್ರಗ್ಸ್ ಜಾಲದೊಂದಿಗೆ ಚಿತ್ರರಂಗದ ಕೆಲವರಿಗೆ ನಂಟಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ''ನನ್ನ ಬಳಿ ವಿವರ ಇದೆ, ನನಗೆ ರಕ್ಷಣೆ ನೀಡಿದ್ರೆ ಎಲ್ಲವೂ ಹೇಳ್ತೇನೆ'' ಎಂದಿದ್ದರು. ಈ ಹಿನ್ನೆಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

  ಎನ್‌ಸಿಬಿ ಬೇರೆ, ಸಿಸಿಬಿ ಬೇರೆ ತನಿಖೆ

  ಎನ್‌ಸಿಬಿ ಬೇರೆ, ಸಿಸಿಬಿ ಬೇರೆ ತನಿಖೆ

  ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್‌ವುಡ್ ತಾರೆಯರು ಭಾಗಿಯಾಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಎನ್‌ಸಿಬಿ (ದೆಹಲಿ ತನಿಖೆ ತಂಡ) ತನಿಖೆ ಮಾಡುತ್ತಿದೆ. ಆರೋಪಿ ಅನಿಕಾಳನ್ನು ಬಂಧಿಸಿರುವುದು ಸಹ ಎನ್‌ಸಿಬಿ. ಎನ್‌ಸಿಬಿ ಅಧಿಕಾರಿಗಳಿಗೆ ಅಗತ್ಯಬಿದ್ದರೆ ಸಹಕರಿಸುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಮತ್ತೊಂದೆಡೆ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

  English summary
  Sandalwood Drugs mafia: Narcotics Control Bureau officer listed 20 celebrities for Enquiry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X