»   » ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ

ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ

Posted By:
Subscribe to Filmibeat Kannada

ನಿರ್ದೇಶಕ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರು ಸಖತ್ ಆಗಿ ಧಮ್ ಎಳೆಯುವ ಫೊಟೋಗಳು ಎಲ್ಲೆಡೆ ಭಾರಿ ಸುದ್ದಿ ಮಾಡಿದ್ದವು. ಜೊತೆಗೆ ಸಿಗರೇಟು ಸೇದುತ್ತಾ ಹರಿಪ್ರಿಯಾ ಅವರು ತುಂಡುಡುಗೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ವಿಚಾರ ಕೂಡ ನಿಮಗೆ ತಿಳಿದಿದೆ.

ಆದರೆ ಪ್ರತೀ ಶಾಟ್ ಗೊಂದರಂತೆ ದಿನಕ್ಕೆ ಸುಮಾರು 5 ರಿಂದ 10 ಸಿಗರೇಟು ಸೇದಿರುವ ನಟಿ ಹರಿಪ್ರಿಯಾ ಅವರ ಪಾಡು ಏನಾಗಿದೆ ಅಂತ ಗೊತ್ತಾ?.[ಹಾಟ್ ಲುಕ್ ನಲ್ಲಿ ಪಡ್ಡೆಹೈಕಳ ನಿದ್ದೆಗೆಡಿಸುವ, ನೀರ್ ದೋಸೆ' ಬೆಡಗಿ]

'Neer Dose' Actress Haripriya gave advice to her fans to don't smoke

ಅದಕ್ಕೆ ಉತ್ತರವನ್ನು ಕೂಡ ನಟಿ ಹರಿಪ್ರಿಯಾ ಅವರು ಒದಗಿಸಿದ್ದಾರೆ. 'ಚಿತ್ರದಲ್ಲಿ ನನ್ನದು ವೈಶ್ಯೆ ಕುಮುದಾ ಅನ್ನೋ ಪಾತ್ರ. ಆದ್ದರಿಂದ ಸಿಗರೇಟು ಸೇದೋದು ಮತ್ತು ಡ್ರಿಂಕ್ಸ್ ಮಾಡೋದು ಎಲ್ಲಾ ಸಹಜ. ಇದೇ ಕಾರಣಕ್ಕೆ ನಾನು ಸ್ಮೋಕಿಂಗ್ ಮಾಡೋದನ್ನು ಕಲಿಯಬೇಕಾಯಿತು.

'ನನಗೆ ಸಿಗರೇಟು ಸೇದುವವರನ್ನು ಕಂಡರೆ ಆಗುವುದಿಲ್ಲ, ಆದರೆ 'ನೀರ್ ದೋಸೆ' ಚಿತ್ರಕ್ಕಾಗಿ ನಾನೇ ಸಿಗರೇಟು ಸೇದಬೇಕಾಯಿತು. ಸುಮಾರು ಎರಡು ತಿಂಗಳ ಹಿಂದೆ ಮೊದಲ ಬಾರಿಗೆ ಸಿಗರೇಟ್ ಸೇದಿದೆ. ತದನಂತರದಿಂದ ನನಗೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಯಿತು.[ಚಿತ್ರಗಳು : 'ನೀರ್ ದೋಸೆ' ಸೆಟ್ ನಲ್ಲಿ ಮೋಜು-ಮಸ್ತಿ]

'Neer Dose' Actress Haripriya gave advice to her fans to don't smoke

'ಎದೆ ಉರಿಯುವುದು, ವಿಪರೀತ ತಲೆನೋವು ಬರುತ್ತಿದೆ. ಅಷ್ಟೆ ಅಲ್ಲ, ಸರಾಗವಾಗಿ ಉಸಿರಾಡಲು ತುಂಬಾ ಕಷ್ಟ ಪಡಬೇಕಾಗುತ್ತದೆ'. ಎಂದು ಹರಿಪ್ರಿಯಾ ನುಡಿಯುತ್ತಾರೆ.

ಮಾತ್ರವಲ್ಲದೇ ಸಿಗರೇಟ್ ಸೇದುವವರಿಗೆ ಅದನ್ನು ಬಿಟ್ಟು ಬಿಡಿ ಅಂತ ಸಂದೇಶವನ್ನು ಕೂಡ ನೀಡಿದ್ದಾರೆ. ಕುಟುಂಬವನ್ನು ಪ್ರೀತಿಸುವ ಪ್ರತಿಯೊಬ್ಬ ಸದಸ್ಯನೂ ದಯವಿಟ್ಟು ಸಿಗರೇಟ್ ಸೇದಬೇಡಿ ಎಂದು ಸಲಹೆ ನೀಡಿದ್ದಾರೆ.

English summary
Kannada Actress Haripriya gave advice to her fans to don't smoke Its Injurious to Health.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada