For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ' ಅಂದ್ರೇನು, ಅವರಿವರು ಕಂಡಂತೆ 'ನೀರ್ ದೋಸೆ'

  By Suneetha
  |

  ಬಹಳ ದಿನಗಳಿಂದ ಬಿಸಿಬಿಸಿ 'ನೀರ್ ದೋಸೆ' ತಿನ್ನಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ, ನಿರ್ದೇಶಕ ವಿಜಯ್ ಪ್ರಸಾದ್ ಅವರು ಹೊಟ್ಟೆ ಬಿರಿಯುವಷ್ಟು ಫಲಹಾರ ನೀಡಿದ್ದಾರೆ.

  ಇದೀಗ 'ನೀರ್ ದೋಸೆ' ಚಿತ್ರದ ಆಡಿಯೋ, ಟ್ರೈಲರ್ ಮತ್ತು ಮೇಕಿಂಗ್ ವಿಡಿಯೋ ಅಂತ ಎಲ್ಲವನ್ನೂ ಒಟ್ಟಿಗೆ ಬಿಡುಗಡೆ ಮಾಡಿರುವ ಚಿತ್ರತಂಡ, ಅಭಿಮಾನಿಗಳಿಗೆ 'ದೋಸೆ' ಜೊತೆಗೆ ನೆಂಚಿಕೊಳ್ಳಲು ಕಾಯಿ ಚಟ್ನಿ ಮತ್ತು ಗರಿಗರಿ ತುಪ್ಪ ನೀಡಿದಂತಾಗಿದೆ.[ಚಿತ್ರಗಳು : 'ನೀರ್ ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಹಸಿ ಬಿಸಿ]

  ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ಹಿರಿಯ ನಟ ದತ್ತಣ್ಣ, ಸುಮನ ರಂಗನಾಥ್ ಮತ್ತು ಹರಿಪ್ರಿಯಾ ಅವರ ಕಾಂಬಿನೇಷನ್ ಈ ಚಿತ್ರದಲ್ಲಿ ಸಖತ್ ಆಗಿ ಮೂಡಿಬಂದಿದ್ದು, ನೋವು, ನಗು, ಹಾಸ್ಯ, ಸಂದೇಶ ಎಲ್ಲವೂ 'ನೀರ್ ದೋಸೆ'ಯಲ್ಲಿ ಮಿಳಿತವಾಗಿದೆ.

  ಅಷ್ಟಕ್ಕೂ ಈ 'ನೀರ್ ದೋಸೆ'ಯ ಕಥೆ ಏನು?, ಇಡೀ ಚಿತ್ರತಂಡ ಕಂಡಂತೆ 'ನೀರ್ ದೋಸೆ' ಅಂದ್ರೆ ಏನು?. ಎಲ್ಲವನ್ನೂ ನಾವು ನಿಮಗೆ ಬಿಡಿಸಿ ಹೇಳ್ತೀವಿ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

  ನಿರ್ದೇಶಕ ವಿಜಯ್ ಪ್ರಕಾರ 'ನೀರ್ ದೋಸೆ'

  ನಿರ್ದೇಶಕ ವಿಜಯ್ ಪ್ರಕಾರ 'ನೀರ್ ದೋಸೆ'

  ''ನೀರ್ ದೋಸೆ' ಬಗ್ಗೆ ಹೇಳ್ಬೇಕು ಅಂದ್ರೆ, ಬದುಕಿನ ಸಿದ್ದ ಸೂತ್ರಗಳನ್ನು ಪಕ್ಕಕ್ಕಿಟ್ಟು, ತಮ್ಮದೇ ಆದ ಧಾಟಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಪರಿ. ನನ್ನಲ್ಲಿದ್ದ ಒಂದಷ್ಟು ತವಕಗಳು ಹಾಗೆ ನಾನು ಪ್ರಯಾಣ ಮಾಡಿದಂತಹ ಹಾದಿ, ಬದುಕನ್ನು ನೋಡುವ ಬಗೆ ಮತ್ತು ಎಂತಹ ವಿಷಮ ಸ್ಥಿತಿಯಲ್ಲಿ ಕೂಡ ಪ್ರತಿಯೊಂದು ಕ್ಷಣಗಳನ್ನ ಆತ್ಮವಿಶ್ವಾಸದಿಂದ ಸ್ವೀಕರಿಸುವ ಪರಿ. ಈ ಎಲ್ಲಾ ಹೂರಣವನ್ನು ಒಂದು ಕಥಾ ಚೌಕಟ್ಟಿನಲ್ಲಿ, ನನ್ನದೇ ಆದ ಚೇಷ್ಟೆ ಮೂಲಕ ಹೇಳಿದ್ದೇನೆ. ಅದೇ 'ನೀರ್ ದೋಸೆ'' ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಅವರು.[ಬಿಸಿಬಿಸಿ 'ನೀರ್ ದೋಸೆ'ಯ ಆಡಿಯೋ ರಿಲೀಸ್ ಗೆ ಕೌಂಟ್ ಡೌನ್ ಶುರು]

  ನವರಸ ನಾಯಕ ಜಗ್ಗೇಶ್

  ನವರಸ ನಾಯಕ ಜಗ್ಗೇಶ್

  "ನಾನು ಈ ಚಿತ್ರ ಮಾಡೋದಕ್ಕೆ ಒಪ್ಪಿದ್ದು ಯಾಕೆ ಅಂದ್ರೆ, ಒಂದು ನನಗೆ ನಿರ್ದೇಶಕರ ಮೇಲೆ ಇದ್ದಂತಹ ನಂಬಿಕೆ" ಎನ್ನುತ್ತಾರೆ ನಟ ಜಗ್ಗೇಶ್ ಅವರು. ಈ ಚಿತ್ರದಲ್ಲಿ ನಟ ಜಗ್ಗೇಶ್ ಅವರು ಹೆಣ ಸಾಗಿಸೋ ವ್ಯಾನ್ ಡ್ರೈವರ್ 'ಜಗ್ಗು' ಪಾತ್ರ ವಹಿಸಿದ್ದು, ತಮ್ಮ ಅಭಿಮಾನಿಗಳಿಗೆ ಡೈಲಾಗ್ ಮೂಲಕಾನೇ ಈ ಬಾರಿ ಸಖತ್ ಮನರಂಜನೆ ನೀಡಿದ್ದಾರೆ.

  ನಟಿ ಹರಿಪ್ರಿಯಾ

  ನಟಿ ಹರಿಪ್ರಿಯಾ

  "ಮೊದಲು ನಾನು ಈ ಚಿತ್ರದಲ್ಲಿ ನಟಿಸಬೇಕು ಅಂತ ಕೇಳಿಕೊಂಡಾಗ, ಚರ್ಚೆ ಮಾಡಿದಾಗ, ಕಥೆ ಕೇಳಿದಾಗ, ಬೇಡ-ಬೇಡ ಅಂತ ಅನಿಸಿತು" ಅಂತಾರೆ ನಟಿ ಹರಿಪ್ರಿಯಾ ಅವರು. ಈ ಚಿತ್ರದಲ್ಲಿ ಹರಿಪ್ರಿಯಾ ಅವರು ಇಲ್ಲಿಯವರೆಗೆ ಕಾಣಿಸಿಕೊಳ್ಳದ ಅವತಾರದಲ್ಲಿ, ಸಖತ್ ಹಾಟ್ ಅಂಡ್ ಬೋಲ್ಡ್ ಲುಕ್ ನಲ್ಲಿ ಕಾಲ್ ಗರ್ಲ್ 'ಕುಮುದಾ' ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

  ಹಿರಿಯ ನಟ ದತ್ತಣ್ಣ

  ಹಿರಿಯ ನಟ ದತ್ತಣ್ಣ

  "ಇದು ನಿಜವಾಗ್ಲೂ ಕಥೆಯಾಧರಿತ ಸಿನಿಮಾ ಅಲ್ಲ, ವಿಧ-ವಿಧದ ಘಟನೆಗಳು, ಆ ಘಟನೆಗಳನ್ನೆಲ್ಲಾ ಒಂದಕ್ಕೊಂದು ಸೇರಿಸಿಕೊಂಡು ಅದ್ಭುತವಾದ ಕೊಲಾಜ್ ಮಾಡಿದ್ದಾರೆ.' ಎಂದಿದ್ದಾರೆ ನಟ ದತ್ತಣ್ಣ ಅವರು. ಈ ಚಿತ್ರದಲ್ಲಿ ದತ್ತಣ್ಣ ಅವರು ಶಾನುಭೋಗರಾಗಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗೆ ಸಖತ್ ಆಗಿ ಟಾಂಗ್ ಕೊಟ್ಟಿದ್ದಾರೆ.

  ಶಾರದಾಮಣಿ ಸುಮನಾ ರಂಗನಾಥ್

  ಶಾರದಾಮಣಿ ಸುಮನಾ ರಂಗನಾಥ್

  ನಟಿ ಸುಮನಾ ರಂಗನಾಥ್ ಅವರು ಈ ಚಿತ್ರದಲ್ಲಿ ಶಾರದಾಮಣಿ ಪಾತ್ರ ವಹಿಸಿದ್ದು, ಜಗ್ಗೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸುಮನಾ ಅವರು ಮಾಡಿದ ಪಾತ್ರ ಅವರಿಗೆ ತುಂಬಾ ಹಿಡಿಸಿ, ಇಷ್ಟಪಟ್ಟು ಮಾಡಿದ್ದೇನೆ' ಎನ್ನುತ್ತಾರೆ.

  ಸಂಗೀತ ಸೂಪರ್ ಹಿಟ್

  ಸಂಗೀತ ಸೂಪರ್ ಹಿಟ್

  ಅಂದಹಾಗೆ ಚಿತ್ರದ ಆಡಿಯೋ ಕೂಡ ಬಿಡುಗಡೆ ಆಗಿದ್ದು, ಸಾಕಷ್ಟು ಮುದು ಕೊಡುವ ಹಾಡುಗಳು ಈ ಚಿತ್ರದಲ್ಲಿವೆ. 'ಹೋಗಿ ಬಾ ಬೆಳಕೇ..ಹೋಗಿ ಬಾ..ಎದೆ ಹಾಲು ಉಣಿಸದೆ ತಾಯಾದ ಬೆಳಕೆ, ಎದೆ ನೋವಾ ಉಗುಳದೆ ಮಗುವಾದ ಬೆಳಕೆ...ಅನ್ನೋ ಹಾಡು ಖಂಡಿತ ಎಲ್ಲರ ಕಣ್ಣಲ್ಲಿ ನೀರುಕ್ಕಿಸುತ್ತದೆ. 'ನಗ್ತಾ ಇದ್ರೆ ಬಾಡೂಟ, ಅಳ್ತಾ ಇದೆ ಜೂಟಾಟ ಲೈಫು ಇಷ್ಟೆ ಜಗ್ಗೇಶಾ.. ನೀರ್ ದೋಸೆ ಅನ್ನೋ ಇನ್ನೊಂದು ಕಾಮಿಡಿ ಹಾಡು ಕೂಡ ಸಖತ್ ಆಗಿ ಮೂಡಿಬಂದಿದೆ. ಅಂತೂ ಈ ಬಾರಿ ಮತ್ತೆ ಅನೂಪ್ ಸಿಳೀನ್ ಅವರು ಹಾಡುಗಳ ಮೂಲಕ ಸಂಗೀತ ಪ್ರಿಯರ ಮನಗೆದ್ದಿದ್ದಾರೆ.

  ಮೇಕಿಂಗ್ ವಿಡಿಯೋ

  ಮೇಕಿಂಗ್ ವಿಡಿಯೋ

  ಚಿತ್ರದ ಬಗ್ಗೆ ಇಡೀ ಚಿತ್ರತಂಡ ಹಾಗೂ ಚಿತ್ರದ ತಾರಾಗಣ ಅನುಭವ ಹಂಚಿಕೊಂಡಿದ್ದು, ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ...

  English summary
  Kannada movie 'Neer Dose' trailer and making video released. 'Neer Dose' movie team speaks about 'Neer Dose'. Kannada Actor Jaggesh, Actreess Haripriya, Actress Suman Ranganath in the lead role. The movie is directed by 'Sidlingu' fame Vijaya Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X